Property: ಕರ್ನಾಟಕದ ಆಸ್ತಿದಾರರಿಗೆ ಗುಡ್‌ನ್ಯೂಸ್: ಇ-ಪೌತಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಸರ್ಕಾರದ ಕ್ರಮ

Property: ಆಸ್ತಿದಾರರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಅದರಲ್ಲೂ ಮುಖ್ಯವಾಗಿ ಇ-ಪೌತಿ ವಿಚಾರದಲ್ಲಿ ಭಾರೀ ದೊಡ್ಡ ಗುಡ್‌ನ್ಯೂಸ್ ಕೊಡಲಾಗಿದೆ. ಇ ಪೌತಿ ಪ್ರಕರಣ ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವುದಕ್ಕೆ ಉಪ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವ ಡಾ.ಜಿ ಪರಮೇಶ್ವರ್ ಅವರು ಭಾರೀ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಕಲಬುರಗಿ ವಿಭಾಗದ 32 ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ಕಾರ್ಯ ಯೋಜನೆ ರೂಪಿಸಲು ಸಹ ಇದೇ ಸಂದರ್ಭದಲ್ಲಿ ಸೂಚನೆ ನೀಡಲಾಗಿದೆ. ಕಲಬುರಗಿ ಕಂದಾಯ ವಿಭಾಗದಲ್ಲಿ ಬಾಕಿ ಉಳಿದಿರುವ 2,23,190 ಇ- ಪೌತಿ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವಂತೆ ಉಪ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವ ಡಾ.ಜಿ.ಪರಮೇಶ್ವರ ಅವರು ನಿರ್ದೇಶನ ನೀಡಿದ್ದಾರೆ.

ಒಟ್ಟು 3,57,024 ಪ್ರಕರಣಗಳನ್ನು ಇ-ಪೌತಿ ಖಾತೆ ಮಾಡಲು ಗುರುತಿಸಲಾಗಿತ್ತು. ಅದರಲ್ಲಿ 1,33,834 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ವಿವಿಧ ಕಾರಣಗಳಿಂದ ಬಾಕಿ ಉಳಿದಿರುವ 2,23,190 ಇ- ಪೌತಿ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಲು ಕ್ರಮ ವಹಿಸಬೇಕು. ವಿಜಯನಗರ, ಕಲಬುರಗಿ, ಬೀದ‌ರ್ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಇ-ಪೌತಿ ಪ್ರಕರಣಗಳು ಬಾಕಿ ಉಳಿದಿದ್ದು, ಇವುಗಳನ್ನು ಆದ್ಯತೆಯ ಮೇರೆಗೆ 2 ತಿಂಗಳೊಳಗಾಗಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.

Property

ಒಟ್ಟು 17,576 ದರ್ಖಾಸ್ತು ಪ್ರಕರಣಗಳಲ್ಲಿ 10,775 ಪ್ರಕರಣಗಳಿಗೆ ಅನುಬಂಧ 1ಅನ್ನು ಮಂಜೂರಾತಿ ಕ್ರಮಬದ್ಧವಾಗಿರುತ್ತದೆ ಎಂದು ತಹಶೀಲ್ದಾರರು ಅನುಮೋದಿಸಿದ್ದು, ಈ ಪ್ರಕರಣಗಳನ್ನು ಕೂಡಲೇ ಪೋಡಿ ದುರಸ್ತಿ ಮಾಡಿ ಆರ್‌ಟಿ‌ಸಿ ನೀಡಲು ಕ್ರಮವಹಿಸಿಬೇಕು. ಈ ಪೈಕಿ ವಿಜಯನಗರ, ಕೊಪ್ಪಳ, ಕಲಬುರಗಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳಿದ್ದು, ಸಂಬಂಧಿತ ಜಿಲ್ಲಾಧಿಕಾರಿಗಳು ಆದ್ಯತೆಯ ಮೇರೆಗೆ ಇತ್ಯರ್ಥ ಮಾಡಬೇಕು. ಕಲಬುರಗಿ ವಿಭಾಗದಲ್ಲಿ ಒಟ್ಟು 1,483 ಹೊಸ ಕಂದಾಯ ಗ್ರಾಮ ರಚನೆ ಮಾಡಬೇಕಾಗಿದ್ದು, ಜನಗಣತಿ 2027ರ ಕಾರಣ ಅಂತಿಮ ಅಧಿಸೂಚನೆ ಹೊರಡಿಸಲು ಬಾಕಿಯಿರುವ ಪ್ರಕರಣಗಳಲ್ಲಿ ಜನಗಣತಿ ಕಾರ್ಯಪೂರ್ಣಗೊಂಡ ನಂತರ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೆ ಕ್ರಮವಹಿಸಬೇಕು ಎಂದಿದ್ದಾರೆ.

ಗುರುತಿಸಿರುವ 1,483 ಗ್ರಾಮಗಳ ಪೈಕಿ 1,048 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಉಳಿದ 435 ಗ್ರಾಮಗಳ ಕುರಿತು ಅಧಿಸೂಚನೆ ಹೊರಡಿಸಬೇಕು. ಈ ಪೈಕಿ ಬೀದ‌ರ್ ಜಿಲ್ಲೆಯಲ್ಲೇ 150 ಪ್ರಕರಣಗಳು ಬಾಕಿ ಇರುತ್ತವೆ. ವಿಜಯನಗರ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲೂ ಹೆಚ್ಚು ಪ್ರಕರಣಗಳು ಬಾಕಿ ಇರುತ್ತವೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಿದೆ. ಕಲಬುರಗಿ ಕಂದಾಯ ವಿಭಾಗದಲ್ಲಿ ಒಟ್ಟು 32 ಪ್ರವರ್ಗ ʼಎʼ ಅಧಿಸೂಚಿತ ದೇವಾಲಯಗಳಿದ್ದು, ಈ ದೇವಸ್ಥಾನಗಳ ಸಮಗ್ರ ಅಭಿವೃದ್ಧಿ ಮತ್ತು ಭಕ್ತರಿಗೆ ಮೂಲಸೌಕರ್ಯ ಅಭಿವೃದ್ಧಿ ಒದಗಿಸಲು ಕಾರ್ಯ ಯೋಜನೆ ರೂಪಿಸಬೇಕು ಎಂದು ತಿಳಿಸಿದ್ದಾರೆ.

ರಾಯಚೂರು ಜಿಲ್ಲೆಯ 2 ದೇವಾಲಯಗಳ 23.23 ಎಕರೆ ಜಮೀನು ಮತ್ತು ಯಾದಗಿರಿ ಜಿಲ್ಲೆಯ 2 ದೇವಾಲಯಗಳ 9.03 ಎಕರೆ ಜಮೀನು ಒತ್ತುವರಿ ತೆರವು ಬಾಕಿ ಇದೆ. ಒತ್ತುವರಿಯನ್ನು ತೆರವುಗೊಳಿಸಿ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳಲು ಕ್ರಮವಹಿಸಬೇಕು. ಮುಂದಿನ ದಿನಗಳಲ್ಲಿ ಯಾವುದೇ ದೇವಾಲಯಗಳ ಆಸ್ತಿಗಳು ಒತ್ತುವರಿ ಆಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು. ಕಲಬುರಗಿ ವಿಭಾಗದಲ್ಲಿ ಒಟ್ಟು 7,606 ದೇವಾಲಯಗಳು ಮತ್ತು ದೇವಾಲಯಗಳ ಆಸ್ತಿಗಳ ಪೈಕಿ 2,635 ದೇವಾಲಯಗಳ ಖಾತೆಯಾಗಿದ್ದು, ಬಾಕಿ ಉಳಿದ 4,971 ದೇವಾಲಯಗಳ ಖಾತೆಯ ಕುರಿತು ಸಂಬಂಧಪಟ್ಟ ತಹಶೀಲ್ದಾರರು ಕೂಡಲೇ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+