Gold Price on October 16: ಬಂಗಾರದ ಬೆಲೆ ಎಷ್ಟಿದೆ ಗೊತ್ತಾ?: ಇಲ್ಲಿದೆ ಅಕ್ಟೋರ್ 16ರ ದರಪಟ್ಟಿ
Gold Price on October 16: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದ್ರೆ, ಇಂದು (ಅಕ್ಟೋಬರ್ 16) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾರ ದರಗಳ ವಿವರ: ನಿನ್ನೆ (ಅಕ್ಟೋಬರ್ 15) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,18,650 ರೂಪಾಯಿ ಇದ್ದರೆ, ಇಂದು (ಅಕ್ಟೋಬರ್ 16) 1,18,650 ರೂಪಾಯಿ ಆಗಿದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,29,440 ರೂಪಾಯಿ ಇತ್ತು. ಇನ್ನು ಇಂದು 1,29,440 ರೂಪಾಯಿ ಇದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

1 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 11,880 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 12,959 ರೂಪಾಯಿ
8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 95,040 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 1,03,672 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 1,18,800 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,29,590 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,18,800 ರೂಪಾಯಿ
* ಚೆನ್ನೈ - 1,19,000 ರೂಪಾಯಿ
* ಮುಂಬೈ - 1,18,650 ರೂಪಾಯಿ
* ಕೋಲ್ಕತ್ತಾ - 1,18,650 ರೂಪಾಯಿ
* ನವದೆಹಲಿ - 1,18,800 ರೂಪಾಯಿ
* ಹೈದರಾಬಾದ್ - 1,18,650 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,29,590 ರೂಪಾಯಿ
* ಚೆನ್ನೈ - 1,29,820 ರೂಪಾಯಿ
* ಮುಂಬೈ - 1,29,440 ರೂಪಾಯಿ
* ಕೋಲ್ಕತ್ತಾ - 1,29,440 ರೂಪಾಯಿ
* ನವದೆಹಲಿ - 1,29,590 ರೂಪಾಯಿ
* ಹೈದರಾಬಾದ್ - 1,29,440 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,94,000 ರೂಪಾಯಿ (1,000 ಇಳಿಕೆ)
* ಚೆನ್ನೈ - 2,06,000 ರೂಪಾಯಿ (1,000 ಇಳಿಕೆ)
* ಮುಂಬೈ - 1,89,000 ರೂಪಾಯಿ (1,000 ಇಳಿಕೆ)
* ಕೋಲ್ಕತ್ತಾ - 1,89,000 ರೂಪಾಯಿ (1,000 ಇಳಿಕೆ)
* ನವದೆಹಲಿ - 1,89,000 ರೂಪಾಯಿ (1,000 ಇಳಿಕೆ)
* ಹೈದರಾಬಾದ್ - 2,06,000 ರೂಪಾಯಿ (1,000 ಇಳಿಕೆ)
ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಂಗಾರ, ಬೆಳ್ಳಿ, ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಇನ್ನೂ ಈಗಾಗಲೇ ದಸರಾ ಮುಗಿದಿದ್ದು, ದೀಪಾವಳಿ ಹಬ್ಬಗಳು ಎಂಟ್ರಿ ಕೊಡಲಿವೆ. ಈ ಹಿನ್ನೆಲೆ ಈ ವೇಳೆಯೇ ಬಂಗಾರ ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಮುಂದಿನ ದಿನಗಳಲ್ಲಿ ಬಂಗಾರ ದರ ಮತ್ತಷ್ಟು ಏರಿಕೆಯಾದರೂ ಆಶ್ಚರ್ಯವಿಲ್ಲ. ಆದ್ದರಿಂದ ಈಗಲೇ ಕೊಂಡುಕೊಳ್ಳುವುದಕ್ಕೆ ಉತ್ತಮ ಸಮಯ. ಮತ್ತೊಂದೆಡೆ ನಿನ್ನೆಲೆ ಹೋಲಿಕೆ ಮಾಡಿದ್ರೆ, ಇಂದು ಬೆಳ್ಳಿ ಬೆಲೆ 1,000 ರೂಪಾಯಿ ಇಳಿಕೆಯಾಗಿದೆ.












Click it and Unblock the Notifications