ಗೌರಿ ಗಣೇಶ ಹಬ್ಬದಂದೇ ವಿವಿಧೆಡೆ ರಸ್ತೆ ಅಪಘಾತದಲ್ಲಿ 14 ಮಂದಿ ಸಾವು, ದುಃಖದಲ್ಲಿ ಕುಟುಂಬಸ್ಥರು

ಚಿಕ್ಕಮಗಳೂರು, ಸೆಪ್ಟಂಬರ್ 07: ರಾಜ್ಯದೆಲ್ಲಡೆ ಗೌರಿ ಗಣೇಶ ಹಬ್ಬದ ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ಇಂದು ಶನಿವಾರ ಟಾಟಾ ಏಸ್‌ ಅಪಘಾತದಲ್ಲಿ ಇಬ್ಬರು ಸೇರಿ ಒಟ್ಟ ವಿವಿಧ ಅಪಘಾತ ಪ್ರಕರಣಗಳಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಆಗಿದೆ. ವಿಜಯಪುರ, ಮಂಗಳೂರು, ಬಾಗಲಕೋಟೆ, ರಾಮನಗರ ಜಿಲ್ಲೆಗಳಲ್ಲಿ ಅಪಘಾತ ನಡೆದಿವೆ.

ಗಣೇಶ ಮೂರ್ತಿ ತರಲು ತೆರಳಿದ್ದ ಟಾಟಾ ಏಸ್ ಪಲ್ಟಿಯಾದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಇಬ್ಬರು ಯುವಕರು ಮೃತಪಟ್ಟ ಘಟನೆ ಚಿಕ್ಕಮಗಳೂರಿನ ತೆರಿಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

Ganesh Chaturthi Festival Day Raised Road Accident 14 Death in Few Districts

ಶ್ರೀಧರ್ (20) ಧನುಷ್ (20) ಮೃತ ಯುವಕರು ಎಂದು ತಿಳಿದು ಬಂದಿದೆ. ಟಾಟಾ ಏಸ್‌ನಲ್ಲಿ ಬೆಳ್ಳಗ್ಗೆ ಗಣೇಶ ಮೂರ್ತಿ ತರಲು 9 ಜನ ಯುವಕರು ಟಾಟಾ ಏಸ್‌ನಲ್ಲಿ ತೆರಳಿದ್ದರು. ಈ ವೇಳೆ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ಘಟನೆ ನಡೆದಿದೆ. ಇಬ್ಬರು ಯುವಕರ ತಲೆಗೆ ಗಂಭೀರ ಗಾಯವಾಗಿದ್ದರಿಂದ ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆ ರವಾನಿಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ.

ಹಬ್ಬದ ದಿನವೇ ಕುಟುಂಬಸ್ಥರಿಗೆ ಆಘಾತ

ಘಟನೆಯಲ್ಲಿ ಮೂವರು ಯುವಕರಿಗೆ ಹೆಚ್ಚಿನ ಗಾಯಗಳಾಗಿವೆ. ತರೀಕೆರೆ ತಾಲೂಕು ಆಸ್ಪತ್ರೆಗೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತದೆ. ಮೃತರು ಹಾಗೂ ಗಾಯಾಳುಗಳೆಲ್ಲಾ ಲಿಂಗದಹಳ್ಳಿ ನಿವಾಸಿಗಳಾಗಿದ್ದಾರೆ.

ಗಣೇಶ ತರಲು ಹೋದಾಗ ಟಾಟಾ ಏಸ್ ಚಾಲಕನಿಗೆ ರಸ್ತೆಯ ತಿರುವಿನಲ್ಲಿ ನಿಯಂತ್ರಣ ತರಲಾಗಲಿಲ್ಲ. ಹೀಗಾಗಿ ತಪ್ಪಿ ಟಾಟಾ ಏಸ್ ಪಲ್ಟಿಯಾಗಿದೆ. ಸದ್ಯ ಪ್ರಕರಣ ದಾಖಲಾಗಿದೆ. ಮೃತರ ಕುಟುಂಬಸ್ಥರಿಗೆ ಹಬ್ಬದ ದಿನವೇ ಆಘಾತ ಎದುರಾಗಿದೆ.

ಬೈಕ್‌ಗೆ ಲಾರಿ ಡಿಕ್ಕಿ: ಮೂರು ಸಾವು

ರಾಮನಗರ ತಾಲೂಕಿನ ಮಾಯಗಾನಹಳಿ ವ್ಯಾಪ್ತಿಯಲ್ಲಿ ಬೈಕ್‌ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ವೆಂಕಟೇಶ್, ಗುರುಮೂರ್ತಿ, ಶೇಖ್ ಅವರು ಮೃತಪಟ್ಟಿದ್ದಾರೆ. ಇನ್ನೂ ಮಂಗಳೂರಿನಲ್ಲಿ ಬೈಕ್ ಮೇಲೆ ತೆರಳಿದ್ದಾಗ ಇಬ್ಬರು ರಸ್ತೆಗೆ ಬಿದ್ದು ಸಾವಿಗೀಡಾದ ಘಟನೆ ವರದಿ ಆಗಿದೆ.

ಇನ್ನೂಳಿದಂತೆ ಮುದ್ದೆ ಬಿಹಾಳದ ಕುಂಟೋಜಿ ಗ್ರಾಮದ ಬಳಿ ಮೊನ್ನೆ ಅಪಘಾತ ನಡೆದಿದೆ. ಈ ವೇಳೆ ಒಟ್ಟು ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ. ಇನ್ನೂ ಬಾಗಲಕೋಟೆಯ ಹೆಲಿಪ್ಯಾಡ್‌ನಲ್ಲಿ ನಡೆದ ಅಪಘಾತದಲ್ಲಿ ಮೂವರು ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಒಬ್ಬರು ಸಾಫ್ಟವೇರ್ ಇಂಜಿನಿರ್ ಮತ್ತೊಬ್ಬರು ಉಪನ್ಯಾಸಕಿ ಎಂದು ತಿಳಿದು ಬಂದಿದೆ.

ಇದೇ ಭಾಗಲಕೋಟೆಯಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಡಿವೈಡರ್ ಕ್ರಾಸ್ ಮಾಡಿ ಬಂದ ಪರಿಣಾಮ, ಮತ್ತೊಂದು ಕಡೆಯಿಂದ ವೇಗವಾಗಿ ಬಂದ ಯಮಹಾ ಬೈಕ್ ಡಿಕ್ಕಿ ಹೊಡೆದು ಅಪಘಾತ ಉಂಟಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬ ಮಹಿಳೆಯ ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+