ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮೇಶ್ ಜಾರಕಿಹೊಳಿ ಸಿಡಿ ಕೇಸ್: ಅತ್ಯಾಚಾರ ಕೇಸಿನಲ್ಲಿ ಬಿ ವರದಿ ಸಲ್ಲಿಸಿದ ಎಸ್ಐಟಿ

|
Google Oneindia Kannada News

ಬೆಂಗಳೂರು, ಫೆ. 04: ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದ ಮಾಜಿ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಯುವತಿ ಆರೋಪಿಸಿ ರಮೇಶ್ ಜಾರಕಿಹೊಳಿ ವಿರುದ್ಧ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಸಕ್ಷಮ ನ್ಯಾಯಾಲಯಕ್ಕೆ 150 ಪುಟಗಳ ಬಿ ವರದಿಯನ್ನು ಸಲ್ಲಿಸಿದೆ.

ಮುಚ್ಚಿದ ಲಕೋಟೆಯಲ್ಲಿ ಸಾಕ್ಷಾಧಾರಗಳ ಜತೆಗೆ 150 ಪುಟಗಳ ತನಿಖಾ ವರದಿಯನ್ನು ತಂದ ತನಿಖಾಧಿಕಾರಿ ಎಸಿಪಿ ಕವಿತಾ ಅವರು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಬಿ ವರದಿಯನ್ನು ಶುಕ್ರವಾರ ಸಲ್ಲಿಸಿದ್ದಾರೆ. ತನಿಖಾ ವರದಿಯನ್ನು ತನಿಖಾ ತಂಡದ ಮುಖ್ಯಸ್ಥರ ಸಹಿಯೊಂದಿಗೆ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲು ಹೈಕೋರ್ಟ್ ಗುರುವಾರ ಅನುಮತಿ ನೀಡಿತ್ತು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಎಸ್ಐಟಿ ಅಧಿಕಾರಿಗಳು ಸಲ್ಲಿಸಿದ್ದಾರೆ.

ಅಶ್ಲೀಲ ಸಿಡಿ ಸ್ಫೋಟಗೊಂಡ ಬೆನ್ನಲ್ಲೇ ಜಲ ಸಂಪನ್ಮೂಲ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜಿನಾಮೆ ನೀಡಿದ್ದರು. ಇದೀಗ ರಮೇಶ್ ಜಾರಕಿಹೊಳಿ ವಿರುದ್ಧ ಹೊರಿಸಿದ್ದ ಕೆಲಸ ಕೊಡಿಸುವ ಅಮಿಷ ಒಡ್ಡಿ ನನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಕ್ಲೀನ್ ಚಿಟ್ ನೀಡಿದೆ.

Former Minister Ramesh Jarkiholi gets Big Relief in CD Case; SIT Submits B Report

ಎಸ್ ಐಟಿ ವರದಿಯಲ್ಲಿ ಏನಿದೆ?: ಇಬ್ಬರ ಪರಸ್ಪರ ಸಮ್ಮತಿ ಮೇರೆಗೆ ಲೈಂಗಿಕ ಸಂಪರ್ಕ ನಡೆದಿದೆ. ಯಾರ ಒತ್ತಾಯಕ್ಕೂ ಲೈಂಗಿಕ ದೌರ್ಜನ್ಯ ನಡೆದಿಲ್ಲ. ಈ ಪ್ರಕರಣದಲ್ಲಿ ಅತ್ಯಾಚಾರ ಎನ್ನುವ ಅಂಶವೇ ಬೆಳಕಿಗೆ ಬಂದಿಲ್ಲ ಎಂದು ಸಾಕ್ಷ್ಯಾಧಾರ ಆಧರಿಸಿ ಬಿ ವರದಿ ಸಲ್ಲಿಸಿದೆ.

ಆರೋಪಿ ಕೂಡ ಸಮ್ಮತಿ ಮೇರೆಗೆ ನಡೆದಿರುವ ಲೈಂಗಿಕ ಕ್ರಿಯೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಅದಕ್ಕೆ ಪೂರಕ ಸಾಕ್ಷಾಧಾರಗಳು ಕೂಡ ಲಭ್ಯವಾಗಿವೆ. ಇಬ್ಬರು ಕೂಡ ಸಾಕಷ್ಟು ದಿನಗಳಿಂದ ಪೋನ್ ಸಂಪರ್ಕದಲ್ಲಿದ್ದರು. ಇಬ್ಬರೂ ಸಮ್ಮತಿ ಮೇರೆಗೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ಯುವತಿ ಆರೋಪಿಸಿದಂತೆ ಯಾವುದೇ ಬಲತ್ಕಾರ ನಡೆದಿಲ್ಲ. ಮಾಜಿ ಸಚಿವರು ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂಬುದು ಆಧಾರ ರಹಿತ. ಇದಕ್ಕೆ ಪೂರಕ ಯಾವುದೇ ಸಾಕ್ಷಾಧಾರಗಳು ಲಭ್ಯವಾಗಿಲ್ಲ. ತಾಂತ್ರಿಕ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಎಸ್ಐಟಿ ತನಿಖಾ ವರದಿಯಲ್ಲಿ ಉಲ್ಲೇಖಿಸಿ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಸಂತ್ರಸ್ತ ಯುವತಿ ಮತ್ತು ಆರೋಪಿ ನಿರಂತರ ದೂರವಾಣಿ ಮೂಲಕ ತುಂಬಾ ಸಲುಗೆಯಿಂದಲೇ ಮಾತನಾಡಿದ್ದಾರೆ. ಮಾತನಾಡುವಾಗ ಲೈಂಗಿಕ ಪ್ರಚೋದನೆಯ ಮಾತುಗಳಿವೆ. ಒಬ್ಬರ ಮೇಲೆ ಮತ್ತೊಬ್ಬರು ಒತ್ತಡ ಹೇರಿದ್ದಾರೆ ಎಂಬುದಕ್ಕೆ ಯಾವ ಪುರಾವೆಯೂ ಸಿಕ್ಕಿಲ್ಲ. ಇನ್ನು ಸಂತ್ರಸ್ತ ಯುವತಿ ನ್ಯಾಯಾಲಯದ ಮುಂದೆ ಕೊಟ್ಟಿರುವ ಹೇಳಿಕೆಗೂ ತನಿಖಾಧಿಕಾರಿಗಳ ಮುಂದೆ ನೀಡಿರುವ ಹೇಳಿಕೆಗೂ ಭಾರೀ ವ್ಯತ್ಯಾಸವಿದೆ. ನ್ಯಾಯಾಧೀಶರ ಮುಂದೆ ದಾಖಲಿಸಿದ ಹೇಳಿಕೆಗೆ ಸಂಬಂಧಿಸಿದಂತೆ ಯಾವ ಸಾಕ್ಷ್ಯಾಧಾರಗಳನ್ನು ಸಂತ್ರಸ್ತ ಯುವತಿ ನೀಡಿಲ್ಲ. ಆರೋಪಿ ಮತ್ತು ಸಂತ್ರಸ್ತ ಯುವತಿ ಮನೆ ಶೋಧದಲ್ಲಿಯೂ ಸಹ ಪೂರಕ ಸಾಕ್ಷಿಗಳು ಸಿಕ್ಕಿಲ್ಲ. ಸಂತ್ರಸ್ತ ಯುವತಿ ಹೇಳಿದಂತೆ ಅಪಾರ್ಟ್‌ಮೆಂಟ್‌ನಲ್ಲಿ ಕೂಡ ಬಲತ್ಕಾರ ನಡೆದಿರುವುದಕ್ಕೆ ಯಾವ ಕುರುಹು ಸಿಕ್ಕಿಲ್ಲ ಎಂದು ಎಸ್ಐಟಿ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿರುವುದು ಅದು ಎಡಿಟೆಡ್ ಆಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ಕೂಡ ಸ್ಪಷ್ಟ ವರದಿ ನೀಡಿಲ್ಲ. ಉದ್ದೇಶ ಪೂರ್ವಕವಾಗಿಯೇ ಯುವತಿ ವಿಡಿಯೋ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಯುವತಿ ಎರಡು ಬಾರಿ ವಿಡಿಯೋ ಮಾಡಿದ್ದು, ಇದರ ಉದ್ದೇಶ ಬೇರೆಯದ್ದೇ ಇದೆ. ಸಂತ್ರಸ್ತ ಯುವತಿ ಬಳಸಿರುವ ಎರಡು ಕ್ಯಾಮರಾಗಳ ಪೈಕಿ ಒಂದು ವ್ಯಾನಿಟಿ ಬ್ಯಾಗ್‌ನಲ್ಲಿ ಇತ್ತು ಎಂಬುದು ಸ್ಪಷ್ಟವಾಗಿದೆ. ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಕ್ಯಾಮರಾ ಬೇರೊಬ್ಬ ಯುವಕನ ನೆರವಿನಿಂದ ಆಫ್ ಮಾಡಿದ್ದಾರೆ. ಕ್ಯಾಮರಾ ಆಫ್ ಮಾಡುವ ಸಂಬಂಧ ಯುವತಿ ಕೂಡ ಭಿನ್ನ ಹೇಳಿಕೆ ನೀಡಿದ್ದು, ಅದನ್ನು ತನಿಖಾ ವರದಿಯೊಂದಿಗೆ ಉಲ್ಲೇಖಿಸಲಾಗಿದೆ ಎಂದು ಎಸ್ಐಟಿ ತಿಳಿಸಿದೆ.

ಪ್ರಕರಣದ ಆರೋಪಿ ತನ್ನನ್ನು ಹೆದರಿಸಿದ್ದರು. ಎರಡು ಬಾರಿ ವಿಡಿಯೋ ತುಣುಕು ಕಳುಹಿಸಿದ್ದು, ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಆರೋಪಿಯ ಹೇಳಿಕೆಗೆ ಪೂರಕ ಕೆಲವು ಸಾಕ್ಷಿಗಳು ಸಿಕ್ಕಿವೆ. ಯುವತಿ ಮೇಲೆ ಗಂಭೀರ ಆರೋಪ ಇದ್ದು, ಆರೋಪಗಳಿಗೆ ಪ್ರಬಲ ಸಾಕ್ಷಿಗಳು ಇಲ್ಲದೇ ಇದ್ದರೂ ಅನುಮಾನ ವ್ಯಕ್ತವಾಗಿದೆ. ಇಬ್ಬರೂ ಪ್ರಾಪ್ತರಾಗಿದ್ದು, ಸಮ್ಮತಿ ಮೇರೆಗೆ ಲೈಂಗಿಕ ಸಂಪರ್ಕ ಸಾಧಿಸಿದ್ದು, ಒತ್ತಾಯ ಪೂರ್ವಕವಾಗಿ ಯಾರ ಮೇಲೆ ಅತ್ಯಾಚಾರ ನಡೆದಿಲ್ಲ ಅನ್ನೋದು ಸ್ಪಷ್ಟವಾಗಿದೆ ಎಂದು ಎಸ್ಐಟಿ ವರದಿಯಲ್ಲಿ ಉಲ್ಲೇಖಿಸಿದೆ ಎಂದು ತಿಳಿದು ಬಂದಿದೆ.

English summary
Ramesh Jarkiholi CD Case: Former Minister Ramesh Jarkiholi gets Big Relief in CD Case; SIT submit B report to magistrate court after Karnataka High Court Order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X