ಮಂಡ್ಯದ ಮದ್ದೂರಿನಲ್ಲಿ ಗಣೇಶೋತ್ಸವದಲ್ಲಿ ಆಗಿದ್ದೇನು: ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು ?
ಕರ್ನಾಟಕದಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ನಡೆದಿರುವ ಗಲಭೆಯು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಮಂಡ್ಯದ ಮದ್ದೂರಿನಲ್ಲಿ ನಡೆದಿರುವ ಘಟನೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ಏನಾಯಿತು ಎನ್ನುವುದನ್ನು ಯುವತಿಯೊಬ್ಬರು ವಿಡಿಯೋದಲ್ಲಿ ವಿವರಿಸಿದ್ದಾರೆ.
ಮಂಡ್ಯದ ಮದ್ದೂರಿನ ಖಾಲಿ ಜಾಗದಲ್ಲಿ ನಿಂತು ಕೆಲವರು ಕಲ್ಲು ತೂರಾಟ ಮಾಡಿದ್ದಾರೆ. ಎದುರಿಗೆ ಬಂದು ಯಾರೂ ಕಲ್ಲು ತೂರಾಟ ಮಾಡಿಲ್ಲ. ನಾವೇನು ಮಾಡಿಲ್ಲ ಅವರಿಗೆ ಆದರೂ ಅವರು ಯಾಕೆ ಬಂದು ಕಲ್ಲು ತೂರಾಟ ಮಾಡಿದ್ದಾರೆ ಎಂದು ಯುವಕರು ಪ್ರಶ್ನೆ ಮಾಡಿದ್ದಾರೆ. ಇಲ್ಲಿ ನಾಲ್ಕೈದು ಬಾರಿ ಘಟನೆಗಳು ನಡೆದಿವೆ. ಸಾಮಾನ್ಯ ಜನರ ಮೇಲೆ ಮಾತ್ರವಲ್ಲ ಪೊಲೀಸ್ ಅವರ ಮೇಲೆಯೂ ಕಲ್ಲುತೂರಾಟ ಮಾಡಲಾಗಿದೆ. ಬಾವುಟ ಇಳಿಸಿ ಎಂದರು ಇಳಿಸಿದೆವು, ಹಾಡು ಹಾಕಬಾರದು ಎಂದು ಹೇಳಿದರು, ಅದನ್ನೂ ಹಾಕುವುದನ್ನು ನಿಲ್ಲಿಸಿದೆವು. ಗಣೇನ ಮೂರ್ತಿಯನ್ನು ಬೇಗ ವಿಸರ್ಜನೆ ಮಾಡಿದ್ದೇವೆ. ಆದರೂ ನಮಗೆ ಇಲ್ಲಿ ನೆಮ್ಮದಿನೇ ಇಲ್ಲ ಎಂದು ಯುವತಿಯೊಬ್ಬರು ಹೇಳಿದ್ದಾರೆ. ಈ ವಿಡಿಯೋಗಳ ತುಣುಕನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬಿಜೆಪಿ ಶೇರ್ ಮಾಡಿಕೊಂಡಿದೆ.

ಕಳೆದೆರಡು ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಾಂತಿದೂತರು ಹಿಂದೂ ಆಚರಣೆಗಳ ಮೇಲೆ ಕಲ್ಲು ತೂರಲು ಶುರು ಮಾಡಿದ್ದಾರೆ. ಅಲ್ಪಸಂಖ್ಯಾತರ ಮತಗಳ ಓಲೈಕೆಗಾಗಿ ಕಲ್ಲು ಹೊಡೆಯುವವರನ್ನು ಅಮಾಯಕರೆಂಬ ಪಟ್ಟ ಕಟ್ಟಿ ಅವರ ಕೇಸ್ ಗಳನ್ನು ಖುಲಾಸೆ ಮಾಡುವ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವವರೆಗೂ ಹಿಂದೂಗಳಿಗೆ ಈ ನೋವು ಹಿಂಸೆ ತಪ್ಪಿದ್ದಲ್ಲ.
ಕಳೆದ ವರ್ಷ ಶಿವಮೊಗ್ಗ, ದಾವಣಗೆರೆ, ನಾಗಮಂಗಲದಲ್ಲಿ ಕಲ್ಲು ಹೊಡೆಸಿದಿರಿ, ಇಂದು ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಜೊತೆ ಪೊಲೀಸರ ಮೇಲೆ ಕಲ್ಲು ಬಿದ್ದರು ಮತ್ತೆ ನ್ಯಾಯ ಕೇಳಿದ ಹಿಂದೂಗಳ ಮೇಲೆ ಲಾಠಿ ಚಾರ್ಜ್ ಮಾಡಿಸಿದೆ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಎಂದು ಕರ್ನಾಟಕ ಬಿಜೆಪಿ ಹೇಳಿದೆ.
ಜೆಡಿಎಸ್‌ನ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು, ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಈ ಘಟನೆ ಭಾನುವಾರ ರಾತ್ರಿ 9 ಗಂಟೆಗೆ ನಡೆದಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಇದು ಮೊದಲನೇ ಘಟನೆಯಲ್ಲ, ಈ ಹಿಂದೆಯೂ ನಾಗಮಂಗಲದಲ್ಲಿ ಇದೇ ರೀತಿ ಘಟನೆ ನಡೆದಿತ್ತು. ಕೆರಗೋಡು ಧ್ವಜ ವಿವಾದ ನಡೆದಿತ್ತು. ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಕಾಂಗ್ರೆಸ್ ಸರ್ಕಾರ ಧಕ್ಕೆ ಉಂಟುಮಾಡುತ್ತಿದೆ ಎಂದು ದೂರಿದ್ದಾರೆ.
ಈ ಘಟನೆಗೆ ನೇರ ಹೊಣೆಗಾರಿಕೆಯನ್ನು ಈ ಸರ್ಕಾರನೇ ಹೊರಬೇಕು. ಈ ಘಟನೆಯಲ್ಲಿ ಪೊಲೀಸರ ಮೇಲೆ ನಾನು ದೂರುವುದಿಲ್ಲ. ಪೊಲೀಸರು ಅಸಮರ್ಥರಲ್ಲ, ಆದರೆ ಅವರ ಕೆಲಸದಲ್ಲಿ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾರೆ. ಈ ಘಟನೆ ಮಸೀದಿಯ ಬಳೆ ನಡೆದಿರುವಂತಹ ಘಟನೆ. ಇದು ಪೂರ್ವ ನಿಯೋಜಿತವಾಗಿದೆ. ಎರಡು ಧರ್ಮದ ಬಗ್ಗೆ ಪರಸ್ಪರ ಸಂಘರ್ಷ ಉಂಟು ಮಾಡಿದೆ. ಇದಕ್ಕೆ ನೇರ ಕಾರಣ ಕಾಂಗ್ರೆಸ್ ಸರ್ಕಾರವೇ ಆಗಿದೆ. ಸರ್ಕಾರ ವೈಫಲತೆ, ಗುಪ್ತಚರ ವೈಫೈಲದಿಂದ ಈ ಘಟನೆ ನಡೆದಿದೆ.
ಪೊಲೀಸರಿಗೆ ಕಳೆದ ಎರಡು ವರ್ಷದಿಂದ ಈ ಸರ್ಕಾರದಲ್ಲಿ ಕೈ ಕಟ್ಟಾಕಿದ್ದಾಗಿದೆ. ಈ ಘಟನೆಯಾದ ಬಳಿಕ ರಾಜಕೀಯವಾಗಿ ಕೆಲವು ವ್ಯಕ್ತಿಗಳಿಗೆ ಲಾಭ ಉಂಟಾಗಬಹುದು.
ಕಳೆದೆರಡು ವರ್ಷಗಳಿಂದ @siddaramaiah ನವರ ಶಾಂತಿದೂತರು ಹಿಂದೂ ಆಚರಣೆಗಳ ಮೇಲೆ ಕಲ್ಲು ತೂರಲು ಶುರು ಮಾಡಿದ್ದಾರೆ.
— BJP Karnataka (@BJP4Karnataka) September 8, 2025
ಅಲ್ಪಸಂಖ್ಯಾತರ ಮತಗಳ ಓಲೈಕೆಗಾಗಿ ಕಲ್ಲು ಹೊಡೆಯುವವರನ್ನು ಅಮಾಯಕರೆಂಬ ಪಟ್ಟ ಕಟ್ಟಿ ಅವರ ಕೇಸ್ ಗಳನ್ನು ಖುಲಾಸೆ ಮಾಡುವ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವವರೆಗೂ ಹಿಂದೂಗಳಿಗೆ ಈ ನೋವು ಹಿಂಸೆ ತಪ್ಪಿದ್ದಲ್ಲ.
ಕಳೆದ ವರ್ಷ… pic.twitter.com/vYnNeeinlw
ಸ್ಥಳೀಯ ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಇದರಿಂದ ಪರಿಣಾಮ ಆಗುತ್ತೆ. ಇದೇ ರೀತಿ ನಾಗಮಂಗಲದಲ್ಲಿ, ಕೆರಗೋಡಿನಲ್ಲಿ ಈ ಘಟನೆ ನಡೆದಿತ್ತು. ಬಹಳ ಜನ ಊರು ಬಿಟ್ಟು ಹೋದರು. ಎಷ್ಟೋ ಜನ ಅಮಾಯಕರ ಮೇಲೆ FIR ಹಾಕಿದರು. ಅಂತಿಮವಾಗಿ ಇದರ ಪರಿಣಾಮ ಅನುಭವಿಸುವುದು ಅಲ್ಲಿನ ಸ್ಥಳಿಯರು.
ಸಚಿವ ಚೆಲುವರಾಯಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿರುವ ಅವರು, ಇದರಲ್ಲಿ ರಾಜಕೀಯ ಬೆಳೆಸುವಂತಹ ಪ್ರಶ್ನೆ ಇಲ್ಲ. ಜೆಡಿಎಸ್ ಪಕ್ಷ ಅನ್ಯ ಧರ್ಮದವರಿಗೂ ಕೂಡ ನಾವು ಗೌರವವನ್ನು ಕೊಡುತ್ತೇವೆ. ನಮ್ಮ ಧಾರ್ಮಿಕ ಸಂಸ್ಕೃತಿಗೆ ಅಪಮಾನವಾದಾಗ ನಾವು ರಾಜಕೀಯ ಪಕ್ಷ ಬದಿಗಿಟ್ಟು ನಾವು ಹಿಂದೂ ಅಂತ ಆಲೋಚನೆ ಮಾಡಬೇಕಾಗುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ.












Click it and Unblock the Notifications