ಮಾಜಿ ಸಚಿವ ಸಿ.ಗುರುನಾಥ್ ಆತ್ಮಹತ್ಯೆ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 22 : ಮಾಜಿ ಕಾರ್ಮಿಕ ಸಚಿವ ಸಿ.ಗುರುನಾಥ್ ಅವರು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 'ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಅಲ್ಲದೆ, ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ' ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕುಮಾರ್ ಹೇಳಿದ್ದಾರೆ.

ಮಧುಮೇಹದಿಂದ ಬಳಲುತ್ತಿದ್ದ ಸಿ.ಗುರುನಾಥ್ (70) ಅವರು ಬೆಂಗಳೂರಿನ ತಿಲಕ್ ನಗರದ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯ 2ನೇ ಮಹಡಿಯ 214ನೇ ಕೊಠಡಿಯಿಂದ ಹಾರಿ ಅವರು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

gurunath

ಕಲಬುರಗಿಯಿಂದ ಏಪ್ರಿಲ್ 17ರಂದು ಬೆಂಗಳೂರಿಗೆ ಆಗಮಿಸಿದ್ದ ಗುರುನಾಥ್ ಅವರು, ಏಪ್ರಿಲ್ 20ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕ್ಕ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರು ಒಂದು ದಿನ ಸುಧಾರಿಸಿಕೊಳ್ಳಿ, ಏಪ್ರಿಲ್ 21ರಂದು ಮನೆಗೆ ಕಳಿಸುತ್ತೇವೆ ಎಂದು ಹೇಳಿದ್ದರಂತೆ. ದಿಲೀಪ್ ಎಂಬುವವರು ಅವರ ಜೊತೆ ಆಸ್ಪತ್ರೆಯಲ್ಲಿದ್ದರು.

ಗುರುವಾರ ಮಧ್ಯಾಹ್ನ ವೈದ್ಯರನ್ನು ಕರೆದುಕೊಂಡು ಬರುವಂತೆ ದಿಲೀಪ್ ಅವರಿಗೆ ಗುರುನಾಥ್ ಸೂಚಿಸಿದ್ದರು. ದಿಲೀಪ್ ಕೊಠಡಿಯಿಂದ ಹೊರಹೋಗುತ್ತಿದ್ದಂತೆ ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 30 ಅಡಿ ಎತ್ತರದಿಂದ ಬಿದ್ದ ಕಾರಣ ಅವರ ತಲೆ ಮತ್ತು ಭುಜಕ್ಕೆ ಗಂಭೀರ ಗಾಯಗಳಾಗಿತ್ತು, ಸ್ಥಳದಲ್ಲಿಯೇ ಅವರು ಮೃತಪಟ್ಟರು ಎಂದು ವೈದ್ಯರು ಹೇಳಿದ್ದಾರೆ.

ಹುಟ್ಟೂರಿನಲ್ಲಿ ಇಂದು ಅಂತ್ಯಕ್ರಿಯೆ : ಕಲಬುರಗಿ ಜಿಲ್ಲೆಯ ಶಹಾಬಾದ್‌ನಲ್ಲಿ ಶುಕ್ರವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ಹೇಳಿದ್ದಾರೆ. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಹಬಾದ್ ಕ್ಷೇತ್ರದಿಂದ ಜನತಾದಳದ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಗುರುನಾಥ್ ಅವರು 1994 ರಿಂದ 96ರ ತನಕ ಎಚ್.ಡಿ.ದೇವೇಗೌಡ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. [2013ರ ಚುನಾವಣೆ : ಸೋತವರು, ಗೆದ್ದವರು]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former minister allegedly committed suicide by jumping from the second floor of a private hospital in the Bengaluru city on Thursday. C. Gurunath (70) who had represented Shahabad constituency (Kalaburagi district) and was a minister in the cabinet of H.D.Deve Gowda.
Please Wait while comments are loading...