HD kumaraswamy: ರಮೇಶ್ ಜಾರಕಿಹೊಳಿ ಅಂಡ್ ಟೀಮ್ ಗೆ ಸಪೋರ್ಟ್ ಮಾಡಿದವರು ಯಾರು? ಎಂಬ ಸತ್ಯ ಬಿಚ್ಚಿಟ್ಟ ಎಚ್‌ ಡಿ ಕುಮಾರಸ್ವಾಮಿ

ಬೆಂಗಳೂರು, ಅಕ್ಟೋಬರ್‌ 26: ಸಮ್ಮಿಶ್ರ ಸರ್ಕಾರ ಬೀಳಿಸಲು ಕಾರಣ ಯಾರು? ಬಿಜೆಪಿ ಕೆಲಸ ಸುಲಭ ಮಾಡಿದ್ದು ನೀವು ಅಲ್ಲವೇ? ರಮೇಶ್ ಜಾರಕಿಹೊಳಿ ಅಂಡ್ ಟೀಮ್ ಗೆ ಸಪೋರ್ಟ್ ಮಾಡಿದವರು ಯಾರು? ಇದೇ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ ಎಂದು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹೇಳಿದರು.

ಈ ಕುರಿತು ಗುರುವಾರ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅಮೇರಿಕಾಕ್ಕೆ ಹೋದ ತಕ್ಷಣ ಮೊದಲ ವಿಕೆಟ್ ಪತನ ಮಾಡಿದರು. ಐಎಂಎ ಆರೋಪಿ ರಕ್ಷಣೆಗೆ ಮುಂದಾಗಿದ್ದು ಯಾರು? ರಾಮಲಿಂಗರೆಡ್ಡಿ, ಬಿಸಿ ಪಾಟೀಲ್ ಮಂತ್ರಿ ಮಾಡೋಣ ಅಂದೆ. ಪಕ್ಷೇತರ ಶಾಸಕರನ್ನ ಸಚಿವ ಸ್ಥಾನದಿಂದ ಇಳಿಸಿ, ಅವರಿಗೆ ಕೋಡೋಣ ಎಂದೆ.Nothing change ಎಂದು ಹೇಳಿದವರು ಯಾರು?ಟವಲ್ ಕೊಡವಿಕೊಂಡು ಎದ್ದಿದ್ದು ಯಾರು? ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

former-chief-minister-hd-kumaraswamy

ನಾವು ನಿಮ್ಮ ಹೈಕಮಾಂಡ್ ಮುಂದೆ ಬಂದಿರಲಿಲ್ಲ. ನೀವೇ ನಮ್ಮ ಮನೆಬಾಗಿಲಿಗೆ ಬಂದಿದ್ರಿ, ಇಲಾಖೆ ಹಂಚಿಕೆಯಲ್ಲಿ ಉತ್ತಮ ವಾದ ಇಲಾಖೆ ಬೇಕು ಅಂದ್ರಿ, ಕಂಡಿಷನ್ ಹಾಕಿದ್ರಿ.ಬಿಜೆಪಿ ಆಡಳಿತದಿಂದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ಇದ್ದಾಗ 15 ಲಕ್ಷ ಮನೆ ನೀಡಿದ್ದೆ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಚುನಾವಣಾ ಬಜೆಟ್ ಮಂಡಿಸಿದಾಗ (2018) 2000 ಕೋಟಿ ಮೀಸಲು ಇಟ್ಟಿದ್ರು, ನಾನು ಅಧಿಕಾರ ಸ್ವೀಕಾರ ಮಾಡಿದಾಗ 29 ಕೋಟಿ ಮೀಸಲು ಇಡಬೇಕಾಯಿತು. ನೀರಾವರಿ ಗೆ 1.3 ಲಕ್ಷ ಕೋಟಿ ಹೇಳಿಕೊಂಡು ಬಂದ್ರು, ಫೈನನ್ಸ್ ಅಪ್ರೋವಲ್ ಇಲ್ಲ. ಗುತ್ತಿಗೆದಾರರ ಮೇಲೆ ವಸೂಲಿ ಮಾಡಲು ಹೋದ್ರು, ನಾನು ಸಿಎಂ ಆಗದಿದ್ರೆ ಯಾರು ದುಡ್ಡು ಕೊಡ್ತಿದ್ರು. ನಿಮಗೆ ಮಾತನಾಡಕ್ಕೆ ಯಾವ ನೈತಿಕತೆ ಇದೆ. ಮುಂದಿನ ವಿಧಾನ ಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

ರಾಜಕೀಯ ವಿಲನ್ ನಾನು. ಸಿದ್ದರಾಮಯ್ಯಗೆ ನಾನು ವಿಲನ್, ಯಾಕೆಂದರೆ ನಾನು ಯಾವ ಒತ್ತಡಕ್ಕೂ ಮಣಿದಿಲ್ಲ. ವೆಸ್ಟೆಂಡ್ ಹೋಟೆಲ್ ನಲ್ಲಿ ದಿನ ಬೆಳಿಗ್ಗೆ ಎದ್ರೆ ಏನು ಮಾಡಿದ್ದೀನಿ ಅನ್ನೋ ದಾಖಲೆ ಬಗ್ಗೆ ವಿಧಾನ ಸಭೆಯಲ್ಲಿ ಮಾತನಾಡುತ್ತೇನೆ. ಇಂಡಿ ಶಾಸಕರು ಸಮಸ್ಯೆ ಹೇಳಿಕೊಳ್ಳಲು ಬಂದಾಗ ಎಷ್ಟು ಸಮಯ ಕಾಯ ಮಾಡಬೇಕು ಎಂದು ಕೇಳಿದ್ರಿ, ಇವರು ಎಡಗೈ ಯಲ್ಲಿ ಎಸೆಯುತ್ತಿದ್ದಾರೆ ನಾನು ಬಲಗೈಯಲ್ಲಿ ಹಾಯಿಕೊಂಡಿದ್ದೇನೆ. ಎಲ್ಲವನ್ನೂ ತಡೆದುಕೊಂಡು ಕೆಲಸ ಮಾಡಿದ್ದೇನೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ದ ಕಿಡಿಕಾರಿದರು.

former-chief-minister-hd-kumaraswamy

ನಮ್ಮ ಪಕ್ಷದ ಕಾರ್ಯಕರ್ತರನ್ನ ಸೆಳೆಯುತ್ತಿದ್ದೀರಿ. ತುಮಕೂರು, ಶಿವಮೊಗ್ಗ ಜಿಲ್ಲೆಯ ನಾಯಕರನ್ನ ಘರ್ ವಾಪ್ಸಿ ಮಾಡಿಕೊಂಡಿದ್ದಾರೆ, ಒಳ್ಳೆಯದಾಗಲಿ. ಬಿಜೆಪಿ ಜತೆ ಮೈತ್ರಿಗೆ ನಿಮ್ಮ ವಿರೋಧ ಇದೆ
ಆದರೆ, ನೀವು ಯಾರ ಯಾರ ಜತೆ ಹೊಂದಾಣಿಕೆ ಮಾಡಿದ್ದೀರಿ. ನೀವು ನಮ್ಮ ಮೈತ್ರಿ ಬಗ್ಗೆ ಮಾತನಾಡುವುದ, ನಿಮ್ಮಿಂದ ನಾನು ಕಲಿಬೇಕಾ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಮನಗರ ಜಿಲ್ಲೆಗೆ ಬ್ರಾಂಡ್ ಬೆಂಗಳೂರು ಬರಲು ಜಿಲ್ಲೆಯ ಬದಲಾವಣೆ ಗೆ ಮುಂದಾಗಿದ್ದಾರೆ. ರಾಮನಗರ ಜಿಲ್ಲೆಗೆ ನನ್ನ ಕೊಡುಗೆ ಏನು? ನಿಮ್ಮ ಕೊಡುಗೆ ಏನು? ದೇವಸ್ಥಾನದ ಸನ್ನಿಧಿಯಲ್ಲಿ ಹೇಳ್ತೀನಿ ಅಂದ್ರಿ, ಹಾಲಿನ ಪೌಡರ್ ಕಾರ್ಖಾನೆ ಗೆ ( ಡೈರಿಗೆ) ಜಮೀನು ಸ್ವಾಧೀನ ಪಡಿಸಿಕೊಂಡು, ರೈತರಿಗೆ ಎಷ್ಟು ಪರಿಹಾರ ಕೊಟ್ರಿ ಎಂದು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+