Garlic price: ಗಗನಕ್ಕೇರಿದ ಬೆಳ್ಳುಳ್ಳಿ ದರ, ಇನ್ನೊಂದು ವಾರದಲ್ಲಿ ಕೆ.ಜಿ ಬೆಳ್ಳುಳ್ಳಿ ₹500ರ ಗಡಿ ದಾಟುತ್ತಾ?
ದಾವಣಗೆರೆ, ಜಜನವರಿ, 31: ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಟೊಮೆಟೋ ದರ ಬೆಲೆ 150 ರೂಪಾಯಿ ಗಡಿ ದಾಡಿದ್ದು, ಸ್ವಲ್ಪ ದಿನಗಳ ಬಳಿಕ ಮತ್ತೆ ಇಳಿಮುಖವಾಯಿತು. ಇನ್ನು ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆ ಬಹುತೇಕ ಭಾಗಗಳಲ್ಲಿ ಬೆಳೆಗಳೆಲ್ಲ ಒಣಗಿ ನೆಲಕಚ್ಚಿವೆ. ಫಸಲು ಬಾರದೇ ಇರುವಾಗ ಬೆಳೆಗಳಿಗೆ ಉತ್ತಮ ಬೆಲೆ ನಿಗದಿಯಾಗುತ್ತಿದೆ. ಇದೀಗ ಬೆಳ್ಳುಳ್ಳಿ ದರ ಗಗನಮುಖಿಯಾಗಿ ಏರಿಕೆಯಾಗುತ್ತಲೇ ಇದೆ. ಹಾಗಾದರೆ ರಾಜ್ಯದಲ್ಲಿ ಕ್ವಿಂಟಾಲ್ ಬೆಳ್ಳುಳ್ಳಿ ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಜ್ಯದಲ್ಲಿ ಬೆಳ್ಳುಳ್ಳಿ ಬೆಲೆ ಗಗನಮುಖಿಯಾಗುತ್ತಲೇ ಇದೆ. ಇಂದೆಂದಿಗಿಂತಲೂ ಇದೇ ಮೊಟ್ಟ ಮೊದಲ ಬಾರಿಗೆ ಅತ್ಯಂತ ಹೆಚ್ಚು ದರಕ್ಕೆ ಮಾರಾಟ ಆಗುತ್ತಿದೆ. ಕಳೆದ ಎರಡು ವಾರದ ಹಿಂದೆಯಷ್ಟೇ ಕೆ.ಜಿ. ಬೆಳ್ಳುಳ್ಳಿ ದರ 280-300 ರೂಪಾಯಿಗೆ ಮಾರಟ ಆಗುತ್ತಿದ್ದು, ಈ ವಾರ ಮತ್ತೆ ಏರಿಕೆಯಾಗಿದೆ. ಹೋಲ್ ಸೇಲ್ನಲ್ಲಿ ಕ್ವಿಂಟಾಲ್‌ಗೆ 32ರಿಂದ 33,000 ರೂಪಾಯಿ ನಿಗದಿ ಆಗಿದೆ. ಸದ್ಯ ಇದೀಗ ಕೆ.ಜಿ. ಬೆಳ್ಳುಳ್ಳಿ 400-500ರೂಪಾಯಿ ಮಾರಾಟವಾಗುತ್ತಿದೆ.

ದಾವಣಗೆರೆ ಎಪಿಎಂಸಿ ಹರಾಜಿನಲ್ಲಿ ಅತ್ಯಂತ ಹೆಚ್ಚು ಬೆಲೆಗೆ ಬೆಳ್ಳುಳ್ಳಿ ಮಾರಾಟ ಆಗಿದ್ದು, ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಇರದೇ ಇರುವುದು ಬೆಲೆ ಹೆಚ್ಚಳಕ್ಕೆ ಕಾರಣ ಆಗಿದೆ.
ಮಾರುಕಟ್ಟೆಗೆ ನಿರೀಕ್ಷಿತ ಮಟ್ಟದಲ್ಲಿ ಬೆಳ್ಳುಳ್ಳಿ ಆಮದು ಆಗುತ್ತಿಲ್ಲ. ಆದ್ದರಿಂದ ದರ ಏರಿಕೆ ಆಗಿದೆ. ಮತ್ತೊಂದೆಡೆ ಇದರಿಂದ ರೈತರಿಗೆ ಸಂತಸದ ವಾಚಾರವಾದರೆ, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದಂತಾಗುದೆ. ಉತ್ತಮ ಗುಣಮಟ್ಟದ ನಾಟಿ ಬೆಳ್ಳುಳ್ಳಿ ದರ ಕೆ.ಜಿಗೆ 450ರಿಂದ 500 ರೂಪಾಯಿವರೆಗೂ ಮಾರಾಟ ಆಗುತ್ತಿದೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಬೆಳ್ಳುಳ್ಳಿ ಇಳುವರಿ ಫೆಬ್ರವರಿಯಲ್ಲಿ ಬರುವ ನಿರೀಕ್ಷೆ ಇದ್ದು, ನಂತರ ದರ ಇಳಿಕೆ ಆಗಬಹುದು ಎಂಬ ನಿರೀಕ್ಷೆಯಿದೆ.
ಮತ್ತೊಂದೆಡೆ ಈರುಳ್ಳಿ ದರದಲ್ಲಿ ಕುಸಿತವಾಗಿದೆ. ಇನ್ನು ದಾವಣಗೆರೆ ಎಪಿಎಂಸಿಯಲ್ಲಿ ಕೆ.ಜಿ. ಈರುಳ್ಳಿ 3-4 ರೂಪಾಯಿಗೆ ಮಾರಾಟ ಆಗುತ್ತಿದೆ. ಮಾಕಟ್ಟೆಗೆ ತಂದ ನಂತರ ಲಾರಿ ಬಾಡಿಗೆ ಸಿಕ್ಕರೆ ಸಾಕು ಎಂದು ಈರುಳ್ಳಿ ಬೆಳೆದ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇದೀಗ ಪ್ರತಿ ಕ್ವಿಂಟಾಲ್‌ಗೆ 1500 ರೂಪಾಯಿ. ಅತ್ಯುತ್ತಮ ದರ 1,200 ರಿಂದ 1400 ಆಗಿದೆ.
ಉತ್ತಮ ದಪ್ಪ ಈರುಳ್ಳಿ 1,000ದಿಂದ 1,100 ರೂಪಾಯಿ, ಮಧ್ಯಮ ಗಾತ್ರದ ಈರುಳ್ಳಿ 700ರಿಂದ 800 ರೂಪಾಯಿ, ಸಣ್ಣ ಗಾತ್ರದ ಈರುಳ್ಳಿ 300 ರಿಂದ 400 ರೂಪಾಯಿ ದರ ಇದೆ. ಕಳೆದ ಎರಡ್ಮೂರು ತಿಂಗಳ ಹಿಂದೆಯಷ್ಟೇ ಕ್ವಿಂಟಾಲ್ ಈರುಳ್ಳಿ ದರ 5,000 ರೂಪಾಯಿ ಮುಟ್ಟಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಆದರೆ 2023ರ ಆಗಸ್ಟ್ ತಿಂಗಳು ಮುಗಿಯುತ್ತಿದ್ದಂತೆ ಈರುಳ್ಳಿ ದರ ಕುಸಿಯುತ್ತಾ ಬಂದಿದೆ. ಇದೀಗ ಮತ್ತಷ್ಟು ದಿನದಿಂದಿಂದ ಕುಸಿಯುತ್ತಲೇ ಇದ್ದು, ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.












Click it and Unblock the Notifications