ಕುತೂಹಲ ಮೂಡಿಸಿದ ಎಸ್‌.ಎಂ.ಕೃಷ್ಣ, ರಮೇಶ್ ಜಾರಕಿಹೊಳಿ ಭೇಟಿ

Recommended Video

      ಯಡಿಯೂರಪ್ಪನನ್ನು ಬಿಟ್ಟು S M ಕೃಷ್ಣ ಹಿಂದೆ ಬಿದ್ದ ರಮೇಶ್ ಜಾರಕಿಹೊಳಿ..!

      ಬೆಂಗಳೂರು, ಮೇ 26 : ಮಹತ್ವದ ಬೆಳವಣಿಗೆಯೊಂದರಲ್ಲಿ ಗೋಕಾಕ್ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಮೇಶ್ ಜಾರಕಿಹೊಳಿ ಅವರು ಎಸ್‌.ಎಂ.ಕೃಷ್ಣ ಅವರನ್ನು ಭೇಟಿಯಾದರು. ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರು ಸಹ ಆಗ ಎಸ್‌.ಎಂ.ಕೃಷ್ಣ ನಿವಾಸದಲ್ಲಿದ್ದರು.

      ಭಾನುವಾರ ಸದಾಶಿವ ನಗರದ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ಅವರು ಎಸ್.ಎಂ.ಕೃಷ್ಣ ಭೇಟಿ ಮಾಡಿದರು. ಕಾಂಗ್ರೆಸ್ ನಾಯಕರ ಮೇಲೆ ಅಸಮಾಧಾನಗೊಂಡಿರುವ ಅವರು, ಎಸ್.ಎಂ.ಕೃಷ್ಣ ಭೇಟಿ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.

      Former minister Ramesh Jarakiholi meets SM Krinshna

      ರಮೇಶ್ ಜಾರಕಿಹೊಳಿ ಅವರ ಜೊತೆ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ಅವರು ಸಹ ಎಸ್.ಎಂ.ಕೃಷ್ಣ ಭೇಟಿಯಾದರು. ಭೇಟಿಯ ಹಿಂದೆ ಯಾವುದೇ ರಾಜಕೀಯ ಕಾರಣಗಳಿಲ್ಲ ಎಂದು ಉಭಯ ಶಾಸಕರು ಸ್ಪಷ್ಟಪಡಿಸಿದರು.

      ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, 'ಇದು ರಾಜಕೀಯ ಭೇಟಿಯಲ್ಲ. ಕರ್ನಾಟಕದಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಜಯಗಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸಲು ಬಂದಿದ್ದೇವೆ' ಎಂದು ಹೇಳಿದರು.

      ಆರ್.ಅಶೋಕ್ ಅವರು ಮಾತನಾಡಿ, 'ಪಕ್ಷದ ವಿಚಾರವನ್ನು ಮಾತನಾಡಲು ನಾನು ಆಗಮಿಸಿದ್ದೆ. ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ, ಡಾ.ಸುಧಾಕರ್ ಅವರ ಜೊತೆ ಯಾವುದೇ ಸ್ನೇಹವಿಲ್ಲ' ಎಂದು ಸ್ಪಷ್ಟಪಡಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+