ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ನಲ್ಲಿ ಹಲವು ಬೆಳವಣಿಗೆ : ದೇವೇಗೌಡ ಭೇಟಿಯಾದ ಪರಮೇಶ್ವರ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 13 : ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಚಟುವಟಿಕೆಗಳು ನಡೆಯುತ್ತಿವೆ. ಮೈತ್ರಿ ಸರ್ಕಾರ ಪತನವಾಗಲಿದೆಯೇ? ಎಂಬ ಸುದ್ದಿ ಹಬ್ಬಿದೆ. ಈ ಬೆಳವಣಿಗೆ ನಡುವೆಯೇ ಡಾ.ಜಿ.ಪರಮೇಶ್ವರ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭೇಟಿಯಾದರು.

ಗುರುವಾರ ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಉಪ ಮಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದರು. ಬಳಿಕ ಮಾತನಾಡಿದ ಪರಮೇಶ್ವರ ಅವರು, 'ಎಚ್.ಡಿ.ದೇವೇಗೌಡರಿಗೆ ಗಣೇಶ ಹಬ್ಬದ ಶುಭಾಶಯ ಕೋರಲು ಬಂದಿದ್ದೆ. ನೀವು ಅಂದುಕೊಂಡ ಹಾಗೆ ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ' ಎಂದರು.

'ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಧ್ಯಮದಲ್ಲಿ ಬರುತ್ತಿರುವ ಹಾಗೆ ಯಾವುದೇ ಬೆಳವಣಿಗೆ ನಡೆಯುತ್ತಿಲ್ಲ. ಸರ್ಕಾರ ಸುಭದ್ರವಾಗಿದೆ. ಬಿಬಿಎಂಪಿ ಮೈತ್ರಿ ಬಗ್ಗೆಯೂ ಚರ್ಚೆ ಮಾಡಿಲ್ಲ' ಎಂದು ಸ್ಪಷ್ಟಪಡಿಸಿದರು.

ಪರಮೇಶ್ವರ ಮತ್ತು ದೇವೇಗೌಡರು ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದರು. 'ದೇವೇಗೌಡರು ತಮ್ಮ ರಾಜಕೀಯ ಅನುಭವ ಹೇಳುತ್ತಿದ್ದರು. ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಮಾಡಿಲ್ಲ' ಎಂದು ಹೇಳಿದರು.

ಯಾರೂ ಪಕ್ಷ ಬಿಡುವುಡಿಲ್ಲ

ಯಾರೂ ಪಕ್ಷ ಬಿಡುವುಡಿಲ್ಲ

ಎಚ್.ಡಿ.ದೇವೇಗೌಡ ಭೇಟಿ ಬಳಿಕ ಮಾತನಾಡಿದ ಪರಮೇಶ್ವರ ಅವರು, 'ರಮೇಶ್ ಜಾರಕಿಹೊಳಿ ಅವರ ಬಳಿ ಮಾತಾಡಿದ್ದೇನೆ.
ಅವರ ಕ್ಷೇತ್ರದ ಕೆಲವು ಬೆಳವಣಿಗೆ ಬಗ್ಗೆ ಬೇಸರವಾಗಿದ್ದಾರೆ.
ನೀವು ಅಂದುಕೊಂಡ ಹಾಗೆ ಯಾವುದೇ ಬೆಳವಣಿಗೆ ಆಗಿಲ್ಲ.
ಯಾವ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

ಸರ್ಕಾರ ಅಸ್ಥಿರಗೊಳಿಸುವುದಿಲ್ಲ

ಸರ್ಕಾರ ಅಸ್ಥಿರಗೊಳಿಸುವುದಿಲ್ಲ

ಸಚಿವ ರಮೇಶ್ ಜಾರಕಿಹೊಳಿ ಅವರು ಆಪ್ತರ ಜೊತೆ ಸರಣಿ ಸಭೆ ನಡೆಸಿದ ಕುರಿತು ಪ್ರತಿಕ್ರಿಯೆ ನೀಡಿದ ಪರಮೇಶ್ವರ ಅವರು, 'ಇಂಥದ್ದಕ್ಕೆಲ್ಲ ನಾವು ಕಡಿವಾಣ ಹಾಕುತ್ತೇವೆ. ಪಕ್ಷ ಇಂಥದ್ದೆಲ್ಲ ಬಹಳ ವರ್ಷಗಳಿಂದ ನೋಡಿಕೊಂಡೇ ಬೆಳೆದಿದೆ. ಜಾರಕಿಹೊಳಿ ಸಹೋದರರಿಗೆ ಅಸಮಧಾನ ಇದ್ದರೆ ನಮ್ಮ ಮುಂದೆ ಹೇಳಬಹುದಲ್ವಾ?. ನಾವು ಸರಕಾರ ಅಸ್ಥಿರಗೊಳಿಸಲ್ಲ ಎಂದು ಅವರೇ ಹೇಳಿದ್ದಾರೆ' ಎಂದರು.

ಹಸ್ತಕ್ಷೇಪ ಮಾಡಿಲ್ಲ

ಹಸ್ತಕ್ಷೇಪ ಮಾಡಿಲ್ಲ

'ಡಿ.ಕೆ.ಶಿವಕುಮಾರ್ ಅವರು ಬೆಳಗಾವಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅವರ ಇಲಾಖೆಯ ಕೆಲಸಗಳನ್ನು ಮಾಡಿರಬಹು. ಶಿವಕುಮಾರ್ ಅವರ ಹಸ್ತಕ್ಷೇಪ ಇದ್ದಿದ್ದೇ ಆದರೆ, ಚರ್ಚೆ ಮಾಡಿ ಸರಿ ಮಾಡುತ್ತೇವೆ' ಎಂದು ಪರಮೇಶ್ವರ ಹೇಳಿದರು. 'ಬೆಳಗಾವಿಯಲ್ಲಿ ಪಕ್ಷದ ಕಚೇರಿ ಕಟ್ಟಲು ಡಿ.ಕೆ.ಶಿವಕುಮಾರ್ ಅವರಿಗೆ ಜವಾಬ್ದಾರಿ ನೀಡಿದ್ದೆವು. ಆಗ ಅವರು ಬೆಳಗಾವಿಗೆ ಹೋಗಿ ಬಂದು ಮಾಡುತ್ತಿದ್ದರು. ಬೆಳಗಾವಿ ರಾಜಕೀಯಕ್ಕೆ ಅವರು ಕೈ ಹಾಕಿಲ್ಲ' ಎಂದು ಪರಮೇಶ್ವರ ಹೇಳಿದರು.

ಆಂತರಿಕ ವಿಚಾರಗಳು

ಆಂತರಿಕ ವಿಚಾರಗಳು

'ಅಸಮಾಧಾನದಂತಹ ಸಮಸ್ಯೆಗಳು ಪಕ್ಷದ ಆಂತರಿಕ ವಿಚಾರ. ಅಂತಹ ಸಮಸ್ಯೆಗಳು ಇದ್ದರೆ ಸರಿಪಡಿಸುತ್ತೇವೆ. ಅಂತಹ ಸಮಸ್ಯೆಗಳನ್ನು ಪಕ್ಷದ ವೇದಿಕೆಯಲ್ಲಿ ಸರಿಪಡಿಸುತ್ತೇವೆ.
ಶಾಸಕರ ಕ್ಷೇತ್ರಕ್ಕೆ ಅನುದಾನ ತಡ ಆಗಿರಬಹುದು,
ಅದನ್ನು ಸರಿ ಮಾಡುತ್ತೇವೆ' ಎಂದರು.

English summary
Deputy Chief Minister of Karnataka G.Parameshwara met JD(S) supremo H.D.Deve Gowda on September 13, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X