ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು-ಮೈಸೂರು ಹೆದ್ದಾರಿಗೆ ಟೋಲ್ ಕಟ್ಟಲು ಸಜ್ಜಾಗಿ

|
Google Oneindia Kannada News

ಬೆಂಗಳೂರು, ಸೆ.9 : ಮುಂದಿನವಾರ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಸಮೀಕ್ಷೆಯನ್ನು ಆರಂಭಿಸಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಾದ ಬಳಿಕ ಬಳಕೆದಾರರಿಂದ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಸಚಿವ ಎಚ್.ಸಿ.ಮಹದೇವಪ್ಪ ಅವರು, ಬೆಂಗಳೂರು- ಮೈಸೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದ­ರ್ಜೆ­­ಗೇರಿಸಿ ಕೇಂದ್ರ ಭೂಸಾರಿಗೆ ಇಲಾಖೆ ಆದೇಶ ಹೊರಡಿಸಿದೆ ಎಂದರು. 3,000 ಕೋಟಿ ರೂ. ವೆಚ್ಚದಲ್ಲಿ ಈ ಮಾರ್ಗದಲ್ಲಿ ಆರು ಪಥದ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿ­ಸುವ ಕುರಿತು ಸಮೀಕ್ಷೆ ನಡೆಸಲು ಒಪ್ಪಿಗೆ ದೊರೆತಿದ್ದು, ಮುಂದಿನ ವಾರ ಸಮೀಕ್ಷೆ ಕಾರ್ಯವನ್ನು ಆರಂಭಿಸಲಾಗುತ್ತದೆ ಎಂದು ಹೇಳಿದರು.

hc mahadevappa

ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಂಡ ಬಳಿಕ, ಹೆದ್ದಾರಿ ಬಳಕೆದಾರರಿಂದ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತದೆ. ಆದರೆ, ಸರ್ವೀಸ್‌ ರಸ್ತೆ ಬಳಕೆಗೆ ಶುಲ್ಕ ಇರು­­ವು­ದಿಲ್ಲ. ರಾಷ್ಟ್ರೀಯ ಹೆದ್ದಾರಿ ಅಭಿ­ವೃದ್ಧಿ ಪ್ರಾಧಿ­­ಕಾರದ ಶುಲ್ಕ ನೀತಿ ಪ್ರಕಾರ ಶುಲ್ಕ ನಿಗದಿ ಮಾಡಲಾಗುತ್ತದೆ ಎಂದರು. [ಆರು ಪಥವಾಗಲಿದೆ ಬೆಂಗಳೂರು-ಮೈಸೂರು ಹೆದ್ದಾರಿ]

ಸಮೀಕ್ಷೆಗಾಗಿ 2.75 ಕೋಟಿ : ಬೆಂಗಳೂರು-ಮೈಸೂರು ಹೆದ್ದಾರಿಯ ಸಮೀಕ್ಷೆಯನ್ನು ಬೆಂಗಳೂರಿನ ಸೀಕಾನ್‌ ಕಂಪೆನಿ ಮಾಡಲಿದ್ದು ಇದಕ್ಕಾಗಿ ರೂ 2.75 ಕೋಟಿ ಬಿಡು­ಗಡೆ ಮಾಡಲಾಗಿದೆ. ಎರಡು ತಿಂಗ­ಳೊ­ಳಗೆ ಪ್ರಾಥಮಿಕ ಹಂತದ ಸಮೀಕ್ಷೆ ಪೂರ್ಣ­­ಗೊಳ್ಳಲಿದೆ. ನಂತರದ ನಾಲ್ಕು ತಿಂಗ­ಳಲ್ಲಿ ವಿಸ್ತೃತ ಯೋಜನಾ ವರದಿ ಸಿದ್ಧಗೊಳ್ಳಲಿದ್ದು, ಆರು ತಿಂಗಳ ಅವ­ಧಿ­ಯಲ್ಲಿ ವರದಿಗೆ ಒಪ್ಪಿಗೆ ಪಡೆದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಇದೆ ಎಂದರು. [ರಾಷ್ಟೀಯ ಹೆದ್ದಾರಿಯಾಗಲಿರುವ ರಾಜ್ಯದ 7 ರಸ್ತೆಗಳು]

123 ಕಿ.ಮೀ. ಮಾರ್ಗದಲ್ಲಿ ಆರು ಪಥದ ಹೆದ್ದಾರಿ ಮತ್ತು ಸರ್ವೀಸ್‌ ರೋಡ್‌ ನಿರ್ಮಿಸ­ಲಾ­ಗು­ತ್ತದೆ. 2015ರಲ್ಲಿ ಕಾಮಗಾರಿ ಆರಂ­ಭ­­­­­ವಾಗುವ ಸಾಧ್ಯತೆ ಇದ್ದು, 2018­ರಲ್ಲಿ ಬಳಕೆಗೆ ಮುಕ್ತಗೊಳಿಸುವ ಗುರಿ ಇದೆ. ಈ ಮಾರ್ಗದಲ್ಲಿ ಬಿಡದಿ ಮತ್ತು ಶ್ರೀರಂಗ­­ಪ­ಟ್ಟಣದಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತದೆ. ರಾಮ­ನಗರ, ಚನ್ನಪಟ್ಟಣ, ಮಂಡ್ಯದಲ್ಲಿ ಬೈಪಾಸ್‌ ರಸ್ತೆ ನಿರ್ಮಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

English summary
Karnataka Public Works Department Minister H.C.Mahadevappa said, the road between Bangalore and Mysore 123 km long will be a six-lane tolled stretch as per the NHAI 2008 toll policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X