Get Updates
Get notified of breaking news, exclusive insights, and must-see stories!

BPL And APL Card: ಬಿಪಿಎಲ್, ಎಪಿಎಲ್‌ ಕಾರ್ಡುದಾರರಿಗೆ ಕೆ.ಎಚ್‌.ಮುನಿಯಪ್ಪ ಗುಡ್‌ ನ್ಯೂಸ್

Ration Card: ಪಡಿತರ ಚೀಟಿದಾರರಿಗೆ ಸರ್ಕಾರ ಆಗಾಗ ಗುಡ್‌ ನ್ಯೂಸ್‌ ನೀಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಆಹಾರ ಸಚಿವ ಕೆ.ಹೆಚ್‌.ಮುನಿಯಪ್ಪ ಅವರು ಬಡವರಿಗೆ ಅನುಕೂಲ ಆಗುವಂತೆ ಮತ್ತೊಂದು ಭರ್ಜರಿ ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ಹಾಗಾದ್ರೆ ಅವರು ಏನೆಲ್ಲಾ ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಫಲಾನುಭವಿಗಳಿಗೆ ಮಾರ್ಚ್ ಅಂದರೆ ಅಮದೇ ತಿಂಗಳಿನಲ್ಲಿ ಫೆಬ್ರವರಿ ಮತ್ತು ಮಾರ್ಚ್ ಎರಡು ತಿಂಗಳಿನದ್ದು ಸೇರಿಸಿ 10 ಕೆ.ಜಿ. ಹೆಚ್ಚುವರಿ ಅಕ್ಕಿ ಕೊಡುತ್ತೇವೆ ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಹೇಳುವ ಮೂಲಕ ಬಡಕುಟುಂಬಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

Good News for BPL and APL Cardholders from Minister K H Muniyappa

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 2.90 ಲಕ್ಷ ಪಡಿತರ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡಲಾಗಿದೆ. ಇವುಗಳಲ್ಲಿ 1.65 ಲಕ್ಷ ಕಾರ್ಡ್‌ಗಳನ್ನು ಬದಲಾವಣೆ ಮಾಡಲಾಗಿದೆ ಅಂತಳು ತಿಳಿಸಿದ್ದಾರೆ. ಇನ್ನು 10 ಕೆ.ಜಿ ಅಕ್ಕಿ ಕೊಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಆಗ ಕೇಂದ್ರ ಸರ್ಕಾರ ಮತ್ತು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಅಕ್ಕಿ ನೀಡಲಿಲ್ಲ. ಇದೀಗ ಅಕ್ಕಿ ಕೊಡುವುದಾಗಿ ಮುಂದೆ ಬಂದಿದ್ದಾರೆ. ಆದ್ದರಿಂದ ಫೆಬ್ರವರಿಯಿಂದಲೇ ಹಣದ ಬದಲು ಅಕ್ಕಿ ವಿತರಿಸುತ್ತೇವೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನದ್ದು ಸೇರಿಸಿ ಕೊಡುತ್ತೇವೆ ಎಂದು ತಿಳಿಸಿದ್ದಾರೆ.

ಪಡಿತರ ಆಹಾರಿಂದ ಏನೆಲ್ಲಾ ಪ್ರಯೋಜನಾ: ಮತ್ತೊಂದೆಡೆ ಸರ್ಕಾರ ನೀಡಿದ ಪಡಿತರದಿಂದ ಆ ಕುಟುಂಬಗಳ 18 ಲಕ್ಷ ಮಕ್ಕಳು ಕುಂಠಿತ ಬೆಳವಣಿಗೆಯಿಂದ ಹೊರ ಬಂದಿದ್ದಾರೆ. ಜನರ ಆದಾಯ ಹೆಚ್ಚಳವಾಗಿದೆ. ಜನರಿಗೆ ವೈವಿಧ್ಯಮಯ ಆಹಾರ ಸೇವನೆ ಲಭ್ಯವಾಗಿದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಇದೇ ಪಡಿತರದಿಂದ ದೇಶದಲ್ಲಿ ಅದೆಷ್ಟೋ ಬಡಕುಟುಂಬಗಳು ಹಸಿವನ್ನು ನೀಗಿಸಿಕೊಳ್ಳುತ್ತಿವೆ. ಇದೀಗ ಈ ಪಡಿತರ ಆಹಾರಿಂದ ತುಂಬಾ ಮಕ್ಕಳಿಗೆ ಸಹಾಯಕಾರಿ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪಡಿತರ ಚೀಟಿಯಲ್ಲಿ ಏನಲ್ಲಾ ತಿದ್ದುಪಡಿಗೆ ಅವಕಾಶವಿದೆ?

* ಕುಟುಂಬದ ಮುಖ್ಯಸ್ಥರ ಬದಲಾವಣೆ

* ಪಡಿತರ ಚೀಟಿ ವಿಳಾಸ ಬದಲಾವಣೆ

* ರೇಷನ್ ಕಾರ್ಡ್ ನ್ಯಾಯಬೆಲೆ ಅಂಗಡಿ ಬದಲಾವಣೆ

* ಕುಟುಂಬದ ಹೊಸ ಸದಸ್ಯರ ಸೇರ್ಪಡೆ

* ರೇಷನ್ ಕಾರ್ಡ್‌ನಿಂದ ಸದಸ್ಯರ ತೆಗೆದು ಹಾಕುವುದು

* ರೇಷನ್ ಕಾರ್ಡ್‌ನಲ್ಲಿರುವ ಸದಸ್ಯರಿಗೆ ಈ ಕೆವೈಸಿ ಮಾಡಲು ಅವಕಾಶ

* ರೇಷನ್ ಕಾರ್ಡ್‌ನಲ್ಲಿರುವ ಸದಸ್ಯರಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಅವಕಾಶ

* ರೇಷನ್ ಕಾರ್ಡ್‌ಗೆ ಸಂಬಂಧಿಸಿದ ಇತರ ಬದಲಾವಣೆಗೆ ಮಾಡಿಸಬಹುದಾಗಿದೆ

ಹೊಸ ಸದಸ್ಯರ ಸೇರ್ಪಡೆ ಹೇಗೆ?

* ಅಧಿಕೃತ ವೆಬ್‌ಸೈಟ್‌ https://ahara.karnataka.gov.in/ ಭೇಟಿ ನೀಡಿ.

* ಪಬ್ಲಿಕ್ ಯೂಸ್ ಎಂಬ ಮೆನು ಬಾರ್ ಕೆಳಗೆ ಜಿಲ್ಲಾವಾರು ಮಾಹಿತಿ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಹೊಸ ಪಡಿತರ ಚೀಟಿ ಮತ್ತು ಪಡಿತರ ಚೀಟಿ ತಿದ್ದುಪಡಿ ಅಯ್ಕೆ ವಿಭಾಗಗಳು ಇವೆ.

* ಹೊಸ ರೇಷನ್‌ ಕಾರ್ಡ್‌ ಬೇಕಾದರೆ ಅಪ್ಲೈ ಫಾರ್ ನ್ಯೂ ರೇಷನ್ ಕಾರ್ಡ್‌ ಮತ್ತು ಪಡಿತರ ಚೀಟಿ ತಿದ್ದುಪಡಿಗಾದರೆ ಅಪ್ಲೈ ಫಾರ್ ರೇಷನ್ ಕಾರ್ಡ್ ಕರೆಕ್ಷನ್ಸ್ ಆಯ್ಕೆ ಸೆಲೆಕ್ಟ್ ಮಾಡಬೇಕಾಗುತ್ತದೆ.

* ಹೊಸ ಪೇಜ್‌ನಲ್ಲಿ ಕಾಣಸುವ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.

* ನಂತರ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಬೇಕು.

* ಪರಿಷ್ಕೃತ ಪಡಿತರ ಚೀಟಿ, ಹೊಸ ಪಡಿತರ ಚೀಟಿ ವಿತರಣೆ ಆಗುತ್ತದೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆಗಳು

* ಕುಟುಂಬದ ಸದಸ್ಯರ ಆಧಾರ್ ಕಾರ್ಡ್

* ಕುಟುಂಬದ ಸದಸ್ಯರ ಜಾತಿ ಪ್ರಮಾಣ ಪತ್ರ

* ಕುಟುಂಬದ ಸದಸ್ಯರ ಆದಾಯ ಪ್ರಮಾಣ ಪತ್ರ

* ಮಕ್ಕಳ ಜನನ ಪ್ರಮಾಣ ಪತ್ರ

* ಮೊಬೈಲ್ ನಂಬರ್

* ರೇಷನ್ ಕಾರ್ಡ್

* ಇತರ ಅಗತ್ಯ ದಾಖಲಾತಿಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+