ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ, ಆದರೂ ಡ್ಯಾಂಗಳು ತುಂಬಿದ್ದು ಮಾತ್ರ 65%!
ಬೆಂಗಳೂರು, ಜುಲೈ. 15: ಕರ್ನಾಟಕ ಜುಲೈ 12 ರಿಂದ 31 ರವರೆಗೆ ತಮಿಳುನಾಡಿಗೆ ಪ್ರತಿದಿನ ಒಂದು ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶಿಸಿದೆ. ರಾಜ್ಯದಲ್ಲಿಯೂ ಉತ್ತಮ ಮಳೆಯಾಗುತ್ತಿದೆ. ಜಲಾಶಯಗಳ ಒಳಹರಿವು ಹೆಚ್ಚುತ್ತಿದೆ. ಆದರೆ, ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳು ತುಂಬಿರುವುದು 65% ಮಾತ್ರ.
ಕಾವೇರಿ ಜಲಾನಯನ ಪ್ರದೇಶದ ಡ್ಯಾಂಗಳಲ್ಲಿ ತಮ್ಮ ಗರಿಷ್ಠ ಸಾಮರ್ಥ್ಯದ ಕೇವಲ 65 ಪ್ರತಿಶತದಷ್ಟು ನೀರನ್ನು ಹೊಂದಿವೆ ಎಂದು ವರದಿಯಾಗಿದೆ. ಕೇರಳದ ವಯನಾಡ್ ಮತ್ತು ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭಾನುವಾರವೂ ಅಣೆಕಟ್ಟುಗಳಲ್ಲಿ ಉತ್ತಮ ಒಳಹರಿವು ಮುಂದುವರೆದಿದೆ.

ಭರ್ತಿಯಾದ ಕಬಿನಿ ಜಲಾಶಯ
ಈಗಾಗಲೇ ಕಬಿನಿ ಜಲಾಶಯ ಭರ್ತಿಯಾಗಿದ್ದು, ಭಾನುವಾರವೂ ಹೆಚ್ಚುವರಿ ನೀರು ಬಿಡಲಾಗುತ್ತಿದೆ. ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದ್ದು, ನದಿ ತೀರದಲ್ಲಿ ವಾಸಿಸುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಭಾನುವಾರ, ಕಬಿನಿ ಜಲಾಶಯವು ಅದರ ಒಟ್ಟು ಸಾಮರ್ಥ್ಯದ 19.52 ಟಿಎಂಸಿ ಅಡಿಗಳಿಗೆ ಹೋಲಿಸಿದರೆ 19 ಟಿಎಂಸಿ ಅಡಿ (ಶೇ 97) ಹೊಂದಿತ್ತು. ಗರಿಷ್ಠ ಮಟ್ಟವಾದ 2,284 ಅಡಿಗಳಷ್ಟಿದ್ದ ಕಬಿನಿಯಲ್ಲಿ ನೀರಿನ ಮಟ್ಟ 2,283.2 ಅಡಿ ಇತ್ತು.
ಕೆಆರ್‌ಎಸ್ ಅಣೆಕಟ್ಟಿನಲ್ಲಿ 26.68 ಟಿಎಂಸಿ ಅಡಿ (54%) ನೀರು ಇತ್ತು. ಕೆಆರ್‌ಎಸ್ ಡ್ಯಾಂಂನರ ಒಟ್ಟು ಸಾಮರ್ಥ್ಯ 49.45 ಟಿಎಂಸಿ ಅಡಿ. ಹಾರಂಗಿಯು 8.5 ಟಿಎಂಸಿ ಅಡಿ ಸಾಮರ್ಥ್ಯವಿದ್ದು, ಭಾನುವಾರ 6.84 ಟಿಎಂಸಿ ಅಡಿ (80%) ನೀಡಿನ ಮಟ್ಟ ಹೊಂದಿತ್ತು.

ಹೇಮಾವತಿಯು 37.1 ಟಿಎಂಸಿ ಅಡಿ ನೀಎಇನ ಸಾಮರ್ಥ್ಯ ಹೊಂದಿದ್ದು, ಭಾನುವಾರ 21.53 ಟಿಎಂಸಿ ಅಡಿ (58%) ನೀಡು ಹೊಂದಿತ್ತು. ಒಳಹರಿವು 19,027 ಕ್ಯೂಸೆಕ್ ಮತ್ತು ಹೊರಹರಿವು 16,750 ಕ್ಯೂಸೆಕ್ ಇತ್ತು. ಕೆಆರ್‌ಎಸ್‌ನಲ್ಲಿ ಗರಿಷ್ಠ ಮಟ್ಟ 124.8 ಅಡಿಯಷ್ಟಿದ್ದ ನೀರಿನ ಮಟ್ಟ 104.65 ಅಡಿ ಇತ್ತು. ಇದರ ಒಳಹರಿವು 2,898 ಕ್ಯೂಸೆಕ್, ಹೊರಹರಿವು 2,257 ಕ್ಯೂಸೆಕ್ ಇತ್ತು.
ಹಾರಂಗಿಯಲ್ಲಿ ಗರಿಷ್ಠ ಮಟ್ಟವಾದ 2,859 ಅಡಿಗಳಷ್ಟಿದ್ದ ನೀರಿನ ಮಟ್ಟ 2,854.65 ಅಡಿಗಳಷ್ಟಿದೆ. ಒಳಹರಿವು 6,820 ಕ್ಯೂಸೆಕ್, ಹೊರಹರಿವು 5,000 ಕ್ಯೂಸೆಕ್ ಇತ್ತು. ಹೇಮಾವತಿಯಲ್ಲಿ ಗರಿಷ್ಠ ಮಟ್ಟವಾದ 2,922 ಅಡಿಗಳಷ್ಟಿದ್ದ ನೀರಿನ ಮಟ್ಟ 2,902.75 ಅಡಿ ತಲುಪಿದೆ. ಒಳಹರಿವು 10,055 ಕ್ಯೂಸೆಕ್, ಹೊರಹರಿವು 250 ಕ್ಯೂಸೆಕ್ ಇತ್ತು.
ಇನ್ನು, ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಿಗೆ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಂದ ತಿಂಗಳಿಗೆ 3.35 ಟಿಎಂಸಿ ಅಡಿ ನೀರು ಬೇಕಾಗುತ್ತದೆ.












Click it and Unblock the Notifications