Gas: ವಾಣಿಜ್ಯ ಗ್ಯಾಸ್ ದರ ಭಾರೀ ಏರಿಕೆ; ಊಟ ತಿಂಡಿ ಬೆಲೆ ಹೆಚ್ಚಳ, ಗ್ರಾಹಕರಿಗೂ ಬರೆ-ಹೋಟೆಲ್ ಉದ್ಯಮಕ್ಕೂ ಹೊರೆ

Gas Cylinder Price Hike: 2026 ಮಾರ್ಚ್‌ ತಿಂಗಳಲ್ಲಿ ಏರಿಕೆ ಆಗಿದ್ದ ವಾಣಿಜ್ಯ ಬಳಕೆಯ ಸಿಲಿಂಡರ್ (19ಕೆಜಿ ಗ್ಯಾಸ್) ದರ ಇಂದು ಮೇ 1ರಂದು ಶುಕ್ರವಾರ ಮತ್ತೆ ಬರೋಬ್ಬರಿ 991 ರೂಪಾಯಿ ಏರಿಕೆ ಆಗಿದೆ ಈ ಮೂಲಕ ಕೇಂದ್ರ ಸರ್ಕಾರ ಕಾರ್ಮಿಕರ ದಿನದಂದು ಜನರಿಗೆ ಆಘಾತ ನೀಡಿದೆ. 'ಪಂಚ ರಾಜ್ಯ ಚುನಾವಣೆ ಮುಗಿದ ಬಳಿಕ ಪ್ರಧಾನಿ ಮೋದಿಯವರ ತಮ್ಮ ಬುದ್ಧಿ ತೋರಿಸಿದ್ದಾರೆ' ಎಂದು ಹೋಟೆಲ್ ಮಾಲೀಕರು ದೂರಿದ್ದಾರೆ. ದರ ಏರಿಕೆಗೆ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಇತಿಹಾಸದಲ್ಲೇ ದೊಡ್ಡಮಟ್ಟದ ಗ್ಯಾಸ್ ದರ ಏರಿಕೆ ಆಗಿದ್ದು, ಈ ನಿರ್ಧಾರವು ನೇರ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ

ಕೊಲ್ಲಿ ರಾಷ್ಟ್ರಗಳ ಯುದ್ಧದಿಂದಾಗಿ ಪೂರೈಕೆ ಸಮಸ್ಯೆ ಆಗಿತ್ತು. ಆಗಲೂ ಕನಿಷ್ಠ ಮಟ್ಟದಲ್ಲಿ ದರ ಏರಿಕೆ ಆಗಿತ್ತು. ಇದೀಗ ಅತ್ಯಧಿಕ ಗರಿಷ್ಠ ದರದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆಯಲಾಗಿದೆ. ನಿರೀಕ್ಷೆಯಂತೆ ಪಂಚರಾಜ್ಯ ವಿಧಾನಸಭಾ ಚುನಾವಣೆ 2026 (ಅಸ್ಸಾಂ, ಕೇರಳ, ತಮಿಳುನಾಡು, ಪುದುಚೇರಿ ಮತ್ತು ಪಶ್ಚಿಮ ಬಂಗಾಳ) ಮುಗಿದ ಬೆನ್ನಲ್ಲೆ ಕೇಂದ್ರವು ಅನಿಲ ದರ ಹಚ್ಚಿಸಿದೆ. ಈ ಮೂಲಕ ಪ್ರಧಾನಮಂತ್ರಿಗಳು ತಮ್ಮ ಬುದ್ಧಿ ತೋರಿಸಿದ್ದಾರೆ. ಇಷ್ಟೊಂದು ದರ ಏರಿಕೆ ಸರಿನಾ? ನ್ಯಾಯವೇ? ಎಂದು ಬೆಂಗಳೂರು ಹೋಟೆಲ್ ಮಾಲೀಕರು ಪ್ರಶ್ನಿಸಿದ್ದಾರೆ.

Gas

ಊಟ-ತಿಂಡಿ ದರ ಏರಿಕೆ ಅನಿವಾರ್ಯ! ಜನರಿಗೂ ಬರೆ

ಬೆಂಗಳೂರು ಸೇರಿ ರಾಜ್ಯದಲ್ಲಿ ಅಗತ್ಯ ವಸ್ತುಗಳು, ಸಾರಿಗೆ ಪ್ರಯಾಣ ದರ ಏರಿಕೆಯಿಂದ ಜನರು ಕಂಗಾಲಾಗಿದ್ದರು. ನೌಕರ ವರ್ಗವು ಉದ್ಯೊಗ ವಜಾ ಎದುರಿಸುತ್ತಿದೆ. ಇದೆಲ್ಲದರ ಮಧ್ಯೆ ಬೆಲೆಗಳು ಏರಿಕೆ ಆಗುತ್ತಿವೆ. ಇದೀಗ ವಾಣಿಜ್ಯ ಸಿಲಿಂಡರ್ ದರ ಏರಿಕೆಯಿಂದ ಹೋಟೆಲ್, ಊಟ-ತಿಂಡಿ, ಟೀ-ಕಾಫಿ ಬೆಲೆ ಏರಿಕೆ ಮಾಡುವ ಬಗ್ಗೆ ಹೋಟೆಲ್ ಉದ್ಯಮಿಗಳು ಗಂಭೀರ ಚಿಂತನೆ ಮಾಡಿದ್ದಾರೆ.

ಈ ಹಿಂದೆ ತಾತ್ಕಾಲಿಕವಾಗಿ ಗ್ಯಾಸ್ ಹೆಚ್ಚಳದ (ಪೂರೈಕೆ ಕೊರತೆ ಹಿನ್ನೆಲೆ ಬ್ಲಾಕ್‌ನಲ್ಲಿ ಅಧಿಕ ಬೆಲೆ ಗ್ಯಾಸ್ ಖರೀದಿ) ದರವನ್ನು ಹೋಟೆಲ್ ಊಟ ತಿಂಡಿ ಬಿಲ್‌ನಲ್ಲಿ ಜನರಿಗೆ ವಸೂಲಿ ಮಾಡಲಾಗಿತ್ತು. ಇನ್ನೇನು ಹಾರ್ಮುಜ್ ಜಲಸಂಧಿಯಿಂದ ತೈಲದ ಹಡಗು ಬರುತ್ತಿವೆ, ಸಮಸ್ಯೆಗೆ ಪರಿಹಾರ ಸಿಕ್ಕಿತು ಎನ್ನುವಷ್ಟರಲ್ಲಿ ಕೇಂದ್ರವು ಅನಿಲ ದರ ಏರಿಕೆ ಮಾಡಿದೆ. ಹೋಟೆಲ್ ಉತ್ಪನ್ನಗಳ ದರ ಹೆಚ್ಚಾದರೆ ಅದರ ನೇರ ಪರಿಣಾಮ ಹೋಟೆಲ್ ಉದ್ಯಮ ಮತ್ತು ಗ್ರಾಹಕರ ಮೇಲೆ ಉಂಟಾಗುತ್ತದೆ. ದರ ಏರಿಕೆ ನಿರ್ಧಾರ ಸರಿಯಲ್ಲ ಎಂಬ ಸಾರ್ವಜನಿಕ ಆಕ್ರೋಶಗಳು ವ್ಯಕ್ತವಾಗಿವೆ.

ಹೋಟೆಲ್ ಉದ್ಯಮ ಮುಚ್ಚುತ್ತೇವೆ?

ಮೊದಲಿನ ದರಕ್ಕೆ ಸಮರ್ಪಕವಾಗಿ ವಾಣಿಜ್ಯ ಬಳಕೆಯ ಅನಿಲವು ಪೂರೈಕೆ ಆಗಲಿವೆ ಎಂಬ ಹೋಟೆಲ್ ಮಾಲೀಕರ ನಿರೀಕ್ಷೆ ಹುಸಿಯಾಗಿದೆ. ಗ್ಯಾಸ್ ದರ ಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಈಗಾಗಲೇ ಹೋಟೆಲ್ ಉದ್ಯಮವು ಸಂಕಷ್ಟದಲ್ಲಿದೆ. ಬೆಲೆ ಹೆಚ್ಚಿಸಿದರೆ ಮತ್ತಷ್ಟು ನಷ್ಟವಾಗಲಿದೆ. ಆದರೆ ಇಷ್ಟೊಂದು ಹಣ ನೀಡಿ ಅನಿಲ ಬಳಸಿ ಹೋಟೆಲ್ ನಡೆಸಿದರೆ ಊಟ ತಿಂಡಿ ದರ ಏರಿಕೆ ಮಾಡುವುದು ಅನಿವಾರ್ಯವಾಗುತ್ತದೆ. ಆಗ ಗ್ರಾಹಕರ ಬರದೇ ಹೋದರೆ ಉದ್ಯಮ ಮುಚ್ಚುವ ಸ್ಥಿತಿ ಬರುತ್ತದೆ. ಇದಕ್ಕೆಲ್ಲ ಕೇಂದ್ರ ಸರ್ಕಾರ ಕಾರಣವೆಂದು ಕೆಲವು ಹೋಟೆಲ್ ಮಾಲೀಕರು ಅಸಹಾಯಕತೆ ವ್ಯಕ್ತಪಡಿಸಿದರು. ದರ ಇಳಿಸದೇ ಹೋದರೆ ಹೋಟೆಲ್ ಮಾಲೀಕರಿಗೆ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ಅವರು ಮನವಿ ಮಾಡಿದರು.

ಮಾರ್ಚ್‌ ತಿಂಗಳಲ್ಲಿ ಹೆಚ್ಚಾದ ವಾಣಿಜ್ಯ ಗ್ಯಾಸ್ ದರ

* ಮಾರ್ಚ್ 01ರಂದು 28 ರಿಂದ 31 ರೂಪಾಯಿ ಏರಿಕೆ

* ಮಾರ್ಚ್ 07 ರಂದು 114.5 ರೂಪಾಯಿ ಹೆಚ್ಚಳ

* ಮೇ 1ರಂದು 991 ರೂಪಾಯಿ ಏರಿಕೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+