ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿ ಹತ್ಯೆ: 11ನೇ ಆರೋಪಿಯನ್ನು ಬಂಧಿಸಿದ ಎಸ್‌ಐಟಿ ಪೊಲೀಸ್

By Manjunatha
|
Google Oneindia Kannada News

ಬೆಂಗಳೂರು, ಜುಲೈ 26: ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣದಲ್ಲಿ ಎಸ್‌ಐಟಿ ಪೊಲೀಸರು ಇಂದು ಒಬ್ಬನನ್ನು ಬಂಧಿಸಿದ್ದು. ಈ ವರೆಗೆ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತುಮಕೂರಿನಲ್ಲಿ ಸುರೇಶ್ ಎಂಬಾತನನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದು, ಹತ್ಯೆಯ ಮುಖ್ಯ ಆರೋಪಿ ಪರಶುರಾಮ್ ವಾಘ್ಮೋರೆ ಹಾಗೂ ಪ್ರವೀಣ್ ಅಲಿಯಾಸ್ ಸುಜಿತ್‌ನಿಗೆ ಈತ ಮನೆ ಬಾಡಿಗೆ ನೀಡಿ ಸಹಕರಿಸಿದ್ದ ಎನ್ನಲಾಗಿದೆ.

ಗೌರಿ ಲಂಕೇಶ್ ಹತ್ಯೆ : ಗನ್ ಮತ್ತು ಬೈಕ್‌ಗಾಗಿ ಎಸ್‌ಐಟಿ ಶೋಧ ಗೌರಿ ಲಂಕೇಶ್ ಹತ್ಯೆ : ಗನ್ ಮತ್ತು ಬೈಕ್‌ಗಾಗಿ ಎಸ್‌ಐಟಿ ಶೋಧ

ಸುರೇಶ್ ನಿಗೆ ಗೌರಿ ಹತ್ಯೆಯ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಸಹಿತ ಮನೆ ಬಾಡಿಗೆ ನೀಡಿ ಸಹಕಾರ ನೀಡಿದ್ದ ಎಂದು ಎಸ್‌ಐಟಿ ಹೇಳಿದೆ.

Gauri Lakesh murder case: SIT arrest another accused

ಪರಶುರಮ್ ವಾಘ್ಮೋರೆ ವಿಚಾರಣೆ ವೇಳೆ ಈ ವಿಷಯವನ್ನು ಎಸ್‌ಐಟಿ ಬಳಿ ಹೇಳಿದ್ದ. ಹಾಗಾಗಿ ಇಂದು ಸರೇಶ್‌ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಮತ್ತೆ ಎಸ್‌ಐಟಿ ವಶಕ್ಕೆ ಪಡೆಯಲಾಗಿದೆ.

ಕಳೆದ ಮೂರು ದಿನಗಳಲ್ಲಿ ಒಟ್ಟು ನಾಲ್ಕು ಜನ ಆರೋಪಿಗಳನ್ನು ಗೌರಿ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ಪೊಲೀಸರು ಬಂಧಿಸಿದ್ದು, ಕೊನೆಯದಾಗಿ ಹತ್ಯೆಗೆ ಬಳಸಿದ್ದ ಬಂದೂಕು ಮತ್ತು ವಾಹನ ಹುಡುಕಾಟದಲ್ಲಿದ್ದಾರೆ ಅವೆರಡೂ ದೊರೆತರೆ ತನಿಖೆ ಪೂರ್ಣಗೊಳ್ಳುತ್ತದೆ.

English summary
SIT police arrested Suresh in Tumkur who helped Gauri Lankesh murder accused Parashuram and Praveen. SIT arrested 11 members till now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X