Get Updates
Get notified of breaking news, exclusive insights, and must-see stories!

ಸರ್ಕಾರಿ ನೌಕರರ ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ ಸಲ್ಲಿಕೆ ಹೇಗೆ?

ಬೆಂಗಳೂರು, ಡಿಸೆಂಬರ್ 12; ಕರ್ನಾಟಕದ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರು ವಿವಿಧ ಆರೋಗ್ಯ ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ. ಅವರು ಚಿಕಿತ್ಸೆ ಪಡೆದಾಗ ವೈದ್ಯಕೀಯ ಬಿಲ್ ಮರು ಪಾವತಿ ಮಾಡುತ್ತಾರೆ. ಇದಕ್ಕಾಗಿಯೇ ಹಲವಾರು ನಿಯಮಗಳಿವೆ.

ಖಜಾನೆ ಇಲಾಖೆ ಈಗ ಸುತ್ತೋಲೆಯೊಂದನ್ನು ಹೊರಡಿಸಿದೆ. ಅಧಿಕಾರಿ/ ನೌಕರರಿಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ಲುಗಳನ್ನು ಮೇಲು ಸಹಿಗಾಗಿ ಸಲ್ಲಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದೆ. ಈ ಕುರಿತು ಖಜಾನೆ ಇಲಾಖೆಯ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿದ್ದಾರೆ.

Government Employee Medical Bill Reimbursement New Circular

ಅಧಿಕಾರಿ/ ನೌಕರರು ಮುಂದಿನ ಬಾರಿ ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ಲುಗಳನ್ನು ಮೇಲು ಸಹಿಗಾಗಿ ಸಲ್ಲಿಸುವ ಸಂದರ್ಭದಲ್ಲಿ ಈ ಕ್ರಮಗಳ ಬಗ್ಗೆ ಮಾಹಿತಿ ತಿಳಿದಿರುವುದು ಅವಶ್ಯವಾಗಿದೆ.

ಸುತ್ತೋಲೆಯ ವಿವರಗಳು; ರಾಜ್ಯದ ಎಲ್ಲಾ ಜಿಲ್ಲಾ/ ಉಪ ಖನಾಜೆಗಳ ಅಧಿಕಾರಿ/ ನೌಕರರಿಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ಲುಗಳನ್ನು ಸಲ್ಲಿಸುವಾಗ ಅಗತ್ಯ ನಮೂನೆಗಳು, ಮೊಹರು ಸಹಿ ಇಲ್ಲದ ಹಾಗೂ ಇನ್ನೂ ಅನೇಕ ರೀತಿಯ ವಿಚಾರಗಳನ್ನು ನಿಯಮಾನುಸಾರ ಪರಿಶೀಲಿಸದೆ ಯತಾವತ್ತಾಗಿ ಪ್ರಸ್ತಾವನೆಗಳನ್ನು ಆಯುಕ್ತಾಲಯಕ್ಕೆ ಸಲ್ಲಿಸುತ್ತಿರುವುದು ಕಂಡುಬಂದಿದೆ ಎಂದು ಹೇಳಿದೆ.

ಈಗಾಗಲೇ ಅನೇಕ ಬಾರಿ ಸುತ್ತೋಲೆಗಳನ್ನು ಹೊರಡಿಸಿದ್ದರೂ ಸಹ ಅದೇ ರೀತಿಯಲ್ಲಿ ಮುಂದುವರೆಯುತ್ತಿರುವುದು ಕಂಡು ಬಂದಿರುತ್ತದೆ. ಇನ್ನು ಮುಂದೆ ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ಲುಗಳ ಮೇಲು ಸಹಿ ಹಾಗೂ ಅನುದಾನ ಬಿಡುಗಡೆಗೆ ಪ್ರಸ್ತಾವನೆಯನ್ನು ಆಯುಕ್ತಾಲಯಕ್ಕೆ ಸಲ್ಲಿಸುವ ಮೊದಲು ಆಕ್ಷೇಪಣೆಗೆ ಅವಕಾಶ ನೀಡದಂತೆ ಈ ಕೆಳಕಂಡ ಅಂಶಗಳನ್ನು ತಮ್ಮ ಹಂತದಲ್ಲಿಯೇ ಕೂಲಂಕುಶವಾಗಿ ಪರಿಶೀಲಿಸಿ ಬಿಲ್ಲುಗಳನ್ನು ದೃಢೀಕರಿಸಿ ಸಲ್ಲಿಸಲು ಸೂಚಿಸಿದೆ ಎಂದು ತಿಳಿಸಿದೆ.

* ನಮೂನೆ-ಬಿಯಲಿ ಅವಶ್ಯಕತೆ ಪ್ರಮಾಣ ಪತ್ರ/ ಪ್ರಮಾಣ ಪತ್ರದಲ್ಲಿ ಕೋರಿದ ಮೊತ್ತ/ ಔಷಧಗಳ ವಿವರ/ ವೈದರ ಸಹಿ/ ಆಸ್ಪತ್ರೆಯ ಮೊಹರು ಚಿಕಿತ್ಸೆ ಪಡೆದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಮೇಲು ಸಹಿ (Signature of the Hospitals medical director) ಹಾಕಿರುವುದು.

* ನಮೂನೆ-ಸಿಯ ಪ್ರಮಾಣ ಪತ್ರದಲ್ಲಿ ಸಂಬಳದ ವಿವರ ಕಾರ್ಯ ನಿರ್ವಹಿಸುತ್ತಿರುವ ಕಛೇರಿ ಮುಖ್ಯಸ್ಥರ ಸಹಿ ಮತ್ತು ಮೊಹರು ಹಾಕಿಸುವುದು.

* ಹೋರರೋಗಿ ಚಿಕಿತ್ಸೆ ಪಡೆದಿದ್ದಲ್ಲಿ ಆಸ್ಪತ್ರೆಯ ಹೊರರೋಗಿ ಚೀಟಿ ಲಗತ್ತಿಸುವುದು

* ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದಲ್ಲಿ ಬಿಡುಗಡೆ ಸಾರಂಶ ಪತ್ರ ( Discharge Summary) ಸಲ್ಲಿಸುವುದು

* ವೈದ್ಯರ ಸಲಹ ಚೀಟಿಯಲಿ, ಔಷಧದ ಪ್ರಮಾಣ ವೃದ್ಯರ ಸಹಿ/ ಆಸ್ಪತ್ರೆಯ ಮೊಹರು ಇರಬೇಕು. ಪ್ರಯೋಗಾಲಯದ ವರದಿ (ಇತರೆ ತಪಾಸಣೆಯ ವಿವರಣೆ ಸಲ್ಲಿಸತಕ್ಕದ್ದು.

* ಆಸ್ಪತ್ರೆಯಿಂದ ಪಡೆದ (IP Bill Detail)ಬಿಲ್ ಮೊತ್ತದ ವಿವರ (Final Bill and Detailed Bill) ಸಲಿಸತಕ್ಕದ್ದು

* ವೈದ್ಯರ ಸಲಹೆಯಿಂದ ಪಡೆದ ಔಷಧದ ಅವಧಿ ಪೂರ್ಣಗೊಂಡ ನಂತರ ವೈದ್ಯಕೀಯ ಮರುಪಾವತಿಗಾಗಿ ಅರ್ಜಿ ಸಲ್ಲಿಸತಕ್ಕದ್ದು

* ಸರ್ಕಾರಿ ಆದೇಶ ದಿನಾಂಕ 24/07/2007ರಂತೆ ಹೃದಯ ಸಂಬಂಧಿಕಾಯಿಲೆಗೆ ಅಳವಡಿಸಲಾದ ಸ್ಟಂಟ್ ಪೌಚ್ ಕವರ್ ಸಲ್ಲಿಸತಕ್ಕದ್ದು, (LOT No. and Pouch).

* ಸರ್ಕಾರಿ ನೌಕರರ ತಂದೆ/ ತಾಯಿಯವರ ವಾರ್ಷಿಕ ವರಮಾನ ಪತ್ರ/ ವಂಶವೃಕ್ಷ ಪ್ರಮಾಣ ಪತ್ರವನ್ನು ತಹಸೀಲ್ದಾರ್ ಕಛೇರಿಯಿಂದ ಪಡೆದು ಸಲ್ಲಿಸುವುದು (ಸರ್ಕಾರದ ಆದೇಶ ದಿನಾಂಕ 02/09/2005) ಹಾಗೂ ಜೊತೆಯಲಿ ವಾಸವಾಗಿರುವ ಬಗ್ಗೆ ದೃಢೀಕರಣ ( ಆಧಾರ್ ಕಾರ್ಡ್, ಪಡಿತರ ಚೀಟಿ).

* ಸದರಿ ನೌಕರರ ಹಾಗೂ ಕುಟುಂಬದವರು ಚಿಕಿತ್ಸೆ ಪಡೆಯಲು ವಿಮಾ ಸೌಲಭ್ಯ ಪಡೆದಿರುವರೇ ಎಂಬುದರ ಬಗ್ಗೆ ಹಾಗೂ ವೈದ್ಯಕೀಯ ವೆಚ್ಚ ವಿಮಾ ಸೌಲಭ್ಯದಿಂದ ಪಡೆದಿಲ್ಲವೆಂದು ರೂ. 20 ಛಾಪಾ ಕಾಗದದಲ್ಲಿ ನೋಟರಿಯವರಿಂದ ದೃಢೀಕರಿಸಿ ಪ್ರಮಾಣ ಪತ್ರ ಪಡೆದು ಸಲ್ಲಿಸುವದು

* ಪತಿ/ ಪತ್ನಿ ಸರ್ಕಾರಿ ನೌಕರರೆ/ ಅಲ್ಲವೇ ಎಂಬುದರ ಬಗ್ಗೆ ದೃಢೀಕರಣ ಸಲ್ಲಿಸುವುದು. ಪತಿ/ ಪತ್ನಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಯಿಂದ ವೈದ್ಯಕೀಯ ವೆಚ್ಚದ ಮರುಪಾವತಿ ಆಗಿರುವುದಿಲ್ಲವೆಂಬ ಪ್ರಮಾಣ ಪತ್ರವನ್ನು ಸಲ್ಲಿಸುವುದು

* ಅಪಘಾತವಾದ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿಯಾಗಿರುವುದರ(FIR)ಬಗ್ಗೆ ಮಾಹಿತಿ ಸಲ್ಲಿಸುವುದು.

* ನೌಕರರ ಮಗ/ ಮಗಳ ವೈದ್ಯಕೀಯ ವೆಚ್ಚದ ಮರುಪಾವತಿಗೆ ಮಕ್ಕಳ ವ್ಯಾಸಂಗ ಪ್ರಮಾಣ ಪತ್ರ/ ವಾರ್ಷಿಕ ವರಮಾನ ಪತ್ರ/ ಆಧಾರ್ ಕಾರ್ಡ್ ಸಲ್ಲಿಸುವುದು.

* ಔಷಧಿಗಳನ್ನು ಖರೀದಿಸಿರುವ ರಸೀದಿಯ ಆಸ್ಪತ್ರೆಯ ಮೊಹರಿನೊಂದಿಗೆ ವೈದ್ಯರ ಸಹಿ ಮಾಡಿಸುವುದು ಸಿ, ಮತ್ತು ಡಿ ಗುಂಪಿನ ನೌಕರರು ಸಲ್ಲಿಸಿದ ಬಿಲ್‌ನಲ್ಲಿ ಮಾಹೆಯಾನ ಪಡೆದ ವೈದ್ಯಕೀಯ ಭತ್ಯೆಯನ್ನು
ತಪ್ಪದೆ ಕಟಾಯಿಸುವುದು

* ಚಿಕಿತ್ಸೆ ಪಡೆದ ಆಸ್ಪತ್ರೆಯು ವೈದ್ಯಕೀಯ ವೆಚ್ಚ ಮರುಪಾವತಿಗೆ ಸರ್ಕಾರದಿಂದ ಮಾನ್ಯತೆ ಪಡೆದಿದ್ದರೆ ಮಾತ್ರ ಪರಿಶೀಲಿಸಿ ಸಲ್ಲಿಸುವುದು.

* ಸದರಿ ನೌಕರರು 6 ತಿಂಗಳ ಒಳಗಾಗಿ ಪ್ರಸ್ತಾವನೆಯನ್ನು ಸಲ್ಲಿಸದೇ ಇರುವುದಕ್ಕೆ ಕಾಲ ವಿಳಂಬ ಮಾನ್ನಾ ಪತ್ರವನ್ನು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಸಲ್ಲಿಸುವುದು

* ಸರ್ಕಾರದಿಂದ ಮಾನ್ಯತೆ ಪಡೆಯುವ ಇರುವ ಖಾಸಗಿ ಆಸ್ಪತ್ರೆಗಳ ಚಿಕಿತ್ಸೆ ಪಡೆದಿರುವ ಸಂದರ್ಭದಲ್ಲಿ ಸರ್ಕಾರದ ಆದೇಶದ ಜೀವನ್ಮರಣದ ಸನ್ನಿವೇಶಗಲಿ ಹಾಗೂ ತುರ್ತು ಸಂದರ್ಭಗಳಲ್ಲಿ ಮಾತ್ರ ಅಂದರೆ ಅಪಘಾತವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ, ಹಠಾತ್ತಾಗಿ ಆಕಾಲದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಾಗ/ ಹೃದಾಯಘಾತವಾದಾಗ/ ಬೆಂಕಿ ಅಪಘಾತಕ್ಕೀಡಾದಾಗ ಸಾರ್ವಜನಿಕರು ಸ್ನೇಹಿತರು ಅಥವಾ ಆ ಕುಟುಂಬ ಸದಸ್ಯರುಗಳು ಹತ್ತಿರದಲ್ಲಿ ಯಾವುದೇ ಸರ್ಕಾರಿ ಆಸ್ಪತ್ರೆ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಗಳು ಇಲ್ಲದಿದ್ದ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಿದ ಸಂದರ್ಭ ಹಾಗೂ ಸರ್ಕಾರಿ ಆಸ್ಪತ್ರೆ ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಚಿಕಿತ್ಸೆಯು ಲಭ್ಯವಿಲ್ಯದಂತಹ ವಿಶೇಷ ಸಂದರ್ಭಗಳಲ್ಲಿ ಈ ಆಸ್ಪತ್ರೆಯ ನೈಜತೆಯ ಬಗ್ಗೆ ಅಗತ್ಯವಿದ್ದಲ್ಲಿ ತಮ್ಮ ಹಂತವಯ ಸೂಕ್ತ ತನಿಖೆ ನಡೆಸಿ ಸರ್ಕಾರಿ ನೌಕರರು ಸರುವ ಕ್ಲೇಮು ಸಮರ್ಥವೆಂದು ಕಂಡು ಬಂದಲ್ಲಿ ಮಾತ್ರ ಕಛೇರಿ ಮುಖ್ಯಸ್ಥರು ತಮ್ಮ ನಿರ್ಧಿಷ್ಟ ಶಿಫಾರಸಿನೊಂದಿಗೆ ವಿಶೇಷ ಮಂಜೂರಾತಿಗೆ ಖಜಾನೆ ಆಯುಕ್ತಾಲಯಕ್ಕೆ ಪ್ರಸ್ತಾವನೆ ಸಲ್ಲಿಸುವುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+