ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಸಂಸದರ ಮನೆ ಮುಂದೆ ಪ್ರಾಣ ಬಿಟ್ಟ ಗದಗದ ರೈತ

By Madhusoodhan
|
Google Oneindia Kannada News

ಬೆಳಗಾವಿ, ಜೂನ್ 08: ಮಹಾದಾಯಿ ಹೋರಾಟದಲ್ಲಿ ಭಾಗವಹಿಸಿದ್ದ ಅನ್ನದಾತನ ಪ್ರಾಣ ಪೊಲೀಸರ ನಿರ್ಲಜ್ಜತನಕ್ಕೆ ಬಲಿಯಾಗಿದೆ. ಸತ್ಯಾಗ್ರಹ ಸಮೀಪದ ವೇದಿಕೆ ಎದುರೇ ಕುಸಿದು ಬಿದ್ದ ರೈತ ಧರ್ಮಣ್ಣ ತಹಶೀಲ್ದಾರ್ ಹೃದಯಾಘಾತದಿಂದ ಬುಧವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ.

ಬೆಳಗಾವಿ ಸಂಸದ ಸುರೇಶ್ ಅಂಗಡಿ ಮನೆ ಮುಂದೆ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಅವಘಡ ಸಂಭವಿಸಿದ್ದು ರೈತನ ಶವವಿಟ್ಟುಕೊಂಡೇ ಉಗ್ರ ಪ್ರತಿಭಟನೆ ನಡೆಸಲಾಗುತ್ತಿದೆ. ಜಿಲ್ಲೆಯ ಸಂಸದರು ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ದುರಂತಕ್ಕೆ ಕಾರಣವಾಗಿದೆ.[ಏನಿದು ಕಳಸಾ-ಬಂಡೂರಿ ಯೋಜನೆ?]

ಮೃತನ ಕುಟುಂಬಕ್ಕೆ ಸರ್ಕಾರ ತಕ್ಷಣ 25 ಲಕ್ಷ ರು. ಪರಿಹಾರ ನೀಡಬೇಕು. ಸಂಸದರು ತಮ್ಮ ಬೇಜವಾಬ್ದಾರಿ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯ ಮಾಡಿದ್ದಾರೆ.[ಅಮ್ಮಾ,, ನಮ್ಮೂರಲ್ಲಿ 15 ದಿನಕ್ಕೊಮ್ಮೆ ಯಾಕೆ ನೀರು ಬಿಡ್ತಾರೆ?]

ಧರ್ಮಣ್ಣ ತಹಶೀಲ್ದಾರ್ ಗದಗ್ ಜಿಲ್ಲೆಯವರು

ಧರ್ಮಣ್ಣ ತಹಶೀಲ್ದಾರರವರು ಗದಗ್ ಜಿಲ್ಲೆಯ ರೋಣ ತಾಲೂಕಿನ ರೈತ, ಬುಧವಾರ ಪ್ರತಿಭಟನೆಯಲ್ಲಿ ಭಾಗವಹಿಸಲೆಂದು ಆಗಮಿಸಿದ್ದವರು ದುರಂತ ಸಾವಿಗೆ ಈಡಾಗಬೇಕಾಯಿತು.

ಪೊಲೀಸರ ನಿರ್ಲಜ್ಜತನ
ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಧರ್ಮಣ್ಣ ವೇದಿಕೆಯ ಮುಂಭಾಗ ಕುಸಿದು ಬಿದ್ದರು. ಆದರೆ ಪೊಲೀಸರು ಅವರನ್ನು ಆಸ್ಪತ್ರೆಗೆ ಸೇರಿಸುವ ಬದಲು ವೇದಿಕೆಯ ಮೇಲೆ ತೆಗೆದುಕೊಂಡು ಹೋಗಿ ಬಿಟ್ಟರು. ಕೆಲವೇ ಕ್ಷಣಗಳಲ್ಲಿ ಅನ್ನದಾತನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಆಕ್ರೋಶಗೊಂಡ ರೈತರು ಧರ್ಮಣ್ಣ ಅವರ ಶವ ಇಟ್ಟುಕೊಂಡೆ ಪ್ರತಿಭಟನೆ ನಡೆಸುತ್ತಿದ್ದಾರೆ.

English summary
Belagavi: A group of farmers had gathered and had protested infront of MP Suresh Angadi's residence on June 08. During the protest farmer Dhamanna Tahshildar aged 65 felt uneasy and the police was informed to get an ambulance but it for over an hour ambulance never arrived.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X