ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿ ಲಂಕೇಶ್‌ ಹಂತಕರ ಮಾಸ್ಟರ್ ಪ್ಲಾನ್‌ಗೆ ಎಸ್‌ಐಟಿಯೇ ಕಂಗಾಲು

By Manjunatha
|
Google Oneindia Kannada News

ಬೆಂಗಳೂರು, ಆಗಸ್ಟ್ 06: ಗೌರಿ ಲಂಕೇಶ್ ಹತ್ಯೆ ನಡೆದು ವರ್ಷವಾಗಲು ಇನ್ನು ಒಂದು ತಿಂಗಳಷ್ಟೆ ಬಾಕಿ ಇದೆ. ಆದರೆ ಈ ವರೆಗೆ ಹತ್ಯೆಯ ಸಂಪೂರ್ಣ ಸಾಕ್ಷ್ಯಗಳನ್ನು ಎಸ್‌ಐಟಿ ವಶಪಡಿಸಿಕೊಳ್ಳಲಾಗಿಲ್ಲ.

ಇತ್ತೀಚೆಗೆ ತನಿಖೆ ಬಿರುಸು ಪಡೆದು ಹಲವರನ್ನು ಬಂಧಿಸಲಾಗಿದೆಯಾದರೂ, ಪ್ರಕರಣದ ಹಿಂದಿನ ಪ್ರಮುಖ ವ್ಯಕ್ತಿ ನಿಹಾಲ್ ಅಲಿಯಾಸ್ ದಾದಾ ಇನ್ನೂ ಪೊಲೀಸರ ಕೈಗೆ ಸಿಕ್ಕೇ ಇಲ್ಲ. ಅಲ್ಲದೆ ಹತ್ಯೆಗೆ ಬಳಸಿದ ಬಂದೂಕು ಮತ್ತು ಬೈಕ್‌ ಸಹ ದೊರೆತಿಲ್ಲ.

ಗೌರಿ ಲಂಕೇಶ್ ಹತ್ಯೆ ನಡೆದು ಬರೋಬ್ಬರಿ ಆರು ತಿಂಗಳಾದ ಮೇಲೆ ಎಸ್‌ಐಟಿ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದರು. ಅಲ್ಲಿಯವರೆಗೆ ಕೇಸಿನಲ್ಲಿ ಸಣ್ಣ ಲೀಡ್ ಸಹ ಎಸ್‌ಐಟಿಗೆ ಸಿಕ್ಕಿರಲಿಲ್ಲ ಅಷ್ಟು ಜಾಗೃತೆ ವಹಿಸಿದ್ದರು ಹಂತಕರು. ನವೀನ್ ಕುಮಾರ್‌ ನನ್ನು ಉಪ್ಪಾರಪೇಟೆ ಪೊಲೀಸರು ಅಕ್ರಮ ಶಸ್ತ್ರಸ್ತ್ರಾ ಹೊಂದಿದ ಆರೋಪದಲ್ಲಿ ಬಂಧಿಸಿದ ಮೇಲೆಯಷ್ಟೆ ಪ್ರಕರಣದ ಬಗ್ಗೆ ಎಸ್‌ಐಟಿಗೆ ಮಾಹಿತಿ ಸಿಕ್ಕಿದ್ದು.

ಎಂ.ಎಂ.ಕಲಬುರ್ಗಿ ಕೊಂದವರೇ ಗೌರಿ ಲಂಕೇಶ್ ಹತ್ಯೆ ಮಾಡಿದ್ದು!ಎಂ.ಎಂ.ಕಲಬುರ್ಗಿ ಕೊಂದವರೇ ಗೌರಿ ಲಂಕೇಶ್ ಹತ್ಯೆ ಮಾಡಿದ್ದು!

ತಂತ್ರಜ್ಞಾನ, ಮಾಹಿತಿ ಜಾಲ, ತರಬೇತಿ ಪಡೆದಿರುವ ಅಧಿಕಾರಿಗಳು, ಹಣ ಎಲ್ಲ ಇದ್ದುಕೊಂಡು ಸಹ ಸತತ ಆರು ತಿಂಗಳುಗಳ ಕಾಲ ಎಸ್‌ಐಟಿಗೆ ಸಣ್ಣ ಲೀಡ್ ಸಹ ಸಂಪಾದನೆ ಮಾಡಲು ಆಗಿರಲಿಲ್ಲವೆಂದರೆ ಹಂತಕರು ಎಷ್ಟು ನಯವಾಗಿ ಪ್ಲಾನ್ ಮಾಡಿದ್ದರೆಂಬುದು ತಿಳಿಯುತ್ತದೆ.

ಪ್ರತಿಯೊಂದಕ್ಕೂ ನಿಯಮ ರೂಪಿಸಲಾಗಿತ್ತು

ಪ್ರತಿಯೊಂದಕ್ಕೂ ನಿಯಮ ರೂಪಿಸಲಾಗಿತ್ತು

ಹಂತಕರ ತಂಡದ ನಾಯಕ ಅಲಿಖಿತ ನಿಯಮವೊಂದನ್ನು ರೂಪಿಸಿದ್ದ ಅದರಂತೆಯೇ ತಂಡದ ಸದಸ್ಯರೆಲ್ಲರೂ ನಡೆದುಕೊಳ್ಳುತ್ತಿದ್ದರು. ಹತ್ಯೆಗೆ ಮುನ್ನಾ ಹಾಗೂ ಹತ್ಯೆಯ ನಂತರ ತಂಡದ ಸದಸ್ಯರು ಹೇಗೆ ಇರಬೇಕು, ವರ್ತಿಸಬೇಕು, ಸಂಪರ್ಕ ಹೇಗಿರಬೇಕು ಎಲ್ಲವೂ ಅದರಲ್ಲಿ ಅಡಕವಾಗಿತ್ತು.

ಗೌರಿ ಲಂಕೇಶ್ ಹತ್ಯೆ : ಉಪ್ಪಿನಂಗಡಿ ಮೂಲದ ವ್ಯಕ್ತ ವಿಚಾರಣೆಗೌರಿ ಲಂಕೇಶ್ ಹತ್ಯೆ : ಉಪ್ಪಿನಂಗಡಿ ಮೂಲದ ವ್ಯಕ್ತ ವಿಚಾರಣೆ

ಮತ್ತೊಬ್ಬರ ಮಾಹಿತಿ ಕೊಡುವಂತಿಲ್ಲ

ಮತ್ತೊಬ್ಬರ ಮಾಹಿತಿ ಕೊಡುವಂತಿಲ್ಲ

ಹಂತಕರ ತಂಡದ ಯಾರೇ ಪೊಲೀಸರಿಗೆ ಸಿಕ್ಕಿಬಿದ್ದರೂ ಕೂಡ ಮತ್ತೊಬ್ಬ ಸದಸ್ಯನ ಬಗ್ಗೆ ಮಾಹಿತಿ ನೀಡುವಂತಿಲ್ಲ ಎಂಬುದು ಮೊದಲ ನಿಯಮ. ಮೊದಲಿಗೆ ಬಂಧಿತನಾದ ನವೀನ್‌ ಕುಮಾರ್‌ ಇತರರ ಬಗ್ಗೆ ಮಾಹಿತಿ ನೀಡದ ಕಾರಣ ಆತನಿಗೆ ಮಂಪರು ಪರೀಕ್ಷೆ ಮಾಡಿಸುವ ಬಗ್ಗೆ ಎಸ್‌ಐಟಿ ನಿರ್ಧರಿಸಿತ್ತು.

ಪೊಲೀಸ್ ಮನೆಯಲ್ಲಿ ಕೂತೇ ಗೌರಿ ಹತ್ಯೆಗೆ ಸ್ಕೆಚ್ ಹಾಕಿದ್ದ ಹಂತಕರು!ಪೊಲೀಸ್ ಮನೆಯಲ್ಲಿ ಕೂತೇ ಗೌರಿ ಹತ್ಯೆಗೆ ಸ್ಕೆಚ್ ಹಾಕಿದ್ದ ಹಂತಕರು!

ನಿಜವಾದ ಹೆಸರು ಹೇಳುವಂತಿರಲಿಲ್ಲ

ನಿಜವಾದ ಹೆಸರು ಹೇಳುವಂತಿರಲಿಲ್ಲ

ಯಾವೊಬ್ಬ ಸದಸ್ಯರೂ ತಮ್ಮ ನಿಜ ಹೆಸರನ್ನು ಹೇಳಿಕೊಳ್ಳುವಂತಿರಲಿಲ್ಲ, ತಂಡದ ಸದಸ್ಯರು ಭೇಟಿ ಆದಾಗಲೂ ಸಹ ಅವರ ಜೀವನದ ಬಗ್ಗೆಯಾಗಲಿ, ವೃತ್ತಿ, ಕುಟುಂಬ, ಊರು ಇನ್ನಿತರ ವೈಯಕ್ತಿಕ ಮಾಹಿತಿಗಳ ಬಗ್ಗೆ ಚರ್ಚೆ ಮಾಡುವಂತೆ ಇರಲಿಲ್ಲ. ತಂಡದ ಯಾರೊಬ್ಬರಿಗೂ ಮತ್ತೊಬ್ಬರ ಬಗ್ಗೆ ಮಾಹಿತಿಯೇ ಗೊತ್ತಿರಲಿಲ್ಲ.

ಕಾಳೆ ಹಾಗೂ ನಿಹಾಲ್‌ನ ಪರಿಚಯ

ಕಾಳೆ ಹಾಗೂ ನಿಹಾಲ್‌ನ ಪರಿಚಯ

ಬಲಪಂಥೀಯ ಸಂಘಟನೆಯೊಂದರ ಮುಖಂಡರೊಬ್ಬರು ಈಗ ಎಸ್‌ಐಟಿ ವಶದಲ್ಲಿರುವ ಸುಜಿತ್ ಅಲಿಯಾಸ್ ಪ್ರವೀಣ್‌ಗೆ 'ಹಿಂದೂ ಧರ್ಮಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವವರನ್ನು ಪರಿಚಯ ಮಾಡಿಸುವಂತೆ ಕೇಳಿದ್ದರಂತೆ, ಅದರಂದೆ ಆತ ಅಮೋಲ್ ಕಾಳೆ ಹಾಗೂ ನಿಹಾಲ್ (ತಲೆಮರೆಸಿಕೊಂಡಿರುವಾತ)ನನ್ನು ಪರಿಚಯ ಮಾಡಿಸಿಕೊಟ್ಟಿದ್ದನಂತೆ.

ಒಬ್ಬರ ಬಗ್ಗೆ ಮತ್ತೊಬ್ಬರು ಕೇಳುವಂತಿರಲಿಲ್ಲ

ಒಬ್ಬರ ಬಗ್ಗೆ ಮತ್ತೊಬ್ಬರು ಕೇಳುವಂತಿರಲಿಲ್ಲ

ಒಬ್ಬ ವ್ಯಕ್ತಿಯ ಬಗ್ಗೆ ಮತ್ತೊಬ್ಬ ವ್ಯಕ್ತಿ ಕೇಳುವಂತೆ ಸಹ ಇರಲಿಲ್ಲ. ಹೊಸ ಸದಸ್ಯನನ್ನು ತಂಡದ ಮುಖ್ಯಸ್ಥನಿಗೆ ಪರಿಚಯ ಮಾಡಿಸಿದ ನಂತರ ಪರಿಚಯ ಮಾಡಿಸಿದಾತ ಆ ವ್ಯಕ್ತಿಯ ಬಗ್ಗೆ ಮುಖ್ಯಸ್ಥನ ಬಳಿ ವಿಚಾರಿಸುವಂತಿರಲಿಲ್ಲ. ಮುಖ್ಯಸ್ಥ ಸಹ ಹೊಸ ಸದಸ್ಯನ ಬಗ್ಗೆ ಮಾಹಿತಿ ನೀಡುತ್ತಿರಲಿಲ್ಲ.

ಮೊಬೈಲ್ ನಂಬರ್ ನೀಡುವಂತಿರಲಿಲ್ಲ

ಮೊಬೈಲ್ ನಂಬರ್ ನೀಡುವಂತಿರಲಿಲ್ಲ

ಹೊಸ ಸದಸ್ಯನನ್ನು ತಂಡಕ್ಕೆ ಸೇರಿಸಿಕೊಂಡ ನಂತರ ಹಲವು ತಿಂಗಳುಗಳ ಕಾಲ ಅವನನ್ನು ಪರೀಕ್ಷಿಸಲಾಗುತ್ತಿತ್ತು. ತಂಡಕ್ಕೆ ಸೇರಿಸಿಕೊಂಡ ಸದಸ್ಯನ ಬಗ್ಗೆ ಗೂಡಾಚಾರಿಕೆ ಮಾಡಲಾಗುತ್ತಿತ್ತು. ಅವನು ನಂಬಲರ್ಹ ಎಂದು ಗೊತ್ತಾದ ಮೇಲಷ್ಟೆ ಅವನಿಗೆ ಮೊಬೈಲ್ ನಂಬರ್ ನೀಡಲಾಗುತ್ತಿತ್ತು.

ಮೊಬೈಲ್ ಕರೆಗಳ ಬಗ್ಗೆ ಪೂರ್ಣ ಎಚ್ಚರಿಕೆ

ಮೊಬೈಲ್ ಕರೆಗಳ ಬಗ್ಗೆ ಪೂರ್ಣ ಎಚ್ಚರಿಕೆ

ಒಬ್ಬ ಸದಸ್ಯನಿಗೆ ಕರೆ ಮಾಡಿದ ಮೊಬೈಲ್ ಸಂಖ್ಯೆಯಿಂದ ಮತ್ತೊಬ್ಬ ಸದಸ್ಯನಿಗೆ ಕರೆ ಮಾಡುತ್ತಿರಲಿಲ್ಲ. ಪ್ರತಿಯೊಬ್ಬನಿಗೂ ಬೇರೆ ಬೇರೆ ಸಿಮ್‌ಗಳ ಮೂಲಕವೇ ಕರೆ ಮಾಡಲಾಗುತ್ತಿತ್ತು. ಸದಸ್ಯರು ಮುಖ್ಯಸ್ಥನಿಗೆ ಕರೆ ಮಾಡಬೇಕೆಂದರೆ ಪಬ್ಲಿಕ್ ಬೂತ್‌ನಿಂದಲೇ ಕರೆ ಮಾಡಬೇಕಿತ್ತು.

ಭೇಟಿ ಮಾಡಬೇಕಾದರೆ ಪೂರ್ಣ ಎಚ್ಚರಿಕೆ

ಭೇಟಿ ಮಾಡಬೇಕಾದರೆ ಪೂರ್ಣ ಎಚ್ಚರಿಕೆ

ಯಾವುದೇ ಸದಸ್ಯನ ಭೇಟಿ ಮಾಡಬೇಕೆಂದರೆ ದೇವಾಲಯ, ಬಸ್ ನಿಲ್ದಾಣ ಇಂತಹಾ ಜನನಿಬಿಡ ಪ್ರದೇಶಗಳಲ್ಲೇ ಭೇಟಿ ಮಾಡಲಾಗುತ್ತಿತ್ತು. ನಿರ್ಜನ ಪ್ರದೇಶದಲ್ಲಿ ಭೇಟಿ ಮಾಡಿದರೆ ಅನುಮಾನ ಬರುತ್ತದೆ ಎಂದು ಹೀಗೆ ಮಾಡಲಾಗುತ್ತಿತ್ತು.

ಗೌಪ್ಯತೆಗೆ ಹೆಚ್ಚಿನ ಆದ್ಯತೆ

ಗೌಪ್ಯತೆಗೆ ಹೆಚ್ಚಿನ ಆದ್ಯತೆ

ತಮಗೆ ವಹಿಸಲಾಗಿರುವ ಕಾರ್ಯದ ಬಗ್ಗೆ ತಂಡದ ಯಾವ ಸದಸ್ಯನಿಗೂ ತಿಳಿಸದಂತೆ ನಿಯಮ ಹೇರಲಾಗಿತ್ತು. ಪರಶುರಾಮ್‌ ವಾಘ್ಮೊರೆಯೇ ಕೊಲೆ ಮಾಡಲು ತೆರಳುತ್ತಾನೆ ಎಂಬುದು ಆತನಿಗೆ ಮತ್ತು ಆ ಜವಾಬ್ದಾರಿ ವಹಿಸಿದವನಿಗೆ ಮಾತ್ರವೇ ತಿಳಿದಿತ್ತು. ಪರಶುರಾಮ್‌ಗೆ ಸಹ ಅಂದು ಆತನನ್ನು ಗೌರಿ ಮನೆಗೆ ಕರೆದೊಯ್ದವ ಯಾರು ಎಂಬುದು ಗೊತ್ತಿರದ್ದಕ್ಕೆ ಕಾರಣವೂ ಇದೆ.

ಸಾಕ್ಷ ನಾಶಕ್ಕೂ ಒಬ್ಬ

ಸಾಕ್ಷ ನಾಶಕ್ಕೂ ಒಬ್ಬ

ಹತ್ಯೆ ಮುಗಿದ ನಂತರ ಸಾಕ್ಷ ನಾಶಕ್ಕೂ ಮೊದಲೆ ಯೋಜನೆ ರೂಪಿಸಲಾಗಿತ್ತು ಮತ್ತು ಅದಕ್ಕಾಗಿ ಒಬ್ಬನನ್ನು ನೇಮಿಸಲಾಗಿತ್ತು. ಎಸ್‌ಐಟಿ ಪ್ರಕಾರ ಕುಣಿಗಲ್‌ನಲ್ಲಿ ಬಂಧಿತನಾದ ಸುರೇಶ್‌ ಸಾಕ್ಷ ನಾಶ ಮಾಡಿದ್ದಾನೆ ಎನ್ನಲಾಗಿದೆ.

English summary
Gauri Lankesh assassinates planed well before the they commit murder. They created rules and regulations for the team members and every one follows it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X