ರಾಜ್ಯದಲ್ಲಿ ಕಾನೂನು-ವ್ಯವಸ್ಥೆ ಸತ್ತು ಹೋಗಿದೆ, ಬಿಜೆಪಿ ಹೆಣ-ಹಣದ ಮೇಲೆ ರಾಜಕೀಯ: ಮಧು ಬಂಗಾರಪ್ಪ
ಬಿಜೆಪಿ ನಾಯಕರು ಜನರ ಹಣವನ್ನು ಲೂಟಿ ಹೊಡೆಯುತ್ತಾರೆ. ಧರ್ಮದ ಹೆಸರಿನಲ್ಲಿ ಕಳೆದ ಮೇಲೆ ಜನರಿಗೆ ಮೂರು ನಾಮ ಹಾಕಿ ಹೋಗುತ್ತಾರೆ.
ಶಿವಮೊಗ್ಗ,ಮಾರ್ಚ್ 8: ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಹೋದರರ ಸ್ಪರ್ಧೆಗೆ ಸೊರಬ ವಿಧಾನಸಭಾ ಕ್ಷೇತ್ರ ಸಜ್ಜಾಗಿದ್ದು. ಬಿಜೆಪಿ ಸರ್ಕಾರದ ವಿರುದ್ದ ಕೆಪಿಸಿಸಿ ಪ್ರಣಾಳಿಕೆ ಉಪಾಧ್ಯಕ್ಷ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಜನರ ಹಣವನ್ನು ಲೂಟಿ ಹೊಡೆಯುತ್ತಾರೆ. ಧರ್ಮದ ಹೆಸರಿನಲ್ಲಿ ಕಳೆದ ಮೇಲೆ ಜನರಿಗೆ ಮೂರು ನಾಮ ಹಾಕಿ ಹೋಗುತ್ತಾರೆ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.

ಸರ್ಕಾರ ಬಡವರಿಗೆ ಮನೆ ಹಂಚಿಕೆ ಮಾಡಿಲ್ಲ. ಯಾಕೆಂದರೆ ಶೇ.40 ಕಮಿಷನ್ ಸಿಗಲ್ಲ. ಹಾಗಾಗಿ, ಮನೆ ಹಂಚಿಕೆ ಮಾಡಿಲ್ಲ ಎಂದು ಮಧು ಬಂಗಾರಪ್ಪ ಆರೋಪಿಸಿದ್ದಾರೆ. ಪರೇಶ್ ಮೇಸ್ತಾ ಪ್ರಕರಣದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡಿ ವಿವಿಧಡೆ ಬೆಂಕಿ ಹಾಕಿ ಗಲಭೆ ಎಬ್ಬಿಸಿದ್ದರು. ಆದರೆ ಸಿಬಿಐ ತನಿಖೆಯಿಂದ ಸತ್ಯ ಬಯಲಾಗಿದೆ. ನಮ್ಮ ಕಾನೂನು ವ್ಯವಸ್ಥೆ ಸತ್ತು ಹೋಗಿದೆ. ಹೆಣದ ಮೇಲೆ ರಾಜಕೀಯ ಮಾಡಬಹುದು ಎಂಬ ದುರಾಲೋಚನೆ ಬಿಜೆಪಿಗೆ ಇದ್ದರೆ ದಯವಿಟ್ಟು ಬಿಡುವುದು ಒಳ್ಳೆಯದು ಎಂದು ಹೇಳಿದರು.
ಬಿಜೆಪಿಯವರು ಸಿಲಿಂಡರ್ ಬೆಲೆಯನ್ನು 2,000 ಬೇಕಾದರೂ ತೆಗೆದುಕೊಂಡು ಹೋಗ್ತಾರೆ ಹಾಗಾಗಿ ಕಾಂಗ್ರೆಸ್ ಪಕ್ಷ ಹಣ ನೀಡುವ ಭರವಸೆ ನೀಡಿದೆ. ಸಿಲಿಂಡರ್ ಇಲ್ಲ ಬೇಡ ಎಂದರೆ ಸೀಮೆಎಣ್ಣೆ ಅಥವಾ ಅಹಾರ ಪದಾರ್ಥಗಳಿಗೆ ಖರ್ಚು ಮಾಡಬಹುದು. ಈ ಹಣ ನೇರವಾಗಿ ಮಹಿಳೆಯರ ಅಕೌಂಟ್ ಗೆ ಹೋಗುತ್ತೆ. ಇಲ್ಲಿ ನಲವತ್ತು ಪರ್ಸೆಂಟ್ ಅವಕಾಶವೇ ಇಲ್ಲ. ಬಿಜೆಪಿ ಮನೆಗಳನ್ನ ಕೊಟ್ಟಿಲ್ಲ, ವಿದ್ಯುತ್ ಉಚಿತ ನೀಡಲ್ಲ, ಈಗಾಗಲೇ ದಿನಕ್ಕೆ ಎಪ್ಪತ್ತು ಸಲ ವಿದ್ಯುತ್ ಕಡಿತಗೊಳಿಸಿ ಹೊರ ರಾಜ್ಯಕ್ಕೆ ಮಾರಿಕೊಳ್ಳುತ್ತಾರೆ ಎಂದರು.

ಬಿಜೆಪಿ ಕಳ್ಳತನದ ಹಣ ಇಡೀ ವರ್ಷ ಸಿಗುತ್ತಿದೆ. ಒಬ್ಬ ಎಂಎಲ್ ಎ ಮನೆಯಲ್ಲಿ ಹತ್ತು ಕೋಟಿ ಹಣ ಸಿಗುತ್ತೆ ಎಂದರೆ ಇಡೀ ರಾಜ್ಯದಲ್ಲಿ ಇವರ ಹಣ ಎಷ್ಟಿರಬಹುದು..? ಇದು ಕೇವಲ ಸ್ಯಾಂಪಲ್ ಅಷ್ಟೇ..! ಉಳಿದ ಬಿಜೆಪಿ ನಾಯಕರು ಅವರ ಕ್ಷೇತ್ರಗಳಲ್ಲಿ ಎಷ್ಟು ಭ್ರಷ್ಟರು ಇರಬಹುದು.? ಜನ ಊಹೆ ಮಾಡಬೇಕು ಎಂದರು. ವಿಮಾನ ನಿಲ್ದಾಣ ಉದ್ಘಾಟನೆಗೆ ಬಂದ ಪ್ರಧಾನಿ ನರೇಂದ್ರ ಮೋದಿ ಶರಾವತಿ ಸಂತ್ರಸ್ತರ ಬಗ್ಗೆ ಮಾತನಾಡಲಿಲ್ಲ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ 18 ದಿನಗಳಲ್ಲಿ ಎಲ್ಲಾ ಸರಿ ಮಾಡುತ್ತೇನೆ ಎಂದು ಭರವಸೆ ನೀಡಿ ಹೋಗಿದ್ದರು. ಅವರೇ ಪಕ್ಷದಲ್ಲಿ ಗಟ್ಟಿಯಾಗಿಲ್ಲ. ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಮುಚ್ಚುವ ಹಂತದಲ್ಲಿದೆ. ಯಡಿಯೂರಪ್ಪ ಮಗ ಬಿ ವೈ ರಾಘವೇಂದ್ರ ಭರವಸೆ ನೀಡಿದ್ದರು ಆದರೆ ಈಡೇರಲೇ ಇಲ್ಲ. ಈಗ ಮುಚ್ಚುವುದೊಂದೇ ಬಾಕಿ ಎಂದು ಬಹಿರಂಗವಾಗಿ ಹೇಳುತ್ತಾರೆ. ಈ ಬಗ್ಗೆ ಬಿಜೆಪಿ ಮುಖಂಡರು ಯಾರು ಮಾತನಾಡುವುದಿಲ್ಲ. ಕಾಂಗ್ರೆಸ್ ಪಕ್ಷ ಕಾರ್ಖಾನೆಗಳನ್ನು ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಿತ್ತು. ಆದರೆ ಬಿಜೆಪಿ ಒಂದೊಂದನ್ನೇ ಮುಚ್ಚುತ್ತಾ ಬಂದಿದೆ. ಇವುಗಳನ್ನ ಮಾರಲು ಮುಂದಾಗಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ಸದ್ಯ ಮುಚ್ಚುವುದಿಲ್ಲ. ಏಕೆಂದರೆ ಇಲ್ಲಿ ವಿಮಾನಗಳು ಇಳಿಯುತ್ತಿಲ್ಲ. ಇದನ್ನ ಕೊಳ್ಳಲು ಅದಾನಿ, ಅಂಬಾನಿ ಕೂಡ ಮುಂದೆ ಬರುವುದಿಲ್ಲ ಎಂದರು.
ಹವಾಯಿ ಚಪ್ಪಲಿ ಹಾಕಿಕೊಂಡವರು ವಿಮಾನ ಪ್ರಯಾಣ ಮಾಡುವಂತಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಜನರು ಹವಾಯಿ ಚಪ್ಪಲಿ ಹಾಕಿಕೊಂಡೆ ಇರಬೇಕು ಎಂಬುದು ಬಿಜೆಪಿ ಮನಸ್ಥಿತಿ ಎಂದರು.












Click it and Unblock the Notifications