ಕಾಂಗ್ರೆಸ್ ಸರ್ಕಾರದ ಮುಂದಿನ ಆದೇಶಗಳ ಪಟ್ಟಿ ಕೊಟ್ಟ ಬಿಜೆಪಿ ಟ್ವೀಟ್!

ಬೆಂಗಳೂರು, ಸೆಪ್ಟೆಂಬರ್ 29; ಕಾವೇರಿ ವಿವಾದದ ಹಿನ್ನಲೆಯಲ್ಲಿ ಕನ್ನಡ ಒಕ್ಕೂಟ ಶುಕ್ರವಾರ ಕರ್ನಾಟಕ ಬಂದ್ ನಡೆಸುತ್ತಿದೆ. ಅಖಂಡ ಕರ್ನಾಟಕ ಬಂದ್‌ಗೆ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದು ನಿಲ್ಲಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ.

ಶುಕ್ರವಾರ ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿ ಕಾವೇರಿ ವಿವಾದದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರ ಮುಂದೆ ಹೊರಡಿಸಬಹುದಾದ ಆದೇಶಗಳ ಪಟ್ಟಿಯನ್ನು ನೀಡಿದೆ.

Future Orders Of Karnataka Congress Govt BJP Tweet

ಬಿಜೆಪಿ, 'ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಿರುವ ಕರ್ನಾಟಕ ಕಾಂಗ್ರೆಸ್‌ನ ತುಘಲಕ್‌ ಸರ್ಕಾರ ಮುಂದೆ ಜನರಿಗೆ ಷರತ್ತುಗಳೊಂದಿಗೆ ಹೊರಡಿಸಬಹುದಾದ ಆದೇಶಗಳು' ಎಂದು ಹಲವಾರು ಅಂಶಗಳನ್ನು ಉಲ್ಲೇಖಿಸಿದೆ.

ಬಿಜೆಪಿ ಟ್ವೀಟ್

* ಕಾವೇರಿ ನೀರಿಲ್ಲ ರೈತರು ಬೆಳೆ ಬೆಳೆಯಬೇಡಿ..!

* ಬೆಂಗಳೂರಿಗೆ ನೀರಿಲ್ಲ ಸ್ನಾನ ಮಾಡಬೇಡಿ, ಸೆಂಟ್‌ ಬಳಸಿ..!

* ರಾಜ್ಯದಲ್ಲಿ ವಿದ್ಯುತ್‌ ಕೊರತೆ ಇದೆ ಫ್ರಿಜ್‌ ಟಿವಿ ಬಳಸಬೇಡಿ..!

* ಬರಗಾಲದಿಂದ ಆಹಾರದ ಕೊರತೆ ಇದೆ ಉಪವಾಸ ಮಾಡಿ..!

* ಸರ್ಕಾರದ ಬೊಕ್ಕಸ ಖಾಲಿ ಆಗಿದೆ ವಿಸ್ಕಿ, ರಮ್‌ ಕುಡಿಯಿರಿ..!

'ಇದು ತಮಾಷೆ ಅಲ್ಲ, ಈಗಾಗಲೇ ಇದರಲ್ಲಿ ಮೂರು ಅಂಶಗಳು ಪ್ರಸ್ತುತ ಚಾಲ್ತಿಗೆ ಬಂದಿವೆ. ಇನ್ನು ಹತ್ತು ಹಲವುಗಳನ್ನು ಕಾಂಗ್ರೆಸ್‌ ತರಲಿದೆ..!' ಎಂದು ಪ್ರತಿಪಕ್ಷ ಬಿಜೆಪಿ ಆರೋಪ ಮಾಡಿದೆ.

ಬಿಜೆಪಿ ಸರಣಿ ಟ್ವೀಟ್‌ಗಳನ್ನು ಮಾಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದೆ. ಈ ಟ್ವೀಟ್‌ಗಳಿಗೆ ಪಕ್ಷ #ಕಾವೇರಿನಮ್ಮದು, #SaveKaveri, #NadaDrohiCongress ಎಂಬ ಹ್ಯಾಷ್‌ಟ್ಯಾಗ್ ಬಳಕೆ ಮಾಡುತ್ತಿದೆ.

ಒಂದು ಟ್ವೀಟ್‌ನಲ್ಲಿ ಬಿಜೆಪಿ, 'ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು - ಇದು ಹಳೇ ಗಾದೆ... ಊರ್ ಕೊಳ್ಳೆ ಹೊಡ್ಸಿದ್ರು, ಆಮೇಲೆ ಕೋಟೆ ಬಾಗ್ಲು ಹಾಕೋ ನಾಟಕ ಆಡ್ಸಿದ್ರು - ಇದು ಇವ್ರನ್ನು ನೋಡಿ ಮಾಡಿರೋ ಹೊಸ ಗಾದೆ...' ಎಂದು ಟೀಕೆ ಮಾಡಿದೆ.

'ಸ್ಟಾಲಿನ್ ನಾಡಿನ ರೈತರಿಗೆ ಎರೆಡೆರಡು ಬೆಳೆ ಬೆಳೆಯಲು ನೀರು ಬಿಟ್ಟು, ನಾಡಿನ ರೈತರಿಗೆ ನೀರಿಲ್ಲದೆ ಭತ್ತ ಬೆಳೆಯುವ "ಕರ್ನಾಟಕ ಮಾಡೆಲ್" ಅನ್ನು ಪರಿಚಯಿಸುತ್ತಿರುವ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ' ಎಂದು ಬಿಜೆಪಿ ಆರೋಪಿಸಿದೆ.

ಮತ್ತೊಂದು ಟ್ವೀಟ್‌ನಲ್ಲಿ, 'ಕಾವೇರಿ ನೀರಿನ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಕನ್ನಡಿಗರ ಕಣ್ಣಿಗೆ ಮಂಕುಬೂದಿ ಎರಚಲು ನಡೆಸಿದ ಷಡ್ಯಂತ್ರಗಳು..!' ಎಂದು ಬಿಜೆಪಿ ಪಟ್ಟಿಯೊಂದನ್ನು ನೀಡಿದೆ.

* ಬೆಂಗಳೂರಿನಲ್ಲಿ ನಡೆದ I.N.D.I. ಮೈತ್ರಿಕೂಟದ ಸಭೆ ನಂತರ ಸ್ಟಾಲಿನ್‌ ಜತೆಗೆ ಕಾವೇರಿ ಡೀಲ್‌ ಕುದುರಿಸಲಾಗಿತ್ತು..!

* ಸುಪ್ರೀಂಕೋರ್ಟ್‌ ಆದೇಶಕ್ಕೂ ಮುನ್ನ ಸಿದ್ದರಾಮಯ್ಯ ಅವರ ಸರ್ಕಾರ ಕಳ್ಳತನದಿಂದ ಸ್ಟಾಲಿನ್‌ ಸರ್ಕಾರಕ್ಕೆ ನೀರು ಬಿಟ್ಟಿತ್ತು..!

* ಮೊದಲ ಸಲ ಪ್ರಾಧಿಕಾರದ ಆದೇಶಕ್ಕಿಂತಲೂ ಹೆಚ್ಚುವರಿ ನೀರನ್ನು‌ ರಾಜ್ಯ ಕಾಂಗ್ರೆಸ್‌ ಸ್ಟಾಲಿನ್ ನಾಡಿಗೆ ನೀರು ಹರಿಸಿತು..!

* ಮತ್ತೆ ಪ್ರಾಧಿಕಾರದ ಆದೇಶ ಬಂದಾಗ ಸಿದ್ದರಾಮಯ್ಯ ಅವರು ಸರ್ವಪಕ್ಷಗಳ ಸಭೆ ಕರೆದು ಕನ್ನಡಿಗರ ಮುಂದೆ ನಾಟಕ ಪ್ರದರ್ಶಿಸಿದರು..!

* ಸರ್ವಪಕ್ಷಗಳ ಸಭೆಯಲ್ಲಿ ನಿರ್ಣಯವಾದ ಮೇಲೂ ಕಾಂಗ್ರೆಸ್‌ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲಿಲ್ಲ..!

* ಸಿದ್ದರಾಮಯ್ಯ ಅವರು ದೂರದ ದೆಹಲಿಗೆ ಹೋಗಿ ಸಂಸದರ ಜತೆ ಸಭೆಯ ನಾಟಕವಾಡಿದರು, ಆದರೆ ಪಕ್ಕದ ತಮಿಳುನಾಡಿಗೆ ಮಾತ್ರ ಹೋಗಲಿಲ್ಲ..!

* ಸಂಸದರು ರಾಜ್ಯ ಸರ್ಕಾರದ ಜತೆ ಇರುವುದಾಗಿ ಕಾವೇರಿ ನೀರು ಬಿಡದಂತೆ ಮನವಿ ಮಾಡಿದರೂ, ಸಿದ್ದರಾಮಯ್ಯ ಅವರ ಸರ್ಕಾರ ನೀರು ಹರಿಸುವುದನ್ನು ನಿಲ್ಲಿಸಲಿಲ್ಲ..!

* ಮತ್ತೆ 3000 ಕ್ಯೂಸೆಕ್‌ ನೀರು ಬಿಡುವಂತೆ ಪ್ರಾಧಿಕಾರದ ಆದೇಶ ಬಂದಮೇಲೆ ಹೆಚ್ಚುವರಿಯಾಗಿ ಕಾಂಗ್ರೆಸ್‌ 3,500 ಕ್ಯೂಸೆಕ್‌ ನೀರನ್ನು ಹರಿಬಿಟ್ಟಿತ್ತು..!

* ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲೂ ನೀರು ಖಾಲಿ ಆದಮೇಲೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಸಿದ್ದರಾಮಯ್ಯ ಅವರು ಗೂಬೆ ಕೂರಿಸುವ ನಾಟಕ ಆರಂಭಿಸಿದರು..!

* ಪ್ರಾಧಿಕಾರದ ಆದೇಶ ಮುಗಿದ ಮೇಲೂ ಕಾಂಗ್ರೆಸ್‌ ಸರ್ಕಾರ ನೀರು ಹರಿಸುವುದನ್ನು ಇಂದಿಗೂ ನಿಲ್ಲಿಸುತ್ತಿಲ್ಲ..!

* ಕರ್ನಾಟಕ ಬಂದ್‌ಗೆ ಕರೆಕೊಟ್ಟ ಮೇಲೆ ಇದೀಗ ಸಂಸದರು ಮಧ್ಯ ಪ್ರವೇಶಿಸಬೇಕೆಂದು ನಾಟಕವಾಡುತ್ತಿದೆ..!

'ಹಲೋ ಮಿಸ್ಟರ್ ಸಿದ್ದರಾಮಯ್ಯ ಅವರೇ, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿರುವುದು 135‌ ಕಾಂಗ್ರೆಸ್‌ ಶಾಸಕರಿಂದ. ಕೈಲಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ..!' ಎಂದು ಬಿಜೆಪಿ ಸವಾಲು ಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+