ತಜ್ಞರ ಸಮಿತಿಗೆ ಎಂ.ಸಿ.ನಾಣಯ್ಯ ರಾಜೀನಾಮೆ
ಬೆಂಗಳೂರು, ಮಾ.12 : ಅತ್ಯಾಚಾರ ಪ್ರಕರಣಗಳ ನಿಯಂತ್ರಣ, ಕಾನೂನಿಗೆ ತಿದ್ದುಪಡಿ ಹಾಗೂ ಶಿಕ್ಷೆ ಪ್ರಮಾಣ ಹೆಚ್ಚಿಸುವ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಲು ಸರ್ಕಾರ ಮಾಜಿ ಸಚಿವ ಎಂ.ಸಿ.ನಾಣಯ್ಯ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚನೆ ಮಾಡಿತ್ತು. ಗುರುವಾರ ಸಮಿತಿಗೆ ಎಂ.ಸಿ.ನಾಣಯ್ಯ ಅವರು ರಾಜೀನಾಮೆ ನೀಡಿದ್ದಾರೆ.
ಗುರುವಾರ ಗೃಹ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಎಂ.ಸಿ.ನಾಣಯ್ಯ ಅವರು ರಾಜೀನಾಮೆಯನ್ನು ಸಲ್ಲಿಕೆ ಮಾಡಿದ್ದಾರೆ. ಆದರೆ, ರಾಜೀನಾಮೆಗೆ ನಿಖರವಾದ ಕಾರಣ ಏನೆಂದು ತಿಳಿದುಬಂದಿಲ್ಲ. ತಮ್ಮ ರಾಜೀನಾಮೆಯನ್ನು ತಕ್ಷಣ ಅಂಗೀಕಾರ ಮಾಡಬೇಕು ಎಂದು ಅವರು ಸಚಿವರಿಗೆ ಮನವಿ ಮಾಡಿದ್ದಾರೆ.

ತಮ್ಮ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವರಿಗೆ ಅಭಿನಂದನೆಯನ್ನು ನಾಣಯ್ಯ ಅವರು ಸಲ್ಲಿಸಿದ್ದಾರೆ. ಕೆಲವು ದಿನಗಳ ಹಿಂದೆ ಸಮಿತಿ ತನ್ನ ವರದಿಯನ್ನು ನೀಡಲು ಮೂರು ತಿಂಗಳ ಕಾಲವಕಾಶ ಬೇಕು ಎಂದು ಹೇಳಿದ್ದ ನಾಣಯ್ಯ ಅವರ ರಾಜೀನಾಮೆ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ. [ಸಮಿತಿಯ ಸದಸ್ಯರ ವಿವರ ಇಲ್ಲಿದೆ]
ಆಗಸ್ಟ್‌ನಲ್ಲಿ ಸಮತಿ ರಚನೆ : ಎಂ.ಸಿ.ನಾಣಯ್ಯ ನೇತೃತ್ವದಲ್ಲಿ ಈ ಸಮಿತಿಯನ್ನು ಆಗಸ್ಟ್‌ನಲ್ಲಿ ರಚನೆ ಮಾಡಲಾಗಿತ್ತು. ಸಮಿತಿ ಅಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿತ್ತು. ಸಮಿತಿಯಲ್ಲಿ ಕಾರ್ಯದರ್ಶಿ ಸೇರಿ ಒಟ್ಟು 25 ಮಂದಿ ಸದಸ್ಯರಿದ್ದರು. ಶಾಸಕರು, ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ನಾನಾ ಕ್ಷೇತ್ರದ ಗಣ್ಯರು ಸಮಿತಿಯ ಸದಸ್ಯರಾಗಿದ್ದರು. [ಅ- ಅತ್ಯಾಚಾರ, ಆ-ಆತ್ಮರಕ್ಷಣೆ, ಇ-ಇರಿದುಬಿಡು]
ಬೆಂಗಳೂರು ಮತ್ತು ರಾಜ್ಯದಲ್ಲಿ ನಡೆದ ಸರಣಿ ಅತ್ಯಾಚಾರ ಪ್ರಕರಣಗಳು ನಡೆದ ನಂತರ ಸರ್ಕಾರ ಕಾನೂನು ತಿದ್ದುಪಡಿ ಮಾಡಲು ತಜ್ಞರ ಸಮಿತಿ ರಚನೆ ಮಾಡುವುದಾಗಿ ಭರವಸೆ ನೀಡಿತ್ತು. ಅದರ ಅನ್ವಯ ಸಮಿತಿ ರಚನೆ ಮಾಡಲಾಗಿತ್ತು.
ಸಮಿತಿಯ ಸದಸ್ಯರು : ಎಂ.ಸಿ.ನಾಣಯ್ಯ ನೇತೃತ್ವದ ಸಮಿತಿಯಲ್ಲಿ ಗೋವಿಂದ ಕಾರಜೋಳ, ತನ್ವೀರ್ ಸೇಠ್, ಶಕುಂತಲಾ ಶೆಟ್ಟಿ , ವೈ.ಎಸ್.ವಿ.ದತ್ತ, ವಿನೀಶ ನಿರೋ, ಮೇಲ್ಮನೆ ಸದಸ್ಯರಾದ ಮೋಟಮ್ಮ, ಜಯಮಾಲ, ತಾರಾ ಅನುರಾಧ, ವಿ.ಎಸ್.ಉಗ್ರಪ್ಪ , ಬಸವರಾಜ್ ಹೊರಟ್ಟಿ , ಕೆ.ಬಿ.ಶಾಣಪ್ಪ ಮುಂತಾದವರು ಸದಸ್ಯರಾಗಿದ್ದರು.












Click it and Unblock the Notifications