ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಡಿತರ ಚೀಟಿದಾರರಿಗೆ ಇನ್ಮುಂದೆ 21 ಕೆ.ಜಿ ಗೋಧಿ, 14 ಕೆ.ಜಿ ಅಕ್ಕಿ

|
Google Oneindia Kannada News

ನವದೆಹಲಿ, ನವೆಂಬರ್‌, 18: ಪಡಿತರ ಚೀಟಿದಾರರಿಗೆ ಉಚಿತ ಆಹಾರ ಧಾನ್ಯಗಳ ಪ್ರಯೋಜನಗಳ ಮಿತಿಯನ್ನು ಹೆಚ್ಚಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಪಡಿತರ ಚೀಟಿದಾರರಿಗೆ 21 ಕೆ.ಜಿ. ಗೋಧಿ ಮತ್ತು 14 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಎಂದು ಸರ್ಕಾರ ಘೋಷಣೆ ಮಾಡಿದೆ.

ಕರಾವಳಿ ಜಿಲ್ಲೆಗಳಲ್ಲಿ ಕುಚಲಕ್ಕಿ ವಿತರಿಸಲು ಸರ್ಕಾರದಿಂದ ನಿರ್ಧಾರಕರಾವಳಿ ಜಿಲ್ಲೆಗಳಲ್ಲಿ ಕುಚಲಕ್ಕಿ ವಿತರಿಸಲು ಸರ್ಕಾರದಿಂದ ನಿರ್ಧಾರ

ಇನ್ನು ಅಂತ್ಯೋದಯ ಪಡಿತರ ಚೀಟಿದಾರರಿಗೆ 21 ಕೆ.ಜಿ. ಗೋಧಿ, 14 ಕೆ.ಜಿ. ಅಕ್ಕಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಆದರೆ ಸಾಮಾನ್ಯ ಪಡಿತರ ಚೀಟಿದಾರರಿಗೆ ಕೇವಲ 2 ಕೆ.ಜಿ. ಗೋಧಿ, 3 ಕೆ.ಜಿ. ಅಕ್ಕಿ ಮಾತ್ರ ನೀಡಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಈ ಬಾರಿ ಪಡಿತರ ಚೀಟಿದಾರರು ಕೆ.ಜಿ. ಗೋಧಿಗೆ 2 ರೂಪಾಯಿ ಮತ್ತು ಕೆ.ಜಿ. ಅಕ್ಕಿಗೆ 3 ರೂಪಾಯಿ ಪಾವತಿಸಬೇಕು ಎಂದು ಹೇಳಲಾಗಿದೆ. ಹೆಚ್ಚುವರಿಯಾಗಿ ಎಲ್ಲಾ ಪಡಿತರ ಚೀಟಿ ಪಿಡಿಎಸ್‌ ವಿತರಕರು, ಉಪ್ಪು, ಎಣ್ಣೆ ಮತ್ತು ಬೆಳೆಕಾಳುಗಳ ಪ್ಯಾಕೆಟ್‌ಗಳನ್ನು ಹೊಂದಿದ್ದು, ಸರ್ಕಾರದ ಆದೇಶದ ಪ್ರಕಾರ ಅಂತ್ಯೋದಯ ಕಾರ್ಡ್‌ ಹೊಂದಿರುವವರಿಗೆ ಉಚಿತವಾಗಿ ವಿತರಿಸಲಾಗುವುದು. ಈ ನಿಟ್ಟಿನಲ್ಲಿ ಮೊದಲು ಬಂದವರಿಗೆ ಹೆಚ್ಚಿನ ಆದ್ಯತೆ ನೀಡುವ ನಿಯಮವನ್ನು ಅನುಸರಿಸಲಾಗುವುದು ಎಂದು ತಿಳಿಸಿದೆ.

Good news for ration card holders government to give 21 kg wheat, 14 kg rice free of cost

2000ನೇ ಸಾಲಿನಲ್ಲಿ ಅಂತ್ಯೋದಯ ಯೋಜನೆ

ಉಚಿತ ಆಹಾರ ಧಾನ್ಯಗಳ ಪ್ರಯೋಜನಗಳ ಮಿತಿಯನ್ನು ಹೆಚ್ಚಿಸಬಹುದು ಎನ್ನುವ ಮಾಹಿತಿ ಹೊರಬಿದ್ದು, ಯೋಜನೆಯ ಬಗ್ಗೆ ಸರ್ಕಾರ ಶೀಘ್ರದಲ್ಲಿಯೇ ತಿಳಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಡಿಸೆಂಬರ್‌, 2000ನೇ ಸಾಲಿನಲ್ಲಿ ಒಂದು ಕೋಟಿ ಬಡ ಕುಟುಂಬಗಳಿಗಾಗಿ ಅಂತ್ಯೋದಯ ಅನ್ನ ಯೋಜನೆ ಅನ್ನು ಪ್ರಾರಂಭಿಸಲಾಯಿತು. ರಾಜ್ಯಗಳೊಳಗಿನ ಟಿಪಿಡಿಎಸ್ ಅಡಿಯಲ್ಲಿ ಬರುವ ಬಿಪಿಎಲ್ ಕುಟುಂಬಗಳ ಪೈಕಿ ಒಂದು ಕೋಟಿ ಬಡ ಕುಟುಂಬಗಳನ್ನು ಗುರುತಿಸಲಾಗುವುದು. ಮತ್ತು ಅವರಿಗೆ ಪ್ರತಿ ಕೆ.ಜಿ.ಗೆ 2 ರೂಪಾಯಿಗಳ ಹೆಚ್ಚಿನ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುವುದು ಎಎವೈ ಯೋಜನೆ ಒಳಗೊಂಡಿದೆ. ಗೋಧಿ ಮತ್ತು ಅಕ್ಕಿಗೆ ಪ್ರತಿ ಕೆ.ಜಿ.ಗೆ 3 ರೂಪಾಯಿ ವಿತರಕರು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಮಾರ್ಜಿನ್, ಸಾರಿಗೆ ವೆಚ್ಚ ಸೇರಿದಂತೆ ವಿತರಣಾ ವೆಚ್ಚವನ್ನು ರಾಜ್ಯಗಳು ಭರಿಸಬೇಕಾಗಿತ್ತು. ಹೀಗಾಗಿ ಆಹಾರ ಸಬ್ಸಿಡಿಯನ್ನು ಈ ಯೋಜನೆಯಡಿ ಗ್ರಾಹಕರಿಗೆ ನೀಡಲಾಗಿದೆ ಎನ್ನುವ ಮಾಹಿತಿಯನ್ನು ನೀಡಿದೆ.

English summary
Central government Good news; Ration card holders to give 21 kg wheat, 14 kg rice free of cost, Here See full details, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X