Good News: ಪಿಂಚಣಿದಾರರಿಗೆ ಗುಡ್‌ನ್ಯೂಸ್‌: ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅಭಿಯಾನ 3.0

ನೈರುತ್ಯ ರೈಲ್ವೆಯು ತನ್ನ ವ್ಯಾಪ್ತಿಯ ರೈಲು ಪ್ರಯಾಣಿಕರು ಹಾಗೂ ಸಿಬ್ಬಂದಿಯ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುತ್ತದೆ. ಇದೀಗ ಪಿಂಚಣಿದಾರರಿಗೆ ನೈರುತ್ಯ ರೈಲ್ವೆಯು ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಹೊಸ ಅಭಿಯಾನವನ್ನು ಪ್ರಾರಂಭಿಸಿದ್ದು, ಇದರಿಂದ ನೈರುತ್ಯ ರೈಲ್ವೆಯ ಪಿಂಚಣಿದಾರರಿಗೆ ಸಹಕಾರಿಯಾಗಲಿದೆ. ನೈರುತ್ಯ ರೈಲ್ವೆಯು ಪಿಂಚಣಿದಾರರಿಗೆ ನೀಡಿರುವ ಗುಡ್‌ನ್ಯೂಸ್‌ ಏನು, ಇದರಿಂದ ಪಿಂಚಣಿದಾರರಿಗೆ ಯಾವೆಲ್ಲ ಸೌಲಭ್ಯ ಸಿಗಲಿದೆ. ಇದನ್ನು ಬಳಸುವುದು ಹೇಗೆ ಎನ್ನುವ ವಿವರ ಇಲ್ಲಿದೆ.

ನೈಋತ್ಯ ರೈಲ್ವೆ ತನ್ನ ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಜೀವನ ಪ್ರಮಾಣಪತ್ರ) ಸಲ್ಲಿಕೆ ಪ್ರಕ್ರಿಯೆಯನ್ನು ಇದೀಗ ಇನ್ನಷ್ಟು ಸರಳೀಕರಣ ಮಾಡಿದ್ದು, ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮುಂದಾಗಿದೆ. ಇದರ ಭಾಗವಾಗಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅಭಿಯಾನ 3.0 ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಹೊಸ ಡಿಜಿಟಲ್ ಅಭಿಯಾನದ ಮೂಲಕ, ಪಿಂಚಣಿದಾರರು ಇನ್ನು ಮುಂದೆ ಬ್ಯಾಂಕ್ ಅಥವಾ ಇತರ ಸಂಬಂಧಿತ ಕಚೇರಿಗಳಿಗೆ ಭೇಟಿ ನೀಡದೆಯೂ ತಮ್ಮ ಪಿಂಚಣಿ ಮುಂದುವರಿಸಲು ಅವಕಾಶ ಸಿಗಲಿದೆ. ಮನೆಯಿಂದಲೇ ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು ಎಂದು ನೈರುತ್ಯ ರೈಲ್ವೆ ಹೇಳಿದೆ.

Good News for Pensioners Digital Life Certificate Campaign 3 0

ಇನ್ನು ಡಿಜಿಟಲ್ ಲೈಫ್ ಪ್ರಮಾಣಪತ್ರಗಳ ಮುಖ್ಯ ಪ್ರಯೋಜನವೆಂದರೆ ಅನುಕೂಲತೆ, ಭದ್ರತೆ ಮತ್ತು ಸಮಯದ ಉಳಿತಾಯ ಆಗಲಿದೆ. ಈ ಮೂಲಕ ಎಲ್ಲಾ ಪಿಂಚಣಿದಾರರಿಗೆ, ವಿಶೇಷವಾಗಿ ಹಿರಿಯ ಪಿಂಚಣಿದಾರರಿಗೆ ವಿಶೇಷ ಪ್ರಯೋಜನ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಪಿಂಚಣಿದಾರರನ್ನು ಸಬಲೀಕರಣಗೊಳಿಸಲು ಮತ್ತು ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸುವ ಹೆಚ್ಚು ತಡೆರಹಿತ ಮತ್ತು ಅನುಕೂಲಕರ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಡಿಜಿಟಲ್ ಪ್ರಮಾಣಪತ್ರ ಅಭಿಯಾನವನ್ನು ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಿರುವುದಾಗಿ ಹೇಳಲಾಗಿದೆ.

ಅಪ್ಲಿಕೇಶನ್ ಸಲ್ಲಿಸುವ ಪ್ರಕ್ರಿಯೆಯೂ ಸುಲಭವಾಗಿದೆ. ಈ ಹಂತಗಳನ್ನು ಅನುಸರಿಸುವ ಮೂಲಕ ನೀವು ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

1. ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್ ಬಳಸಿಕೊಂಡು ಆಧಾರ್ ಆಧಾರಿತ 'ಫೇಸ್ ಅಥೆಂಟಿಕೇಶನ್' ತಂತ್ರಜ್ಞಾನದ ಮೂಲಕ ಪ್ರಕ್ರಿಯೆಯಾಗಿದೆ. ಪಿಂಚಣಿದಾರರು Google Play Storeಗೆ ಹೋಗಿ UIDAI ನಿಂದ ಇತ್ತೀಚಿನ ಆವೃತ್ತಿಯೊಂದಿಗೆ (ಪ್ರಸ್ತುತ 0.7.43) 'ಆಧಾರ್ ಫೇಸ್ RD (ಆರಂಭಿಕ ಪ್ರವೇಶ) ಅಪ್ಲಿಕೇಶನ್' ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

2. Google Play Store ನಿಂದ ಇತ್ತೀಚಿನ ಆವೃತ್ತಿಯೊಂದಿಗೆ (3.6.3) "ಜೀವನ್ ಪ್ರಮಾನ್" ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

ಈ ಅಪ್ಲಿಕೇಶನ್‌ಗಳನ್ನು ಬಳಸುವ ಮೂಲಕ, ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರಗಳನ್ನು ಮನೆಯಿಂದಲೇ ಸಲ್ಲಿಸಬಹುದು. ನೇರವಾಗಿ ಕಚೇರಿಗಳಿಗ ಅಲೆದಾಡುವುದು ತಪ್ಪಲಿದೆ. ಸುಗಮ ಮತ್ತು ಪರಿಣಾಮಕಾರಿ ಪ್ರಕ್ರಿಯೆಯನ್ನು ಎಲ್ಲಾರೂ ಆನಂದಿಸಬಹುದು.

ಈ ಅಭಿಯಾನವು ತನ್ನ ಪಿಂಚಣಿದಾರರ ಅನುಭವ ಮತ್ತು ಅನುಕೂಲತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ತೆಗೆದುಕೊಂಡಿರುವ ಹೊಸ ಬದ್ಧತೆಯ ಭಾಗ ಇದಾಗಿದೆ ಎಂದೇ ಹೇಳಲಾಗಿದೆ. ಅಲ್ಲದೇ ಈ ಸಂಬಂಧ ಯಾವುದೇ ಗೊಂದಲಗಳು ಅಥವಾ ಹೆಚ್ಚಿನ ಮಾಹಿತಿಯ ಅವಶ್ಯಕತೆ ಇದ್ದರೆ, ಪಿಂಚಣಿದಾರರು ನೈಋತ್ಯ ರೈಲ್ವೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ನೈರುತ್ಯ ರೈಲ್ವೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+