Free Solar Rooftop Scheme 2024: ಉಚಿತ ಸೌರ ಮೇಲ್ಛಾವಣಿ ಯೋಜನೆ ನೋಂದಣಿ ಪ್ರಾರಂಭಿಸಿದ ಅಂಚೆ ಇಲಾಖೆ
ಬೆಂಗಳೂರು, ಮಾರ್ಚ್ 05: ಸೌರ ಮೇಲ್ಛಾವಣಿ ಯೋಜನೆ 2024 ಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ್ದಾರೆ. ಈ ಯೋಜನೆಯು ಬಡ ವರ್ಗಕ್ಕೆ ಸೇರಿದ ಅಥವಾ ದುರ್ಬಲ ಆರ್ಥಿಕ ಪರಿಸ್ಥಿತಿ ಹೊಂದಿರುವ ಜನರಿಗೆ ಕರೆಂಟ್ ಬಿಲ್ ಕಡಿಮೆ ಮಾಡುತ್ತದೆ. ಈ ಯೋಜನೆಯಲ್ಲಿ, ಸೋಲಾರ್ ಪ್ಯಾನಲ್‌ಗಳನ್ನು ಅವರ ಮನೆಯ ಮೇಲ್ಛಾವಣಿಯಲ್ಲಿ ಅಳವಡಿಸಲಾಗುತ್ತದೆ.
ಈ ಯೋಜನೆ ಬಳಿಕ ಬಡ ನಾಗರಿಕರು ಕರೆಂಟ್ ಬಿಲ್‌ಗಳನ್ನು ಪಾವತಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ದೇಶದ ಹಲವು ಭಾಗಗಳಲ್ಲಿ ಈಗಾಗಲೇ ಈ ಯೋಜನೆಯ ನೋಂದಣಿ ಶುರುವಾಗಿದೆ. ರಾಜ್ಯದಲ್ಲಿಯೂ ಅಂಚೆ ಇಲಾಖೆ ನೌಕರರು ಜನರ ಬಳಿ ಹೋಗಿ ನೋಂದಣಿ ಮಾಡಿಸುತ್ತಿದ್ದಾರೆ. ರಾಜ್ಯದ ಅಂಚೆ ಇಲಾಖೆಯ ನೌಕರರು ಭಾನುವಾರವೂ ಕೆಲಸದಲ್ಲಿ ನಿರತರಾಗಿದ್ದು, ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆ ಅಡಿಯಲ್ಲಿ ನೋಂದಾಯಿಸಲು ಆಸಕ್ತಿ ಹೊಂದಿರುವ ಕುಟುಂಬಗಳನ್ನು ನೊಂದಾಯಿಸಿದ್ದಾರೆ.

ಫೆಬ್ರವರಿ 15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಈ ಯೋಜನೆಯ ಮೂಲಕ ಮನೆಗಳಿಗೆ ತಮ್ಮ ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಸಹಾಯಧನವನ್ನು ಒದಗಿಸುತ್ತದೆ. ದೇಶಾದ್ಯಂತ 1 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
"ನಾವು ಈ ಯೋಜನೆಯ ನೋಂದಣಿಯನ್ನು ಒಂದೆರಡು ದಿನಗಳ ಹಿಂದೆ ನಮ್ಮ ನೆಟ್‌ವರ್ಕ್‌ನಲ್ಲಿ ಪ್ರಾರಂಭಿಸಿದ್ದೇವೆ. ನಾವು 5 ಲಕ್ಷ ಕುಟುಂಬಗಳನ್ನು ಗುರಿಯಾಗಿಸಿಕೊಂಡಿದ್ದೇವೆ ಮತ್ತು ಇದುವರೆಗೆ ಸರಿಸುಮಾರು 20,000 ಮನೆಗಳನ್ನು ನೋಂದಾಯಿಸಿದ್ದೇವೆ" ಎಂದು ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ (ಸಿಪಿಎಂಜಿ), ಕರ್ನಾಟಕ ಪೋಸ್ಟಲ್ ಸರ್ಕಲ್, ಎಸ್ ರಾಜೇಂದ್ರ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಜನರು ಅಂಚೆ ಕಚೇರಿಗಳಲ್ಲಿ, ಗ್ರಾಮ ದಕ್ ಸೇವಕರಲ್ಲಿ ಜನರು ಯೋಜನೆಗೆ ನೋಂದಾಯಿಸಿಕೊಳ್ಳಬಹುದು ಅಥವಾ ಈ ಸಂಬಂಧವಾಗಿ ಮನೆ-ಮನೆಗೆ ಸಮೀಕ್ಷೆ ನಡೆಸುತ್ತಿರುವ ನಮ್ಮ ಅಂಚೆ ನೌಕರರನ್ನು ಸಂಪರ್ಕಿಸಬಹುದು. ಇದಕ್ಕೆ ಕಳೆದ ಆರು ತಿಂಗಳ ವಿದ್ಯುತ್ ಬಿಲ್ ಕಡ್ಡಾಯವಾಗಿದೆ. ರಾಜ್ಯಾದ್ಯಂತ ಅಂಚೆ ಸಿಬ್ಬಂದಿ ವಾರಾಂತ್ಯದಲ್ಲಿ ಸಾಧ್ಯವಾದಷ್ಟು ಮನೆಗಳನ್ನು ನೊಂದಾಯಿಸುವ ಕೆಲಸ ಮಾಡಿದ್ದಾರೆ ಎಂದು ಎಸ್ ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಇದು ಇಂಡಿಯಾ ಪೋಸ್ಟ್ ನಡೆಸಿದ ಅಖಿಲ ಭಾರತ ಅಭಿಯಾನದ ಭಾಗವಾಗಿದೆ. ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ನಿರ್ವಹಿಸುವ ಈ ಯೋಜನೆಯು ದೇಶಾದ್ಯಂತ ಮನೆಗಳಲ್ಲಿ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆ ಮಾಡುವುದನ್ನು ಖಚಿತಪಡಿಸುತ್ತದೆ ಎಂದು ಅಂಚೆ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಈ ಯೋಜನೆಯು ಸರ್ಕಾರಕ್ಕೆ ವಾರ್ಷಿಕ 75,000 ಕೋಟಿ ವಿದ್ಯುತ್ ವೆಚ್ಚವನ್ನು ಉಳಿಸುವ ನಿರೀಕ್ಷೆಯಿದೆ ಎಂದು ಸಚಿವಾಲಯದ ಅಧಿಕೃತ ವೆಬ್‌ಸೈಟ್ ಹೇಳುತ್ತದೆ. ಸೋಲಾರ್ ಪ್ಯಾನಲ್ ಅಳವಡಿಸಲು ಶೇ.40ರಷ್ಟು ಸಬ್ಸಿಡಿ ಹಾಗೂ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ಸಿಗಲಿದೆ. ಹೆಚ್ಚುವರಿ ವಿದ್ಯುತ್ ಉತ್ಪಾದಿಸುವವರು ಅವುಗಳನ್ನು ಗ್ರಿಡ್‌ಗೆ ವಾಪಸ್ ಮಾರಾಟ ಮಾಡುವ ಮೂಲಕ ಹಣಗಳಿಸಬಹುದು ಎಂದು ಸಿಪಿಎಂಜಿ ಹೇಳಿದೆ.
-
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications