A-Khata: ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ: 2009-2024ರಲ್ಲಿ ನೀಡಿದ್ದ ಬಿ-ಖಾತೆಗಳಿಗೆ ಎ-ಖಾತೆ! ಸಮಸ್ಯೆಗಳಿಗೆ ಮುಕ್ತಿ

ಬೆಂಗಳೂರು, ಜುಲೈ 24: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಕ್ರಮವಹಿಸಲಾಗಿದೆ. ಇದೀಗ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ 2009 ರಿಂದ 2024 ರ ಸೆಪ್ಟಂಬರ್ 30ರವರೆಗೆ ಯಾರಿಗೆಲ್ಲ ಬಿ-ಖಾತಾ ನೀಡಿತ್ತೋ ಅವರಿಗೆಲ್ಲ ಎ-ಖಾತಾ ಮಾನ್ಯತೆ ನೀಡಲು ತಿರ್ಮಾನಿಸಲಾಗಿದೆ. ಇದರಿಂದ ಆಸ್ತಿ ಮಾಲೀಕರಿಗೆ ಹಲವು ಸಂಕಷ್ಟಗಳು ದೂರಾಗಲಿವೆ. ಈ ಯೋಜನೆ ಶೀಘ್ರವೇ ರಾಜ್ಯದ ಎಲ್ಲ ನಗರಗಳಲ್ಲೂ ಜಾರಿಗೆ ತರಲಾಗುತ್ತದೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. 'ಎಲ್ಲಾ ಬಿ- ಖಾತಾದಾರರಿಗೆ ಸಿಗಲಿದೆ ಎ- ಖಾತಾ ಮಾನ್ಯತೆ' ಸಿಗುತ್ತದೆ ಎಂದಿದ್ದಾರೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಬಿ- ಖಾತಾ ಗೊಂದಲಗಳಿಗೆ ತೆರೆ ಎಳೆಯಲು 2024 ರ ಸೆಪ್ಟಂಬರ್ 30ರವರೆಗೆ ಬಿಬಿಎಂಪಿ ನೀಡಿರುವ ಎಲ್ಲಾ ಬಿ-ಖಾತಾಗಳಿಗೆ ಎ- ಖಾತಾ ಮಾನ್ಯತೆ ನೀಡಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಇದರಿಂದಾಗಿ ಬಿ- ಖಾತಾದಾರರಿಗಿದ್ದ ಹಲವಾರು ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದ್ದಾರೆ..

Good News for Property Owners Karnataka Govt Grants A-Khata to All B-Khatas Issued in 2009 to 2024

ಬಿ-ಖಾತೆದಾರರಿಗೆ ಏನೆಲ್ಲ ಸಮಸ್ಯೆ ಆಗಿತ್ತು?

ಬಿಬಿಎಂಪಿ ನೀಡಿರುವ ಬಿ-ಖಾತಾಗಳಿಗೆ ಎ-ಖಾತಾ ನೀಡುವ ಮೂಲಕ ಸರ್ಕಾರ ಗಂಭೀರ ಚಿಂತನೆ ಮಾಡಿದ್ದು, ಸಚಿವ ಸಂಪುಟ ಸಭೆಯಲ್ಲೂ ಚರ್ಚಿಸಲಾಗಿದೆ. ಹಲವು ವರ್ಷಗಳಿಂದ ಸಂಕಷ್ಟ ಎದರಿಸುತ್ತಿದ್ದ ಆಸ್ತಿ ಮಾಲೀಕರಿಗೆ ಸರ್ಕಾರ ಇದೀಗ ಗುಡ್ ನ್ಯೂಸ್ ನೀಡಿದೆ. ಈ ಹಿಂದೆ ಬಿ. ಖಾತಾ ಪಡೆದು ತಮ್ಮ ಮನೆ ಕಟ್ಟಡಗಳಿಗೆ ವಿದ್ಯುತ್, ನೀರಿನ ಸಂಪರ್ಕ, ಒಳಚರಂಡಿ ಸಂಪರ್ಕ ಪಡೆಯಲು ಸಮಸ್ಯೆ ಎದುರಿಸಬೇಕಿತ್ತು. ಅವುಗಳ ಸಂಪರ್ಕಕ್ಕಾಗಿ ಅನುಮತಿ ಪಡೆಯಲು ಹರಸಾಹಸ ಪಡಬೇಕಿತ್ತು. ಯಾವುದೇ ವಿನ್ಯಾಸ ಇಲ್ಲದೇ ಕಟ್ಟಡ ನಿರ್ಮಾಣ ಮಾಡುವುದರಿಂದ ಮೂಲ ಸೌಕರ್ಯ ಒದಗಿಸಲು ಸಹ ಸಮಸ್ಯೆ ಆಗುತ್ತಿತ್ತು. ಇದೀಗ ಅದಕ್ಕೆಲ್ಲ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ.

ಆಸ್ತೀ ಮಾಲೀಕರ ಜೀವನ ಸುಧಾರಣೆ

ಸರ್ಕಾರವು 2009 ರಿಂದ 2024ರ ಸೆಪ್ಟಂಬರ್ 30ರವರೆಗೆ ಬಿಬಿಎಂಪಿ ನೀಡಿರುವ ಎಲ್ಲ ಬಿ -ಖಾತಾಗಳಿಗೆ ಎ-ಖಾತಾ ಮಾನ್ಯತೆ ನೀಡುವುದಾಗಿ ಘೋಷಿಸಿದೆ. ಬೆಂಗಳೂರು ಅಭಿವೃದ್ಧಿಗೆ ಗ್ಯಾರಂಟಿ ಸರ್ಕಾರ ಬದ್ಧ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇನ್ನು ಮುಂದೆ ಬಿ.ಖಾತಾ ಹೊಂದಿರುವ ಆಸ್ತಿ ಮಾಲೀಕರ ಜೀವನ ಉತ್ತಮವಾಗಲಿದೆ. ಅಕ್ರಮ ಕಟ್ಟಡ ನಿಯಂತ್ರಣ ವಿರುದ್ಧ ಶಿಸ್ತು ತರಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದರಿಂದ ಬೆಂಗಳೂರು ಮತ್ತಷ್ಟು ಯೋಜನೆ ಬದ್ಧ ನಗರವಾಗಲಿದೆ ಎಂದು ಅವರು ತಿಳಿಸಿದ್ದಾರೆ.

Good News for Property Owners Karnataka Govt Grants A-Khata to All B-Khatas Issued in 2009 to 2024

ಎ-ಖಾತೆ ಉಪಕ್ರಮ ರಾಜ್ಯಾದ್ಯಂತ ವಿಸ್ತರಣೆ

ಡಿಕೆ ಶಿವಕುಮಾರ್ ಅವರು ಬೆಂಗಳೂರಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ. ಇಡೀ ರಾಜ್ಯದ ನಗರಗಳಲ್ಲಿನ ಆಸ್ತಿಗಳಿಗೆ ಈ ಎಖಾತೆ ಮಾನ್ಯತೆ ನೀಡುವ ವಿಚಾರದ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಲಾಗಿದೆ. ಸಭೆಯಲ್ಲಿ ಈ ಬಗ್ಗೆ ಸಮಾಲೋಚನೆ ಮಾಡಲಾಗುತ್ತಿದೆ. ಎಲ್ಲವು ಅಂದುಕೊಂಡಂತೆ ಆದರೆ ಕರ್ನಾಟಕದ ಎಲ್ಲ ನಗರಗಳಿಗೂ ಈ ಎ-ಖಾತಾ ಉಪಕ್ರಮ ವಿಸ್ತರಣೆ ಆಗಲಿದೆ. ಆಗ ಬೆಂಗಳೂರು ಮಾತ್ರವಲ್ಲದೇ ಬಿ.ಖಾತೆ ಪಡೆದ ರಾಜ್ಯದ ಇತರ ನಗರಗಳ ಆಸ್ತಿ ಮಾಲೀಕರ ಸಮಸ್ಯೆಗಳಿಗೂ ಮುಕ್ತಿ ಸಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+