ಮಳೆ ಬಿಸಿಲಿಗೆ ಹೆದರಿ ದೇವಸ್ಥಾನಕ್ಕೆ ತೆರಳದ ಭಕ್ತರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವರು..
ಬೆಂಗಳೂರು ಜೂನ್ 30: ಮಳೆ ಬಂದರೆ ಅಧಿಕ ಬಿಸಿಲು ಇದ್ದರೆ ದೇವಸ್ಥಾನದಕ್ಕೆ ಹೋಗಲು ಹಿಂದೇಟು ಹಾಕುವ ಭಕ್ತರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ಮಳೆ ಬಿಸಿಲಿನಿಂದ ರಕ್ಷಣೆಗಾಗಿ ದೇವಾಲಯಗಳಿಗೆ ಶೆಲ್ಟರ್ ಹಾಕಲು ನಿರ್ಧರಿಸಲಾಗಿದೆ.
ಹೌದು.. ಮುಜರಾಯಿ ವ್ಯಾಪ್ತಿಯ ದೇವಾಲಯಗಳಿಗೆ ಶೆಲ್ಟರ್ ಹಾಕಲು ಯೋಚಿಸಲಾಗಿದೆ. ರಾಜ್ಯದಲ್ಲಿ ಈಗಷ್ಟೇ ಮಳೆ ಶುರುವಾಗಿದೆ. ಮುಂಗಾರು ಮಳೆ ಚುರುಕುಗೊಳ್ಳುತ್ತಿದ್ದಂತೆ ದೇವಸ್ಥಾನಗಳಿಗೆ ತೆರಳು ಜನ ಹಿಂಜರಿಯುತ್ತಾರೆ. ಭಕ್ತರ ಸುರಕ್ಷತೆಗಾಗಿ ಈಗ ದೇವಸ್ತಾನಗಳ ಮುಂಭಾಗದಲ್ಲಿ ಶೆಲ್ಟರ್ ಹಾಕಲು ತೀರ್ಮಾನಿಸಲಾಗಿದೆ.

ರಾಜ್ಯ ಮುಜರಾಯಿ ಇಲಾಖೆಗೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಈ ಸಲಹೆಯನ್ನು ನೀಡಿದ್ದಾರೆ. ಆಷಾಢ ಮುಗಿದು ಶ್ರಾವಣ ಮಾಸ ಆರಂಭವಾದಾಗ ಅಥವಾ ಮಳೆಗಾಲದಲ್ಲಿ ಮಳೆ ಅರ್ಭಟದ ಮಧ್ಯೆ ದೇವಸ್ಥಾನಕ್ಕೆ ಹೋಗೋದು ಹೇಗಪ್ಪಾ ಅನ್ನೋ ಚಿಂತೆ ಭಕ್ತರಿಗೆ ಇರುತ್ತದೆ.
ಕೆಲವೊಮ್ಮೆ ವಿಶೇಷ ದಿನಗಳಲ್ಲಿ ದೇವಸ್ಥಾನಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಬಿಸಿಲು ಮಳೆ ಎನ್ನದೆ ಭಕ್ತರು ಸಾಲಿನಲ್ಲಿ ನಿಂತುಕೊಂಡಿರುತ್ತಾರೆ. ಇಂತಹ ಸಂದರ್ಭದಲ್ಲಿ ಭಕ್ತರ ಯೋಗಕ್ಷೇಮ ಮುಖ್ಯವಾಗುತ್ತದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಕೆಲವೊಮ್ಮೆ ಬೇಸಿಗೆ ಬಿಸಿಲಿನಲ್ಲಿ ನೆತ್ತಿ ಸುಡುವ ಸೂರ್ಯ ಒಂದೆಡೆಯಾದರೆ ನೆಲವೂ ಕೆಂಡದಂತೆ ಕಾದು ಬಿಸಿಯಾಗುತ್ತಿದೆ. ಇಂತಹ ಸಮಸ್ಯೆಗಳ ನಿವಾರಣೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ಶೆಲ್ಟರ್ ನಿರ್ಮಾಣಕ್ಕೆ ಸಲಹೆ ನೀಡಿದ್ದಾರೆ. ಅಲ್ಲದೆ ದೇವಸ್ಥಾನಗಳಲ್ಲಿ ಶಾಮಿಯಾನ ವ್ಯವಸ್ಥೆ ಕೂಡ ಮಾಡಲಾಗುವುದು ಎಂದು ಅವರು ಹೇಳಿದರು.
ಹೀಗಾಗಿ ಮುಂಬರುವ ದಿನಗಳಲ್ಲಿ ದೇವಸ್ಥಾನಗಳಲ್ಲಿ ಶೆಲ್ಟರ್‌ಗಳು ಇರಲಿವೆ. ಇದರಿಂದ ವಯಸ್ಸಾದವರು ಮತ್ತು ಮಕ್ಕಳು ದೇವಸ್ಥಾನಗಳಿಗೆ ಹಿಂಜರಿಕೆ ಇಲ್ಲದೆ ಬರಬಹುದು. ಮೊದಲನೇ ಹಂತದಲ್ಲಿ ಮಳೆ ಬರುವ ಜಿಲ್ಲೆಗಳಾದ ಚಿಕ್ಕಮಗಳೂರು, ದಕ್ಷಿನ ಕನ್ನಡ, ಶಿವಮೊಗ್ಗ, ಉಡುಪಿ ಜಿಲ್ಲೆಗಳ ದೇವಾಲಯಗಳಲ್ಲಿ ಶೆಲ್ಟರ್ ನಿರ್ಮಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ಹೇಳಿದರು. ಹೀಗಾಗಿ ಈ ವ್ಯವಸ್ಥೆಯಿಂದ ಭಕ್ತರಿಗೆ ಅನುಕೂಲವಾಗಲಿದೆ.












Click it and Unblock the Notifications