Get Updates
Get notified of breaking news, exclusive insights, and must-see stories!

ಕಾಲೇಜುಗಳಲ್ಲಿ ಗಾಂಧಿ ಭಾರತ ಕಾರ್ಯಕ್ರಮ ಆಯೋಜನೆ: ಮಾರ್ಗಸೂಚಿ

ಬೆಂಗಳೂರು, ಏಪ್ರಿಲ್ 14: ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವದ ಅಂಗವಾಗಿ 'ಗಾಂಧಿ ಭಾರತ' ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತದೆ. ಈ ಕುರಿತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ, ಸರ್ಕಾರದ ಆದೇಶ ದಿನಾಂಕ 16/12/2024 ಉಲ್ಲೇಖಿಸಿ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಆಯುಕ್ತರು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದು, 'ಗಾಂಧಿ ಭಾರತ' ಕಾರ್ಯಕ್ರಮವನ್ನು ಆಯೋಜನೆಯ ಕುರಿತು ಮಾರ್ಗಸೂಚಿಯನ್ನು ಸಹ ಪ್ರಕಟಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸುತ್ತೋಲೆಯಲ್ಲಿ ಈಗಾಗಲೇ ತಿಳಿಸಿರುವಂತೆ, 1924ನೇ ಸಾಲಿನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನವು ಈ ವರ್ಷ ಶತಮಾನದ ಮೈಲಿಗಲ್ಲನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು ತಿಳಿಸಿದೆ.

Gandhi Bharata Programme In Colleges And Polytechnic Engineering Institutions

'ಗಾಂಧಿ ಭಾರತ' ಎಂಬ ಹೆಸರಿನಲ್ಲಿ ಇಂದಿನ ಯುವಪೀಳಿಗೆಗೆ ಗಾಂಧೀಜಿಯವರ ಆದರ್ಶ, ವಿಚಾರಧಾರೆ ಮತ್ತು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪವಾದ ಸಂದೇಶಗಳನ್ನು ಪರಿಚಯಿಸಲು ಸರ್ಕಾರದ ಆದೇಶದಲ್ಲಿ ಸೂಚಿಸಿರುವ ಹಿನ್ನೆಲೆಯಲ್ಲಿ ಸುತ್ತೋಲೆಯಲ್ಲಿ ಈ ಕೆಳಕಂಡ ಕಾರ್ಯಕ್ರಮಗಳನ್ನು ಸರ್ಕಾರಿ, ಖಾಸಗಿ ಮತ್ತು ಅನುದಾನರಹಿತ ಪದವಿ ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಪ್ರಾಂಶುಪಾಲರಿಗೆ ಸೂಚಿಸಲಾಗಿರುತ್ತದೆ ಎಂದು ಹೇಳಿದೆ.

ಯಾವ-ಯಾವ ಕಾರ್ಯಕ್ರಮಗಳು

* ಗಾಂಧಿ ಭಾರತ ಕಾರ್ಯಕ್ರಮದ ಲಾಂಛನ. ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಆಚರಣೆಯ ಸಲುವಾಗಿ 'ಗಾಂಧಿ ಭಾರತ' ಲಾಂಛನವನ್ನು ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಅನುದಾನರಹಿತ ಪದವಿ ಕಾಲೇಜುಗಳ ಪತ್ರವ್ಯವಹಾರ, ಲೆಟರ್ ಹೆಡ್, ಆಮಂತ್ರಣ ಪತ್ರಿಕೆ, ಸರ್ಕಾರಿ ಸಭೆ-ಸಮಾರಂಭಗಳ ಬ್ಯಾನರ್, ಡ್ರಾಪ್, ಜಾಹೀರಾತು ಮತ್ತು ಇತರೆ ಪುಚಾರ ಸಾಮಗ್ರಿಗಳಲ್ಲಿ ಕಡ್ಡಾಯವಾಗಿ ಅಳವಡಿಸುವುದು.

* ಮಹಾತ್ಮಾ ಗಾಂಧಿಯವರ ಧ್ಯಾನಸ್ಥ ಸ್ಥಿತಿಯ ಭಾವಚಿತ್ರವನ್ನು ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಅನುದಾನರಹಿತ ಪದವಿ ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್/ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಮುಖ ತಾಣದಲ್ಲಿ ಕಡ್ಡಾಯವಾಗಿ ಪ್ರದರ್ಶಿಸುವುದು.

* ಮಹಾತ್ಮಾ ಗಾಂಧಿಯವರು ಬೋಧಿಸಿದ ಸಪ್ತ ಸಾಮಾಜಿಕ ಪಾತಕಗಳ ಫಲಕಗಳನ್ನು ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಅನುದಾನರಹಿತ ಪದವಿ ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್/ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮುಖ್ಯ ತಾಣದಲ್ಲಿ ಪ್ರದರ್ಶಿಸುವುದು.

* ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಅನುದಾನರಹಿತ ಪದವಿ ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್/ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರತಿ ದಿನ ಪ್ರಾರ್ಥನೆ/ ಅಸೆಂಬ್ಲಿಯಲ್ಲಿ ವಿದ್ಯಾರ್ಥಿಗಳಿಂದ ಸಪ್ತ ಸಾಮಾಜಿಕ ಪಾತಕಗಳನ್ನು ಸಾಮೂಹಿಕವಾಗಿ ವಾಚನ ಮಾಡಿಸುವುದು.

* ದಿನಾಂಕ 2/10/2025ರ ತನಕ ಪ್ರತಿ ತಿಂಗಳು ನಿರಂತರವಾಗಿ ಎಲ್ಲಾ ಕಾಲೇಜುಗಳಲ್ಲಿ ನೈತಿಕ ಶಿಕ್ಷಣ ಬೋಧಿಸುವ 'ನಾವು ಮನುಜರು' ಶೀರ್ಷಿಕೆಯಡಿ ಅತಿಥಿ ಉಪನ್ಯಾಸಗಳು, ಕಾರ್ಯಾಗಾರ, ಜಾಗೃತಿ ಅಭಿಯಾನ ಇವೇ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳಾದ ಸತ್ಯ ಅಹಿಂಸೆ, ಸಹಬಾಳ್ವೆ, ಅಸ್ಪೃಶ್ಯತೆ ನಿವಾರಣೆ, ಆರ್ಥಿಕ ಚಿಂತನೆಗಳು, ಗ್ರಾಮ ಸ್ವರಾಜ್, ಖಾದಿ ಹಾಗೂ ದೇಶಭಕ್ತಿ ಮುಂತಾದ ವಿಷಯಗಳ ಕುರಿತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು.

* ಈ ನಿಟ್ಟಿನಲ್ಲಿ ಪ್ರಬಂಧ, ಭಾಷಣ, ರಸಪ್ರಶ್ನೆ, ನಾಟಕ, ಏಕಪಾತ್ರಾಭಿನಯ, ದೇಶಭಕ್ತಿ ಗೀತೆಗಳು ಇವೇ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸುವುದು. ಈ ಸ್ಪರ್ಧೆಗಳ ಕುರಿತ ವರದಿಯನ್ನು ದಿನಾಂಕ 20/04/2025ರೊಳಗೆ ಸಂಬಂಧಪಟ್ಟ ಜಂಟಿ ನಿರ್ದೇಶಕರ ಕಚೇರಿಗೆ ಕಳುಹಿಸುವುದು.

* ಪ್ರಾದೇಶಿಕ ಜಂಟಿ ನಿರ್ದೇಶಕರು ತಮ್ಮ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಖಾಸಗಿ ಪದವಿ ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್/ ಇಂಜಿನಿಯರಿಂಗ್ ಕಾಲೇಜುಗಳ ವರದಿಗಳನ್ನು ಪ್ರತ್ಯೇಕವಾಗಿ ಕ್ರೋಢೀಕರಿಸಿ, ಕೇಂದ್ರ ಕಚೇರಿಗೆ ತಪ್ಪದೇ ಸಲ್ಲಿಸುವುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+