Garlic price spike: ಬೆಳ್ಳುಳ್ಳಿ ಈಗ ಭಾರೀ ದುಬಾರಿ: ಒಗ್ಗರಣೆಗೆ ಬಂತು ಕುತ್ತು, ಬೆಲೆಗಳ ಮಾಹಿತಿ
ಹುಬ್ಬಳ್ಳಿ, ಡಿಸೆಂಬರ್ 13: ಈರುಳ್ಳಿ, ಬೆಳ್ಳುಳ್ಳಿ ಪ್ರತಿ ಮನೆಯ ಅಡುಗೆಮನೆಯಲ್ಲಿ ಲಭ್ಯವಿರುವ ಮಸಾಲೆ ಸಾಮಾಗ್ರಿಯಾಗಿದೆ. ಇವು ಅಡುಗೆಗೆ ಅತೀ ಅವಶ್ಯಕ ಪದಾರ್ಥಗಳಾಗಿವೆ. ಆದರೆ ಟೊಮೆಟೋ ಬೆಲೆ ಏರಿಕೆ ಬಳಿಕ ಈಗ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಬೆಳ್ಳುಳ್ಳಿ ಬೆಲೆ ಕೇಳಿದರೆ ದಾಂಗಾಗುವುದು ಗ್ಯಾರಂಟಿ. ಅಷ್ಟರ ಮಟ್ಟಿಗೆ ಜವಾರಿ ಮತ್ತು ಹೈಬ್ರೀಡ್ ಬೆಳ್ಳುಳ್ಳಿ ಬೆಲೆ ಏರಿಕೆ ಆಗಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಒಂದು ಕೆ.ಜಿ ಬೆಳ್ಳುಳ್ಳಿಗೆ 80-ರಿಂದ 90 ರೂಪಾಯಿ ಮೊದಲಿತ್ತು. ಇದೀಗ ಬೆಳ್ಳುಳ್ಳಿ ದರ ಇದೀಗ ಪ್ರತಿ ಕೆ.ಜಿಗೆ 300 ರಿಂದ 450 ರೂಪಾಯಿಗೆ ಏರಿಕೆ ಆಗಿದೆ. ಮಳೆಯಾಗದ ಹಿನ್ನಲೆ ರಾಜ್ಯದ ಚಿಲ್ಲರೆ ಮಾರುಕಟ್ಟೆಯಲ್ಲಿ ನಾಟಿ ಹಾಗೂ ಹೈಬ್ರಿಡ್ ಬೆಳ್ಳುಳ್ಳಿ ದರ ಗಗನಕ್ಕೇರಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ತತ್ತರಿಸಿದ್ದಾರೆ.

ಸಗಟು ಮಾರುಕಟ್ಟೆಗೆ ಈಗ ಬೆಳ್ಳುಳ್ಳಿ ಪೂರೈಕೆ ಕಡಿಮೆ ಆಗುತ್ತಿದೆ. ಈ ಹಿಂದೆ ದಿನಕ್ಕೆ 25ರಿಂದ 30 ವಾಹನಗಳಲ್ಲಿ ನೂರಾರು ಚೀಲಗಳಲ್ಲಿ ಬೆಳ್ಳುಳ್ಳಿಗಳು ಮಾರುಕಟ್ಟೆಗೆ ಬರುತ್ತಿದ್ದವು. ಆದರೆ ಇನ್ನು ದಕ್ಷಿಣ ರಾಜ್ಯಗಳಿಂದ ಕೂಡ ಬೆಳ್ಳುಳ್ಳಿ ಪೂರೈಕೆ ತಗ್ಗಿದೆ. ಇದು ಕೂಡ ಬೆಳ್ಳುಳ್ಳಿ ಬೆಲೆಯಲ್ಲಿ ಭಾರೀ ಏರಿಕೆಗೆ ಕಾರಣವಾಗಿದೆ. ಇನ್ನು ಊಟಿ ಹಾಗೂ ಮಲಪುರಂನಿಂದ ಪೂರೈಕೆಯಾಗುತ್ತಿದ್ದ ಬೆಳ್ಳುಳ್ಳಿ ಪ್ರಮಾಣದಲ್ಲಿ ಕೂಡ ಭಾರೀ ಇಳಿಕೆಯಾಗಿದೆ. ಇದು ಕೂಡ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಬೆಲೆ ದುಬಾರಿ ಕಡಿಮೆ ಮಾರಾಟ
ಮದ್ಯಪ್ರದೇಶ, ಗುಜರಾತ್ ನಿಂದ ಬರುವ ಬೆಳ್ಳುಳ್ಳಿ ದರ ಭಾರೀ ಏರಿಕೆಯಾಗಿದೆ. ಇದರಿಂದ ಸಹಜವಾಗಿಯೇ ಕರ್ನಾಟಕ ವಿವಿಧ ಎಪಿಎಂಸಿಯಲ್ಲೂ ಸಹ ಬೆಳ್ಳುಳ್ಳಿ ಬೆಲೆ ಹೆಚ್ಚಳವಾಗಿದೆ. ಇದರಿಂದ ಗ್ರಾಹಕರು ಮಾತ್ರವಲ್ಲ ಹೋಲ್ಸೇಲ್ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ದಿನಕ್ಕೆ 300 ಚೀಲ ಬೆಳ್ಳುಳ್ಳಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಇದೀಗ ಬೆಲೆ ಗಗನಕ್ಕೇರಿರುವುದರಿಂದ ದಿನವೊಂದಕ್ಕೆ ಕೇವಲ 50 ಚೀಲ ಮಾರಾಟವಾಗುತ್ತಿದೆ. ಇದಕ್ಕೆ ಕಾರಣ ದರ ಹೆಚ್ಚಳವಾಗಿದ್ದರಿಮದ ಗ್ರಾಹಕರು ಸಹ ಖರೀದಿ ಮಾಡುತ್ತಿಲ್ಲ. ಹೀಗಾಗಿ ಪ್ಯಾಪಾರ ಕಡಿಮೆಯಾಗಿದೆ.

ಕಳೆದ ವರ್ಷ ಸುಮಾರು 50 ರೂಪಾಯಿ ಆಸುಪಾಸಿಗೆ ಮಾರಾಟವಾಗುತ್ತಿದ್ದ ಬೆಳ್ಳುಳ್ಳಿ, ಈ ವರ್ಷ ಹೆಚ್ಚು ಕಡಿಮೆ 10 ಪಟ್ಟು ದರ ಹೆಚ್ಚಾಗಿದೆ. ಮಳೆ ಇಲ್ಲದಿರುವುದರಿಂದ ಬೆಳ್ಳುಳ್ಳಿ ಬೆಳೆಯುವುದು ಸಹ ಕಡಿಮೆಯಾಗಿರುವ ಕಾರಣ ದರ ಏರಿಕೆಯಾಗಿದೆ. ಹೊಸ ಬೆಳ್ಳುಳ್ಳಿ ಬರುವವರೆಗೂ ಇದೇ ಬೆಲೆ ಮುಂದುರೆಯಲಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿನ ಬೆಳ್ಳುಳ್ಳಿ ಬೆಲೆ ಪಟ್ಟಿ
ಬೀದರ್- ಬೆಳ್ಳುಳ್ಳಿ ಬೆಲೆ ಕೆಜಿಗೆ 400 ರೂಪಾಯಿ
ಯಾದಗಿರಿ - ಬೆಳ್ಳುಳ್ಳಿ ಬೆಲೆ ಕೆಜಿಗೆ 280 ರಿಂದ 320 ರೂಪಾಯಿ
ತುಮಕೂರು- ಬೆಳ್ಳುಳ್ಳಿ ಬೆಲೆ ಕೆಜಿಗೆ -300-350 ರೂ.
ರಾಯಚೂರು - ಬೆಳ್ಳುಳ್ಳಿ ಬೆಲೆ ಕೆಜಿಗೆ 300-320 ರೂಪಾಯಿ.
ಮಂಡ್ಯ - ಬೆಳ್ಳುಳ್ಳಿ ಕೆಜಿಗೆ 200 ರೂ ರಿಂದ 240 ರೂ ಇದೆ.
ಗದಗ - ಬೆಳ್ಳುಳ್ಳಿ ಕೆಜಿಗೆ 250-340 ರೂಪಾಯಿಗೆ ಮಾರಾಟವಾಗಿದೆ.












Click it and Unblock the Notifications