• search

ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್‌ಪಾಸ್‌: ಕುಮಾರಸ್ವಾಮಿ

By Nayana
Subscribe to Oneindia Kannada
For Quick Alerts
ALLOW NOTIFICATIONS
For Daily Alerts
        ಸರ್ಕಾರೀ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್ ಪಾಸ್ ಎಂದು ಘೋಷಿಸಿದ ಎಚ್ ಡಿ ಕೆ| Oneindia Kannada

        ಬೆಂಗಳೂರು, ಜು.23: ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್‌ಪಾಸ್‌ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

        ರಾಮನಗರದಲ್ಲಿ ಸೋಮವಾರ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್‌ಪಾಸ್‌ ನೀಡಲಾಗುತ್ತದೆ, ಖಾಸಗಿ ಶಾಲೆ ಮಕ್ಕಳು 50 ರಿಂದ 1 ಲಕ್ಷ ರೂ. ನೀಡಿ ಶಾಲೆಗೆ ಹೋಗುತ್ತಾರೆ ಅವರಿಗೆ ಬಸ್‌ಚಾರ್ಜ್‌ ನೀಡುವುದು ಕಷ್ಟವಾಗುವುದಿಲ್ಲ ಎಂದು ಸ್ವಲ್ಪ ಖಾರವಾಗಿಯೇ ನುಡಿದಿದ್ದಾರೆ.

        ಎಲ್ಲರಿಗೂ ಉಚಿತ ಬಸ್‌ಪಾಸ್‌ ನೀಡಲು ಸಾಧ್ಯವಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ

        ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್‌ ನೀಡುವಂತೆ ಹಲವು ದಿನಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು, ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಾನು ಚುನಾವಣೆಗೂ ಮುನ್ನ ಉಚಿತ ಬಸ್‌ಪಾಸ್‌ ನೀಡುವುದಾಗಿ ಹೇಳಿರಲಿಲ್ಲ ಎಂದಿದ್ದರು.

        Free buspass for Govt students only: says Kumaraswamy

        ಇದೀಗ ಬಸ್‌ಪಾಸ್‌ ಕುರಿತು ಮತ್ತೊಮ್ಮೆ ಪ್ರತಿಕ್ರಿಯೆ ನೀಡಿರುವ ಅವರು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ಪಾಸ್‌ ನೀಡಲಾಗುತ್ತದೆ ಎಂದಿದ್ದಾರೆ.

        ಖಾಸಗಿ ಶಾಲಾ ವಿದ್ಯಾರ್ಥಿಗಳು 50 ಸಾವಿರದಿಂದ 1 ಲಕ್ಷದವರೆಗೂ ಡೊನೇಶನ್‌ ನೀಡಿ ಶಾಲೆ ಸೇರುತ್ತಾರೆ, ಅಂತವರಿಗೆ ದುಡ್ಡುಕೊಟ್ಟು ಬಸ್‌ನಲ್ಲಿ ಪ್ರಯಾಣಿಸುವುದು ಕಷ್ಟವಾಗುವುದಿಲ್ಲ, ಉಚಿತ ಬಸ್‌ಪಾಸ್‌ ಬೇಕಿದ್ದರೆ ಸರ್ಕಾರಿ ಶಾಲೆಗಳಿಗೆ ಬನ್ನು ನಿಮಗೂ ಬಸ್‌ಪಾಸ್‌ ಕೊಡೋಣ ಎಂದು ಪರೋಕ್ಷವಾಗಿ ನುಡಿದಿದ್ದಾರೆ. ಮಂಗಳವಾರ ಸಭೆ ಕರೆದು ಈ ಕುರಿತು ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬರುವುದಾಗಿ ತಿಳಿಸಿದರು.

        ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

        English summary
        Chief minister HD kumaraswamy announced that Government school children will get free bus pass. He categorically rejected that private school students are capable to give bus fare.

        Oneindia ಬ್ರೇಕಿಂಗ್ ನ್ಯೂಸ್,
        ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

        X
        We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more