ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 15: ಕರ್ನಾಟಕ ಬಜೆಟ್ 2017ರಲ್ಲಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಿಕ್ಕಿದ್ದೇನು ಎಂಬುದರ ಬಗ್ಗೆ ಪ್ರಮುಖ ಅಂಶಗಳು ಹೀಗಿವೆ.

* ರಾಯಚೂರು-ಯಾದಗಿರಿ ಜಿಲ್ಲೆಯ ಎಲ್ಲ ಕಾಲೇಜು ವ್ಯಾಪ್ತಿ ಒಳಗೊಂಡ ಹಾಗೆ ರಾಯಚೂರು ವಿವಿ ಸ್ಥಾಪನೆ[21 ಜಿಲ್ಲೆಗಳಲ್ಲಿ 43 ಹೊಸ ತಾಲೂಕುಗಳ ರಚನೆ]

* ಕರ್ನಾಟಕ ರಾಜ್ಯ ವಿವಿ ಅಧಿನಿಯಮ 2000ದ ಸಾಮಾನ್ಯ ಉಪಬಂಧ ಜಾರಿ ಹಾಗೂ ವಿವಿ ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ[21 ಜಿಲ್ಲೆಗಳಲ್ಲಿ 43 ಹೊಸ ತಾಲೂಕುಗಳ ರಚನೆ]

Free laptops for higher education students

* ರಾಜ್ಯದಾದ್ಯಂತ ಗ್ರಾಮೀಣ ಪ್ರದೇಶದಲ್ಲಿ 4 ಕೋಟಿ ವೆಚ್ಚದಲ್ಲಿ 25 ಹೊಸ ಸರಕಾರಿ ಪಾಲಿಟೆಕ್ನಿಕ್[ಬಜೆಟ್ 2017: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ. 100ರಷ್ಟು ಮೀಸಲಾತಿ]

* ತಲಾ 2 ಕೋಟಿ ವೆಚ್ಚದಲ್ಲಿ ಹಂತಹಂತವಾಗಿ ಸರಕಾರಿ ಪಾಲಿಟೆಕ್ನಿಕ್ ಗಳಲ್ಲಿ 23 ಮಹಿಳಾ ಹಾಸ್ಟೆಲ್ ನಿರ್ಮಾಣ[ಬಜೆಟ್ 2017: ಅಲ್ಪಸಂಖ್ಯಾತ, ಹಿಂದುಳಿದ ವರ್ಗಕ್ಕೆ ಹೊಸ ಯೋಜನೆಗಳು]

* ಹೆಣ್ಣು ಹಾಗೂ ಗಂಡುಮ 10 ಮಾದರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜುಗಳ ಸ್ಥಾಪನೆ.[ರಾಜ್ಯ ಬಜೆಟ್ ನಲ್ಲಿ ಮಹಿಳೆಯರಿಗೇನಿದೆ?]

* ಮೂಲಸೌಕರ್ಯ ಹಾಗೂ ನವೀಕರಣಕ್ಕಾಗಿ ಶತಮಾನ ಪೂರೈಸಿರುವ ಬೆಂಗಳೂರಿನ ಯುನಿವರ್ಸಿಟಿ ವಿಶ್ಟೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್‌ಗೆ 25 ಕೋಟಿ ಹಾಗೂ ಧಾರವಾಡದ ಕರ್ನಾಟಕ ಕಾಲೇಜಿಗೆ 5 ಕೋಟಿ ಅನುದಾನ[LIVE: ಬೆಂಗಳೂರಿನ ಅರ್ಬನ್ ರೈಲ್ವೆಗೆ 345 ಕೋಟಿ ರು]

* ಹಂಪಿ ಕನ್ನಡ ವಿವಿ ಬೆಳ್ಳಿಹಬ್ಬದ ಅಂಗವಾಗಿ ಮೂಲಸೌಲಭ್ಯ ಹಾಗೂ ಅಭಿವೃದ್ಧಿಗಾಗಿ 25 ಕೋಟಿ ಅನುದಾನ

* ಕರ್ನಾಟಕ ವಿವಿ ಮಹಾಯೋಗಿ ವೇಮನ ಅಧ್ಯಯನ ಪೀಠಕ್ಕಾಗಿ ಕಟ್ಟಡ ನಿರ್ಮಾಣಕ್ಕೆ 3 ಕೋಟಿ ಅನುದಾನ[ಬಜೆಟ್ 2017: ನಮ್ಮ ಬೆಂಗಳೂರಿಗೆ ಸಿಕ್ಕಿದ್ದೇನು?]

* ದೇಶದಲ್ಲಿಯೇ ಪ್ರಪ್ರಥಮವಾಗಿ ಮೀಸಲಾತಿ ಜಾರಿಗೆ ತಂದ ಸಾಹು ಮಹಾರಾಜ್‌ ಹೆಸರಿನಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡದಲ್ಲಿ ಅಧ್ಯಯನ ಪೀಠ ಸ್ಥಾಪನೆ.[ಕರ್ನಾಟಕ ಬಜೆಟ್ ನ ಪ್ರಮುಖಾಂಶಗಳು]

* ಸರಕಾರಿ ಮತ್ತು ಅನುದಾನಿತ ವೈದ್ಯಕೀಯ, ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಮತ್ತು ಪ್ರಥಮದರ್ಜೆ ಕಾಲೇಜುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ; 1.5 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ[ಬಜೆಟ್ 2017: ದ್ವಿಚಕ್ರವಾಹನ ಖರೀದಿ ದುಬಾರಿ, ಮದ್ಯ ಬೆಲೆ ಹೆಚ್ಚಳ]

* ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯದಲ್ಲಿನ ಅಂತರವನ್ನು ತುಂಬಲು ಮಧ್ಯಮಾವಧಿ ಆರ್ಥಿಕ ಯೋಜನೆ ತಯಾರಿಕೆ ಹಾಗೂ ಅನುದಾನ. ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪನೆ.[ಬಜೆಟ್ 2017: ಬಳ್ಳಾರಿ ಜಿಲ್ಲೆಯಲ್ಲಿ ಕುರಿ ಸಂವರ್ಧನಾ ಕೇಂದ್ರ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Here is the highlights of higher education department in Karnataka budget 2017 by chief minister Siddaramaiah.
Please Wait while comments are loading...