ನಮ್ಮದೇ ಒರಿಜಿನಲ್ ಜನತಾ ದಳ, ನಾನೇ ಅದರ ಅಧ್ಯಕ್ಷ ಎಂದ ಸಿಎಂ ಇಬ್ರಾಹಿಂಗೆ ಟಾಂಗ್‌ ಕೊಟ್ಟ ಎಚ್‌ ಡಿ ಕುಮಾರಸ್ವಾಮಿ

ಬೆಂಗಳೂರು, ಅಕ್ಟೋಬರ್‌ 17: ಲೋಕಸಭಾ ಚುನಾವಣೆ ಹಿನ್ನಲೆ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿದ್ದು, ಜೆಡಿಎಸ್‌ ನಲ್ಲಿ ಅಸಮಾಧಾನದ ಪಕಿಚ್ಚು ಹೆಚ್ಚಾಗಿದೆ. ನಮ್ಮದೇ ಒರಿಜಿನಲ್ ಜೆಡಿಎಸ್. ನಾನೇ ಅದರ ಅಧ್ಯಕ್ಷನಾಗಿದ್ದೇನೆ. ಇದು ನನ್ನ ಮನೆ. ಮುಂದೇನಾಗುತ್ತದೆ ಅದನ್ನು ಪರದೆಯಲ್ಲಿ ನೋಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಬಹಿರಂಗವಾಗಿ ದಳಪತಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೌದು, ಸಿಎಂ ಇಬ್ರಾಹಿಂ ಬಹಿರಂಗವಾಗಿ ಜೆಡಿಎಸ್‌ ವಿರುದ್ದ ಅಸಮಾಧಾನಗೊಂಡು ಒರಿಜಿನಲ್ ಜೆಡಿಎಸ್‌ ನಮ್ಮದೇ ಎಂಬ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನಾಯಕ ಎಚ್‌ ಡಿ ಕುಮಾರಸ್ವಾಮಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

former-chief-minister-hd-kumaraswamy

ಈ ಕುರಿತು ಮಂಗಳವಾರ ಮಾಧ್ಯಮಗಳ ಜೊತೆಗೆ ಎಚ್‌ ಡಿ ಕುಮಾರಸ್ವಾಮಿ ಮಾತನಾಡಿ, ಅವರೇ ಒರಿಜಿನಲ್ ಅಂತಾ ಬೋರ್ಡ್ ಹಾಕಿಕೊಳ್ಳಲಿ. ಅವರೇ ಒರಿಜಿನಲ್ ಅಂತಾ ಬರೆದುಕೊಳ್ಳಲಿ, ಅವರು ಏನು ಬೇಕಾದ್ರು ಮಾಡ್ಕೊಳ್ಳಿ, ಅವರಿಗೆ ಬಿಟ್ಟಿದ್ದು. ದಯವಿಟ್ಟು ಇಂತಾ ಸಿಲ್ಲಿ ವಿಚಾರಕ್ಕೆ ಬರಬೇಡಿ. ನಮಗೆ ಏನು ಮಾಡಬೇಕೋ, ಸರಿ ಮಾಡ್ತೀವಿ, ನೀವು ತಲೆಕೆಡಿಸಿಕೊಂಡು ಬಂದಿದ್ದೀರಾ. ಅವರು ಫ್ರೀ ಇದ್ದಾರೆ ಮಾತಾಡ್ಕೊಳ್ಳಿ. ನಮ್ಮ ಪಕ್ಷದಲ್ಲಿ ಇರುವ ಹಿರಿಯರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದೇನು?

ನಮ್ಮದೇ ಒರಿಜಿನಲ್ ಜೆಡಿಎಸ್. ನಾನೇ ಅದರ ಅಧ್ಯಕ್ಷನಾಗಿದ್ದೇನೆ. ಇದು ನನ್ನ ಮನೆ. ಮುಂದೇನಾಗುತ್ತದೆ ಅದನ್ನು ಪರದೆಯಲ್ಲಿ ನೋಡಿ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ನನ್ನನ್ನು ಯಾರಿಂದಲೂ‌ ತೆಗೆಯಲು ಸಾಧ್ಯವಿಲ್ಲ. ನಿತೀಶ್ ಕುಮಾರ್, ಶರದ್ ಪವಾರ್ ಸೇರಿದಂತೆ ಕಾಂಗ್ರೆಸ್ ನವರೂ ಮಾತನಾಡಿದ್ದಾರೆ. ಸಭೆಯ‌ ಚರ್ಚೆಯನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ತಿಳಿಸುತ್ತೇನೆ. ಹೊಸ ಕೋರ್ ಕಮಿಟಿ ರಚನೆ ಮಾಡುತ್ತೇನೆ. ಅದರ ಸಭೆಯನ್ನು ಕರೆಯುತ್ತೇನೆ. ನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.

former-chief-minister-hd-kumaraswamy

ಇನ್ನೂ ಮೈತ್ರಿ ವಿಚಾರವಾಗಿ ಎಚ್ ಡಿ ಕುಮಾರಸ್ವಾಮಿ ಅವರು ಯಾರ ಅಭಿಪ್ರಾಯ ಕೇಳದೆ ಏಕಾಏಕಿ ದೆಹಲಿಗೆ ಹೋಗಿ ಅಮಿತ್ ಶಾ ಜೊತೆಗೆ ಫೋಟೋ ತೆಗೆಸಿ ಮೈತ್ರಿ ಘೋಷಣೆ ಮಾಡಿದ್ದಾರೆ.‌ಎರಡು ದಿನ ಮೊದಲು ಹೇಳಿದ್ದೆ‌ ಜೆಡಿಎಸ್ ಪ್ರಜಾಪ್ರಭುತ್ವ ‌ಹಾಗೂ‌ ಜಾತ್ಯಾತೀತ ದಲ್ಲಿ ನಂಬಿಕೆ ಇಟ್ಟ ಪಕ್ಷ.‌ ನಾವು ಅಲ್ಲಿ‌ ಹೋಗೋದು‌ ಅಲ್ಲ‌ ಅವರು ಇಲ್ಲಿ ಬರಲಿ‌ ಎಂದಿದ್ದೆ ಎಂದು ಹೇಳಿದರು.

ಲೋಕಸಭಾ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿದ್ದಾರೆ. ನಾನು ಮೈತ್ರಿ ಒಪ್ಪಲ್ಲ, ಮೈತ್ರಿಯ ಬಗ್ಗೆ ಪಕ್ಷದಲ್ಲಿ‌ ಸಭೆ ಆಗಿದ್ಯಾ? ನಿರ್ಣಯ‌ ಆಗಿದ್ಯಾ? ಶಾಸಕರು ಸಂಪರ್ಕದಲ್ಲಿ ಇದ್ದಾರೆ. ದೇವೇಗೌಡರ ಜೊತೆಗೆ ಮಾತನಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. 92 ವಯಸ್ಸಾಗಿದೆ ದೇವೇಗೌಡರೇ ತಪ್ಪು ಹೆಜ್ಜೆ ಇಡಬೇಡಿ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+