• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರುಗೆ ಹೃದಯಾಘಾತ

|
Google Oneindia Kannada News

ಬೆಂಗಳೂರು, ನವೆಂಬರ್ 25; ರೋಣ- ಗದಗ ಕ್ಷೇತ್ರದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರುಗೆ ಹೃದಯಾಘಾತವಾಗಿದೆ. ಕಾಂಗ್ರೆಸ್ ನಾಯಕನನ್ನು ಕಾರ್ಯಕರ್ತರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಶುಕ್ರವಾರ ಶ್ರೀಶೈಲಪ್ಪ ಬಿದರೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಗೆ ಆಗಮಿಸಿದ್ದರು. ಸಭೆಯ ಆರಂಭದಲ್ಲಿಯೇ ಅವರು ವಾಂತಿ ಮಾಡಿಕೊಂಡು ಕುಸಿದು ಬಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಗದಗ ಮೃಗಾಲಯದಲ್ಲಿ ಕೆಲಸ ಖಾಲಿ ಇದೆ, ನ.29ಕ್ಕೆ ನೇರ ಸಂದರ್ಶನ ಗದಗ ಮೃಗಾಲಯದಲ್ಲಿ ಕೆಲಸ ಖಾಲಿ ಇದೆ, ನ.29ಕ್ಕೆ ನೇರ ಸಂದರ್ಶನ

ಬೆಂಗಳೂರು ನಗರದ ಹೊರವಲಯದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಗೆ ಶ್ರೀಶೈಲಪ್ಪ ಬಿದರೂರು ಬಂದಿದ್ದರು. ಸಭೆ ಆರಂಭಕ್ಕೂ ಮುನ್ನ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಕಾರಿನ ಮೂಲಕ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಗದಗ-ಯಲವಿಗಿ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರದಿಂದ 600 ಕೋಟಿ: ಸಿಎಂ ಭರವಸೆ ಗದಗ-ಯಲವಿಗಿ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರದಿಂದ 600 ಕೋಟಿ: ಸಿಎಂ ಭರವಸೆ

ಶ್ರೀಶೈಲಪ್ಪ ಬಿದರೂರು ರೋಣ ಹಾಗೂ ಗದಗ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತರಾಗಿದ್ದ ಅವರು 2019ರಲ್ಲಿ ಕಾಂಗ್ರೆಸ್ ಸೇರಿದ್ದರು.

death-news

ಗದಗ; ಕಾಲಕಾಲೇಶ್ವರ ಬೆಟ್ಟದಲ್ಲಿ ಸೃಷ್ಟಿಯಾದ ಜಲಧಾರೆಗಳು, ಇಲ್ಲಿದೆ ವಿವರ ಗದಗ; ಕಾಲಕಾಲೇಶ್ವರ ಬೆಟ್ಟದಲ್ಲಿ ಸೃಷ್ಟಿಯಾದ ಜಲಧಾರೆಗಳು, ಇಲ್ಲಿದೆ ವಿವರ

ಗದಗ ಜಿಲ್ಲೆಯ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕನಿಗೆ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಕ್ಕಿರಲಿಲ್ಲ. ಆದ ಕಾರಣ ಶ್ರೀಶೈಲಪ್ಪ ಬಿದರೂರು ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದರು.

Breaking; ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಹೃದಯಾಘಾತದಿಂದ ನಿಧನBreaking; ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಹೃದಯಾಘಾತದಿಂದ ನಿಧನ

ಹಿಂದೆ ಜನತಾ ಪಕ್ಷದಲ್ಲಿದ್ದ ಶ್ರೀಶೈಲಪ್ಪ ಬಿದರೂರು ನಂತರ ಬಿಜೆಪಿ ಸೇರಿದ್ದರು. ಆದರೆ 2018ರ ಟಿಕೆಟ್ ಕೈ ತಪ್ಪಿದ ಬಳಿಕ ಹಳೆಯ ಗೆಳೆಯ ಸಿದ್ದರಾಮಯ್ಯ ಜೊತೆ ಸೇರಿದ್ದರು. 2019ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.

ರಾಜಕೀಯ ಪರಿಚಯ; 1994ರಲ್ಲಿ ರೋಣ ಕ್ಷೇತ್ರದಿಂದ ಜನತಾದಳದಿಂದ ಕಣಕ್ಕಿಳಿದಿದ್ದ ಶ್ರೀಶೈಲಪ್ಪ ಬಿದರೂರು ಕಾಂಗ್ರೆಸ್ ಅಭ್ಯರ್ಥಿ ಜಿ. ಎಸ್. ಪಾಟೀಲ್ ವಿರುದ್ಧ ಗೆಲುವು ಪಡೆದಿದ್ದರು. 1999ರಲ್ಲಿ ಜೆಡಿಎಸ್‌ನಿಂದ ರೋಣದಿಂದ ಕಣಕ್ಕಿಳಿದು ಸೋಲು ಕಂಡಿದ್ದರು.

2005ರಲ್ಲಿ ಭಾರತೀಯ ಜನತಾ ಪಕ್ಷದ ಸೇರ್ಪಡೆಯಾಗಿ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದರು. 2008ರಲ್ಲಿ ಗದಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ಎಚ್. ಕೆ. ಪಾಟೀಲ್ ಸೋಲಿಸಿದರು. ಯಡಿಯೂರಪ್ಪ ಬಿಜೆಪಿ ಬಿಟ್ಟು, ಕೆಜೆಪಿ ಸೇರಿದಾಗ ಅವರ ಜೊತೆ ಕೆಜೆಪಿ ಸೇರಿದ್ದರು. ಬಳಿಕ ಮತ್ತೆ ಬಿಜೆಪಿಗೆ ವಾಪಸ್ ಆಗಿದ್ದರು.

2013ರಲ್ಲಿ ಗದಗ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಎಚ್‌. ಕೆ. ಪಾಟೀಲ್ ವಿರುದ್ಧ ಸೋಲು ಕಂಡು, ಠೇವಣಿ ಕಳೆದುಕೊಂಡರು. ನವೆಂಬರ್ 15ರಂದು ಮುಂದಿನ ಚುನಾವಣಗೆ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು.

English summary
Congress leader and former MLA Shrishailappa Bidarur admitted to hospital after heart attack. He is two term MLA of Ron & Gadag constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X