ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಚುನಾವಣೆ:ಅದೇ ಸ್ಟೈಲ್, ಅದೇ 'ಖದರ್': ಸಿದ್ದರಾಮಯ್ಯ ಬ್ಯಾಕ್ ಟು ಫಾರ್ಮ್

|
Google Oneindia Kannada News

Recommended Video

ಸಿದ್ದರಾಮಯ್ಯ ಬ್ಯಾಕ್ ಟು ಫಾರಂ | ಶೋಭಾ, ಯಡಿಯೂರಪ್ಪ ಶ್ರೀರಾಮುಲು ವಿರುದ್ಧ ಟೀಕಾಪ್ರಹಾರ | Oneindia Kannada

ಕಳೆದ ವರ್ಷದ ದಸರಾ ಉದ್ಘಾಟನೆಯ ವೇಳೆ, ವೇದಿಕೆಯಲ್ಲಿ ಕೂತಿದ್ದ ಸಂಸದ ಪ್ರತಾಪ್ ಸಿಂಹ ಅವರನ್ನು ಉದ್ದೇಶಿಸುತ್ತಾ, ' ಸಿಎಂ ಆಗಿ ಐದು ವರ್ಷ ದಸರಾ ಮಾಡಿದ್ದೇನೆ, ಮುಂದಿನ ಐದು ವರ್ಷನೂ ಮಾಡುತ್ತೇನೆ.. ಏ.. ಪ್ರತಾಪ್ ಸಿಂಹಾ.. ಎಲ್ಲರೂ ವಿಶ್ ಮಾಡ್ತಾರೆ, ನೀನೂ ಮಾಡ್ಬಿಡು" ಎಂದು ಸಿದ್ದರಾಮಯ್ಯ ಗತ್ತಿನಲ್ಲಿ ಹೇಳಿದ್ದುಂಟು..

ಇದಾದ ನಂತರ, ಅಸೆಂಬ್ಲಿ ಚುನಾವಣೆಯ ಪ್ರಚಾರದ ವೇಳೆ, ಮತ್ತೆ ಅಧಿಕಾರಕ್ಕೆ ತಾವೇ ಬರುತ್ತೇವೆ ಎನ್ನುವ ಅದಮ್ಯ ವಿಶ್ವಾಸದಲ್ಲಿದ್ದ ಸಿದ್ದರಾಮಯ್ಯ, ' ಯಡಿಯೂರಪ್ಪ ಟುಸ್.. ಶೋಭಾ ಟುಸ್.. ರಾಮುಲು ಟುಸ್.." ಎಂದು ಗೇಲಿ ಮಾಡಿದ್ದರು. ಜೊತೆಗೆ, ಗೌಡ್ರ ಕುಟುಂಬದವರನ್ನೂ ಬಾಯಿ ತುಂಬಾ ಟೀಕಿಸಿದ್ದರು. ಆದರೆ, ಚುನಾವಣೆಯ ಫಲಿತಾಂಶ ಬಂದಿದ್ದೇ ಬೇರೆ..

ಯಡಿಯೂರಪ್ಪ ಕೇಸರಿ ನೆಲದಲ್ಲಿ ಸಿದ್ದರಾಮಯ್ಯ 'ಜಾತ್ಯತೀತ' ಸವಾರಿ ಯಡಿಯೂರಪ್ಪ ಕೇಸರಿ ನೆಲದಲ್ಲಿ ಸಿದ್ದರಾಮಯ್ಯ 'ಜಾತ್ಯತೀತ' ಸವಾರಿ

ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ, ಹಂಡ್ರೆಡ್ ಪರ್ಷೆಂಟ್ ಸಿದ್ದರಾಮಯ್ಯ ಬಯಸಿದ್ದು ಇದನ್ನಲ್ಲ. ಮೇಲಿನ ಸಿದ್ದರಾಮಯ್ಯನವರ ಹೇಳಿಕೆಯನ್ನು ಯಾಕೆ ಇಲ್ಲಿ ಮತ್ತೆ ಜ್ಞಾಪಿಸಲಾಗುತ್ತಿದೆ ಎಂದರೆ, ಕುಮಾರಣ್ಣನ ಸರಕಾರ ಅಧಿಕಾರಕ್ಕೆ ಬಂದ ನಂತರ, ರಾಜ್ಯ ರಾಜಕೀಯದ ಮುಖ್ಯವಾಹಿನಿಯಿಂದ ದೂರವಿದ್ದ ಸಿದ್ದರಾಮಯ್ಯ, ಉಪಚುನಾವಣೆಯ ವೇಳೆ ಮತ್ತೆ ತಮ್ಮ ಪಂಚೆಯನ್ನು ಮೇಲಕ್ಕೆ ಕಟ್ಟಿಕೊಂಡಿದ್ದಾರೆ.

ಕುಮಾರಸ್ವಾಮಿ ಸರಕಾರ ಅಧಿಕಾರಕ್ಕೆ ಬಂದ ನಂತರ, ಪ್ರಮುಖವಾಗಿ ಕಾಂಗ್ರೆಸ್ಸಿನ ಸಚಿವ ಸ್ಥಾನದ ಆಕಾಂಕ್ಷಿಗಳು ರಗಳೆ ಮಾಡಿದ್ದು ಒಂದಾ ಎರಡಾ.. ಯಾರ್ಯಾರು ಅಸಮಾಧಾನ ಹೊರಹಾಕುತ್ತಿದ್ದರೋ ಅವರೆಲ್ಲಾ ಸಿದ್ದರಾಮಯ್ಯನವರ ಬೆಂಬಲಿಗರು ಎನ್ನುವುದನ್ನು ಮತ್ತೆ ನೆನಪಿಸುವ ಅವಶ್ಯಕತೆ ಇಲ್ಲ. ಅದೂ, ಸಿದ್ದರಾಮಯ್ಯನವರು ಹತ್ತು ದಿನದ ವಿದೇಶ ಪ್ರವಾಸಕ್ಕೆ ಹೋಗಿದ್ದಾಗ, ರಾಜ್ಯ ರಾಜಕಾರಣ ಚಿತ್ರವಿಚಿತ್ರ ತಿರುವನ್ನು ಪಡೆದಿತ್ತು.

ಮಂಡ್ಯ ಉಪ ಚುನಾವಣೆ : ಸಿದ್ದರಾಮಯ್ಯ ಮುಂದೆ ಒಗ್ಗಟ್ಟಿನ ಮಂತ್ರ! ಮಂಡ್ಯ ಉಪ ಚುನಾವಣೆ : ಸಿದ್ದರಾಮಯ್ಯ ಮುಂದೆ ಒಗ್ಗಟ್ಟಿನ ಮಂತ್ರ!

ಎಲ್ಲಾ, ಸಿದ್ದರಾಮಯ್ಯನವರ ಅಣತಿಯಂತೆ ನಡೆಯುತ್ತಿದೆ ಎನ್ನುವ ಗುಮಾನಿಯನ್ನು ಸಮ್ಮಿಶ್ರ ಸರಕಾರದ ಪಾಲುದಾರ ಶಾಸಕರೇ ಹೊರಹಾಕಿದ್ದರು. ಸಮನ್ವಯ ಸಮಿತಿಯ ಮುಖ್ಯಸ್ಥರಾಗಿದ್ದ ಸಿದ್ದರಾಮಯ್ಯ, ಯಾವುದೇ ಆಸಕ್ತಿಯನ್ನು ತೋರುತ್ತಿಲ್ಲ ಎನ್ನುವ ಮಾತೂ ಚಾಲ್ತಿಯಲ್ಲಿತ್ತು. ಆದರೆ, ವಿದೇಶ ಪ್ರವಾಸದಿಂದ ಬಂದ ನಂತರ ಮತ್ತೆ ರಾಜಕಾರಣದಲ್ಲಿ ಭರ್ಜರಿಯಾಗಿ ಕೈಯಾಡಿಸುತ್ತಿರುವ ತನ್ನ ಹಳೇ ಖದರಿಗೆ ಮರಳಿದ್ದಾರೆ. ಸಿದ್ದರಾಮಯ್ಯನವರ ಭಾಷಣದ ಪ್ರಖರತೆಯ ಕೆಲವೊಂದು ಝಲಕ್, ಮುಂದೆ ಓದಿ

ಬಿಜೆಪಿ ವಿರುದ್ದ ಮತ್ತೆ ಭರ್ಜರಿ ಫಾರಂಗೆ ಮರುಳಿದ ಸಿದ್ದರಾಮಯ್ಯ

ಬಿಜೆಪಿ ವಿರುದ್ದ ಮತ್ತೆ ಭರ್ಜರಿ ಫಾರಂಗೆ ಮರುಳಿದ ಸಿದ್ದರಾಮಯ್ಯ

ಐದು ಕ್ಷೇತ್ರಗಳ ಉಪಚುನಾವಣೆಯ ಚುನಾವಣಾ ಪ್ರಚಾರದ ವೇಳೆ ಸಿದ್ದರಾಮಯ್ಯ ಮತ್ತೆ ತಮ್ಮ ಮಾತಿನ ಲಹರಿಯನ್ನು ಹೊರಗೆಡವುತ್ತಿದ್ದಾರೆ. ಇಂದಿನ ಮತ್ತು ಅವರ ಹಿಂದಿನ ಭಾಷಣದಲ್ಲಿನ ವ್ಯತ್ಯಾಸವೇನಂದರೆ, ಬಿಜೆಪಿ ಮತ್ತು ಜೆಡಿಎಸ್ ಅನ್ನು ಟೀಕಿಸುತ್ತಿದ್ದ ಸಿದ್ದರಾಮಯ್ಯ ಈಗ ಬಿಜೆಪಿಗೆ ಮಾತ್ರ ಸೀಮಿತವಾಗಿದ್ದಾರೆ. ಉಪಚುನಾವಣೆಯ ಪ್ರಚಾರದ ವೇಳೆ ಎಂದಿನಂತೆ ಯಡಿಯೂರಪ್ಪ, ಅಮಿತ್ ಶಾ, ಮೋದಿ, ರಾಮುಲು ವಿರುದ್ದ ವ್ಯಂಗ್ಯ ಮಿಶ್ರಿತ ಟೀಕಾ ಪ್ರಹಾರವನ್ನು ಸಿದ್ದು ಮುಂದುವರಿಸಿದ್ದಾರೆ. ಕೆಲವೊಂದು ಸ್ಯಾಂಪಲುಗಳು, ಮುಂದಿನ ಸ್ಲೈಡಿನಲ್ಲಿದೆ..

ಬರೀ ಹಿಂದುತ್ವ ಹೊಟ್ಟೆ ತುಂಬಿಸುತ್ತೇನ್ರೀ.. ಕಮಾನ್ ಟೆಲ್ ಮಿ.

ಬರೀ ಹಿಂದುತ್ವ ಹೊಟ್ಟೆ ತುಂಬಿಸುತ್ತೇನ್ರೀ.. ಕಮಾನ್ ಟೆಲ್ ಮಿ.

ಬರೀ ಹಿಂದುತ್ವ ಹೊಟ್ಟೆ ತುಂಬಿಸುತ್ತೇನ್ರೀ.. ಕಮಾನ್ ಟೆಲ್ ಮಿ.. ಬಿಜೆಪಿಯವರದ್ದು ಕೆಲಸ ಒಂದೋ ಜನರನ್ನು ಪ್ರಚೋದಿಸುವುದು, ಇಲ್ಲವೇ ದಾರಿ ತಪ್ಪಿಸುವುದು.. ತನ್ನ ಮಗಿನಿಗಾಗಿ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಹಸಿರು ಶಾಲು ಹಾಕಿಕೊಂಡರೆ ಎಲ್ಲರೂ ರೈತರ ಮುಖಂಡರಾಗುತ್ತಾರಾ? ಬರೀ ಡೋಂಗಿತನ ತುಂಬಿಕೊಂಡಿರುವ ಯಡಿಯೂರಪ್ಪ, ಸಿಎ ಕುರ್ಚಿಗಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಎರಡೂವರೆ ದಿನ ಸಿಎಂ ಆದರು, ಇಂತವರ ಮಗನಿಗೆ ವೋಟ್ ಹಾಕ್ತೀರಾ?

ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೈತ್ರಿ: ಸಿದ್ದರಾಮಯ್ಯ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೈತ್ರಿ: ಸಿದ್ದರಾಮಯ್ಯ

ಹಾಲಾಡಿ ಅವರನ್ನು ಏಕವಚನದಲ್ಲಿ ಟೀಕಿಸಿದ ಸಿದ್ದರಾಮಯ್ಯ

ಹಾಲಾಡಿ ಅವರನ್ನು ಏಕವಚನದಲ್ಲಿ ಟೀಕಿಸಿದ ಸಿದ್ದರಾಮಯ್ಯ

ಪ್ರಧಾನಿ ಮುಂದೆ ನಮ್ಮ ಬಿಜೆಪಿ ನಾಯಕರು ಬಾಯಿಯನ್ನೇ ಬಿಡಲ್ಲ. ನಾನೂ ಸಾಲಮನ್ನಾ ಮಾಡಿದ್ದೆ, ಸಮ್ಮಿಶ್ರ ಸರಕಾರವೂ ಮಾಡಿದೆ.. ಹೀಗಿರುವಾಗ.. ಸಾಲಮನ್ನಾ ಮಾಡೋದಕ್ಕೆ ಮೋದಿ ಅವರಿಗೆ ಅದೇನು ದಾಡಿ? ಯಾವನ್ರೀ ಅವನು ಶ್ರೀನಿವಾಸ.. ಅವನ ಮುಖಾನೇ ನಾನು ನೋಡಿಲ್ಲ ಎಂದು ಕುಂದಾಪುರದ ವಾಜಪೇಯಿ ಎಂದೇ ಖ್ಯಾತಿ ಪಡೆದಿರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಸಿದ್ದರಾಮಯ್ಯ ಏಕವಚನದಲ್ಲಿ ಹರಿಹಾಯ್ದಿದ್ದಾರೆ.

ಮಿಸ್ಟರ್ ಮೋದಿ. ಇಲ್ಲಿ ಕೇಳಪ್ಪಾ ನೀನು ಮೊದಲು..

ಮಿಸ್ಟರ್ ಮೋದಿ. ಇಲ್ಲಿ ಕೇಳಪ್ಪಾ ನೀನು ಮೊದಲು..

ಅಚ್ಚೇದಿನ್ ಕಬೀ ನಹೀ ಆಯೇಗಾ. ಮಿಸ್ಟರ್ ಮೋದಿ. ಇಲ್ಲಿ ಕೇಳಪ್ಪಾ ನೀನು. ನಾನು ನಿಮ್ಮ ಚೌಕಿದಾರ ಅಂತ ಭಾಷಣ ಮಾಡಿದ್ದೇ ಮಾಡಿದ್ದು. ನಾನೂ ತಿನ್ನಲ್ಲ ಇನ್ನೊಬ್ಬರಿಗೆ ತಿನ್ನಕ್ಕೂ ಬಿಡಲ್ಲ ಅಂದಿದ್ಯಲ್ಲಪ್ಪಾ.. ಮಿಸ್ಟರ್ ಚೌಕಿದಾರ್ ರಫೇಲ್ ಹಗರಣದ ಬಗ್ಗೆ ಮಾತಾಡಪ್ಪಾ.. ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ನಾನು ಇದುವರೆಗೆ ನೋಡಿಲ್ಲಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಮೋದಿ ವಿರುದ್ದ ಕಿಡಿಕಾರಿದ್ದಾರೆ.

ವಾಲ್ಮೀಕಿ ಜನಾಂಗಕ್ಕೆ ನಿಮ್ಮ ಕೊಡುಗೆ ಏನು ಮಿಸ್ಟರ್ ರಾಮುಲು

ವಾಲ್ಮೀಕಿ ಜನಾಂಗಕ್ಕೆ ನಿಮ್ಮ ಕೊಡುಗೆ ಏನು ಮಿಸ್ಟರ್ ರಾಮುಲು

ಶ್ರೀರಾಮುಲು ಅವರು ಲೋಕಾಸಭೆಯಲ್ಲಿ ಮಾತನಾಡಿಲ್ಲ.. ಅದಕ್ಕೆ ರಾಮುಲು ಸಾಹೇಬ್ರು ಪ್ರತಿಕ್ರಿಯೆ ನೀಡಿದ್ದಾರೆ, ಆದರೂ, ಈಗಲೂ ಹೇಳುತ್ತೇನೆ, ರಾಮುಲು ಅವರಿಗೆ 371ಜೆ ಅಂದರೆ ಗೊತ್ತಿಲ್ಲ. ಅವರಿಗೆ ಮತ್ತು ಜನಾರ್ದನ ರೆಡ್ಡಿಗೆ ಗೊತ್ತಿರುವುದು ಐಪಿಸಿ ಸೆಕ್ಷನ್ ಮಾತ್ರ, ವಾಲ್ಮೀಕಿ ಬಗ್ಗೆ ಗೌರವ ಇಟ್ಟಕೊಂಡಿದ್ದಕ್ಕೆ ವಾಲ್ಮೀಕಿಯವರ ಪ್ರತಿಮೆಯನ್ನು ವಿಧಾನಸೌಧದ ಬಳಿ ಸ್ಥಾಪಿಸಿದ್ದು. ಅದಿರಲಿ, ಆ ಜನಾಂಗಕ್ಕೆ ನಿಮ್ಮ ಕೊಡುಗೆ ಏನು ಮಿಸ್ಟರ್ ರಾಮುಲು ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಉಪ ಚುನಾವಣೆ : ಸಿದ್ದರಾಮಯ್ಯ, ಶ್ರೀರಾಮುಲು ನಡುವೆ ಟ್ವಿಟರ್‌ ವಾರ್!ಉಪ ಚುನಾವಣೆ : ಸಿದ್ದರಾಮಯ್ಯ, ಶ್ರೀರಾಮುಲು ನಡುವೆ ಟ್ವಿಟರ್‌ ವಾರ್!

ನನ್ನ ಬಗ್ಗೆ ಮಾತನಾಡುವ ನೈತಿಕತೆ / ಯೋಗ್ಯತೆ ಅವಳಿಗೆ ಇದೆಯಾ?

ನನ್ನ ಬಗ್ಗೆ ಮಾತನಾಡುವ ನೈತಿಕತೆ / ಯೋಗ್ಯತೆ ಅವಳಿಗೆ ಇದೆಯಾ?

ನನ್ನ ಬಗ್ಗೆ ಮಾತನಾಡುವ ನೈತಿಕತೆ / ಯೋಗ್ಯತೆ ಅವಳಿಗೆ ಇದೆಯಾ? ಅವಳ ಹಲ್ಲು ಏನು ಬಿಗಿಯಾಗಿದೆಯಾ? ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿ ಆಕೆ ಸೋತಿಲ್ಲವೇ? ಹೀಗಿರುವಾಗ ನನ್ನ ಕುರಿತಾಗಿ ಮಾತನಾಡುವ ನೈತಿಕತೆ ಅವಳಿಗಿಲ್ಲ ಎಂದು ಸಿದ್ದರಾಮಯ್ಯ ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ಹರಿಹಾಯ್ದಿದ್ದಾರೆ. ಬಿಜೆಪಿಯವರು ಮೊದಲು ಒಣ ಜಂಭ ಬಿಡಬೇಕು. ನಮ್ಮ ಸರ್ಕಾರ ಸುಭದ್ರ, ಯಾವುದೇ ಕಾರಣಕ್ಕೂ ಪತನವಾಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

English summary
Former Chief Minister Siddaramaiah back on track, lambasting BJP during five constituency by election. Siddaramaiah is in the same tone, when he was CM of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X