ರೈಲು ಮಾರ್ಗ ಆಗ್ರಹಿಸಿ ನರೇಗಲ್ ಬಂದ್ ಯಶಸ್ವಿ

Posted By:
Subscribe to Oneindia Kannada

ಗದಗ, ಆಗಸ್ಟ್ 07:ಗದಗ-ವಾಡಿ ರೈಲು ಮಾರ್ಗಕ್ಕೆ ಒತ್ತಾಯಿಸಿ ರೋಣ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಗದಗ-ವಾಡಿ ರೈಲ್ವೆ ಹೋರಾಟ ಸಮಿತಿಯು ಕರೆ ನೀಡಿದ್ದ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸೋಮವಾರದಂದು ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಪ್ರತಿಭಟನೆಗೆ ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಟೈರ್ ಗೆ ಬೆಂಕಿ ಹಚ್ಚಿ ಸರ್ಕಾರದ ರಾಜಕಾರಣದದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Gadag Naregal Town Bandh successful

1954 ರಲ್ಲಿ ಗದಗ, ನರೇಗಲ್, ಗಜೇಂದ್ರಗಡ, ಹನುಮಸಾಗರ, ತಳಕಲ್ ಮೂಲಕ ರಾಯಚೂರಿನ ವಾಡಿಗೆ ರೈಲು ಸಂಪರ್ಕದ ಸರ್ವೇಗೆ ಅಸ್ತು ನೀಡಲಾಗಿದ್ದರೂ ಕಾರಣಾಂತರಗಳಿಂದ ಯೋಜನೆ ವಿಳಂಬವಾಗಿದೆ.

2016ರ ಬಜೆಟ್‌ ನಲ್ಲಿ ಸಮೀಕ್ಷೆ ಮಾರ್ಗ ಬದಲಾಯಿಸಿ ಕೊಪ್ಪಳ-ಕುಷ್ಟಗಿ- ವಾಡಿ ಮಾರ್ಗಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಲು ಸರ್ಕಾರ ಮುಂದಾಗಿದೆ.

Aliens Footprints Found In Gadag karnataka | Oneindia Kannada

ಗದಗ ವಾಡಿ ಮಾರ್ಗವನ್ನು ಮೂಲ ಸ್ವರೂಪದಂತೆ ಮಾಡಬೇಕು ಹಾಗೂ ಯೋಜನೆ ಶೀಘ್ರವಾಗಿ ಅನುಷ್ಠಾನಗೊಳ್ಳಬೇಕು ಎಂದು ಶಾಸಕ ಜಿ.ಎಸ್. ಪಾಟೀಲ್ ಆಗ್ರಹಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Delay in implementing Gadag-Wadi Railway Line Project and change is route led to Naregal town Bandh today(Aug 07)
Please Wait while comments are loading...