ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇತ್ತ ಎಚ್ಡಿಕೆ ಸರಕಾರ ಪತನ, ಅತ್ತ ದೇವೇಗೌಡ್ರ ಕನಸೂ ನುಚ್ಚುನೂರು

|
Google Oneindia Kannada News

Recommended Video

ಇತ್ತ ಎಚ್ ಡಿ ಕುಮಾರಸ್ವಾಮಿ ಸರ್ಕಾರ ಪತನವಾಯ್ತು | ಅತ್ತ ಎಚ್ ಡಿ ದೇವೇಗೌಡ ಕನಸು ನುಚ್ಚುನೂರಾಯ್ತು|Oneindia Kannada

ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರ ಹದಿನಾಲ್ಕು ತಿಂಗಳ ಕೆಳಗೆ ಅಧಿಕಾರಕ್ಕೆ ಬಂದಾಗ, ಪದಗ್ರಹಣದ ಸಮಾರಂಭ ದೇಶದ ವಿರೋಧ ಪಕ್ಷಗಳ ಮಹಾಸಮ್ಮಿಲನದಂತಿತ್ತು. ಬೆಂಗಳೂರಿನ ಈ ವೇದಿಕೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಸ್ಪರ್ಧೆ ನೀಡಲು ದೇವೇಗೌಡರು ಭರ್ಜರಿಯಾಗಿಯೇ ಈ ಸಮಾರಂಭವನ್ನು ಬಳಸಿಕೊಂಡಿದ್ದರು.

ಒಂದು ರೀತಿಯಲ್ಲಿ ಲೋಕಸಭಾ ಚುನಾವಣೆಗೆ ಪೂರ್ವ ತಯಾರಿ ನಡೆಸಲು ಈ ಸಮಾರಂಭ ಎಲ್ಲಾ ಪಕ್ಷಗಳಿಗೂ ಸಹಾಯವಾಗಿತ್ತು. ಸೋನಿಯಾ, ಮಾಯಾವತಿ, ಮಮತಾ, ಚಂದ್ರಬಾಬು, ರಾಹುಲ್ ಗಾಂಧಿಯಾಗಿ ಬಹುತೇಕ ದೇಶದ ಎಲ್ಲಾ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದೇವೇಗೌಡರು ಈ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಿದ್ದಕ್ಕೆ ಇವರೆಲ್ಲಾ ಬಂದಿದ್ದರು ಎನ್ನುವುದಕ್ಕಿಂತ, ಬಿಜೆಪಿ ವಿರುದ್ದ ಶಕ್ತಿಪ್ರದರ್ಶನವೇ ಇದರ ಹಿಂದಿನ ಉದ್ದೇಶವಾಗಿತ್ತು. ಮಹಾಘಟಬಂಧನ್ ಕಲ್ಪನೆ ಮೊಳಕೆ ಹೊಡಿದಿದ್ದೇ ಇಲ್ಲಿ.

ಯಡಿಯೂರಪ್ಪ ನೇತೃತ್ವದ ಮಂತ್ರಿಮಂಡಲ ರಚನೆ ರಹಸ್ಯ ಬಯಲು ಯಡಿಯೂರಪ್ಪ ನೇತೃತ್ವದ ಮಂತ್ರಿಮಂಡಲ ರಚನೆ ರಹಸ್ಯ ಬಯಲು

ಈ ಸಮಾರಂಭವನ್ನೇ ಬೇಸ್ ಆಗಿ ಇಟ್ಟುಕೊಂಡು ದೇವೇಗೌಡ್ರು, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿ, ಜಂಟಿಯಾಗಿ ಸ್ಪರ್ಧಿಸುವತ್ತ ರಾಹುಲ್ ಗಾಂಧಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ...

ಉತ್ತರಪ್ರದೇಶದಲ್ಲಿ ಬಿಎಸ್ಪಿ - ಎಸ್ಪಿ ಮೈತ್ರಿಕೂಟ

ಉತ್ತರಪ್ರದೇಶದಲ್ಲಿ ಬಿಎಸ್ಪಿ - ಎಸ್ಪಿ ಮೈತ್ರಿಕೂಟ

ಆದರೆ, ಪ್ರಮುಖವಾಗಿ ಉತ್ತರಪ್ರದೇಶದಲ್ಲಿ ಬಿಎಸ್ಪಿ - ಎಸ್ಪಿ ಮೈತ್ರಿಕೂಟ ಕಾಂಗ್ರೆಸ್ ಅನ್ನು ಹೊರಗಿಡುವ ಮೂಲಕ, ಮಹಾಘಟಬಂದನ್ ಕಲ್ಪನೆಗೆ ಬಿಸಿಮುಟ್ಟಿಸಿತು. ಇದಾದ ನಂತರ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೂ ಇದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಲು ಹೋಗದೇ, ಏಕಾಂಗಿಯಾಗಿಯೇ ಬಿಜೆಪಿಯನ್ನು ಎದುರಿಸುವ ನಿರ್ಧಾರಕ್ಕೆ ಬಂದರು.

ಒಲ್ಲದ ಮನಸ್ಸಿನಿಂದಲೇ ಕಾಂಗ್ರೆಸ್, ಜೆಡಿಎಸ್ ಜೊತೆ ಕೈಜೋಡಿಸಬೇಕಾಯಿತು

ಒಲ್ಲದ ಮನಸ್ಸಿನಿಂದಲೇ ಕಾಂಗ್ರೆಸ್, ಜೆಡಿಎಸ್ ಜೊತೆ ಕೈಜೋಡಿಸಬೇಕಾಯಿತು

ಇತ್ತ ಕರ್ನಾಟಕದಲ್ಲಿ ಒಲ್ಲದ ಮನಸ್ಸಿನಿಂದಲೇ ಕಾಂಗ್ರೆಸ್ಸಿಗರು ಜೆಡಿಎಸ್ ಜೊತೆ ಕೈಜೋಡಿಸಬೇಕಾಯಿತು. ಆದರೆ, ಮಹಾಘಟಬಂಧನ್ ಕಲ್ಪನೆಗೆ ಎಲ್ಲಿ ಪ್ರಮುಖವಾಗಿ ಗಮನಹರಿಸಬೇಕಾಗಿತ್ತೋ, ಆ ಕೆಲಸಕ್ಕೆ ಪ್ರಾದೇಶಿಕ ಪಕ್ಷಗಳು ತಲೆಕೆಡಿಸಿಕೊಳ್ಳಲಿಲ್ಲ. ಪರಿಣಾಮ, ಲೋಕಸಭಾ ಚುನಾವಣೆಯ ಫಲಿತಾಂಶ.

ನಿರ್ಗಮನಕ್ಕೂ ಮುನ್ನಾ ಬಡವರಿಗೆ ಭರ್ಜರಿ ಉಡುಗೊರೆ ನೀಡಿದ ಕುಮಾರಸ್ವಾಮಿ ನಿರ್ಗಮನಕ್ಕೂ ಮುನ್ನಾ ಬಡವರಿಗೆ ಭರ್ಜರಿ ಉಡುಗೊರೆ ನೀಡಿದ ಕುಮಾರಸ್ವಾಮಿ

ತಮಿಳುನಾಡಿನಲ್ಲಿ ಡಿಎಂಕೆ ಹೊರತು

ತಮಿಳುನಾಡಿನಲ್ಲಿ ಡಿಎಂಕೆ ಹೊರತು

ಪ್ರಾದೇಶಿಕ ಪಕ್ಷಗಳ ಪೈಕಿ ತಮಿಳುನಾಡಿನಲ್ಲಿ ಡಿಎಂಕೆ ಹೊರತು ಪಡಿಸಿ, ಮಿಕ್ಕೆಲ್ಲಾ ರಾಜ್ಯಗಳಲ್ಲಿ ಭಾರೀ ಮುಖಭಂಗ ಎದುರಿಸಬೇಕಾಯಿತು. ಮೋದಿ ಎನ್ನುವ ಬಂಡೆ ಕಲ್ಲಿಗೆ ಢಿಕ್ಕಿ ಹೊಡೆಯಲು ಹೋಗಿ ಎಲ್ಲರೂ ನುಜ್ಜುನೂರಾದರು. ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಮಮತಾ ಬ್ಯಾನರ್ಜಿಗೂ ಇದರ ಬಿಸಿಮುಟ್ಟಿತು. ಆಂಧ್ರದಲ್ಲಿ ಚಂದ್ರಬಾಬು ನಾಯ್ಡುಗೂ ಇದೇ ಪರಿಸ್ಥಿತಿ.

ಕಾಂಗ್ರೆಸ್ - ಜೆಡಿಎಸ್ ತೀವ್ರ ಮುಖಭಂಗ ಎದುರಿಸಬೇಕಾಯಿತು

ಕಾಂಗ್ರೆಸ್ - ಜೆಡಿಎಸ್ ತೀವ್ರ ಮುಖಭಂಗ ಎದುರಿಸಬೇಕಾಯಿತು

ಇನ್ನು ಕರ್ನಾಟಕದಲ್ಲಂತೂ ಕಾಂಗ್ರೆಸ್ - ಜೆಡಿಎಸ್ ತೀವ್ರ ಮುಖಭಂಗ ಎದುರಿಸಬೇಕಾಯಿತು. ಏಕಾಂಗಿಯಾಗಿಯೇ ಸ್ಪರ್ಧಿಸಿದ್ದರೆ ಇಷ್ಟು ಅವಮಾನ ಎದುರಿಸುವುದು ತಪ್ಪುತ್ತಿತ್ತು ಎಂದು ಕಾಂಗ್ರೆಸ್ ನಾಯಕರು ಕೈಕೈ ಹಿಸುಕಿಕೊಳ್ಳುವಂತಾಯಿತು. ದೇವೇಗೌಡ್ರೂ ಖುದ್ದು ಸೋತರು, ಕಾಂಗ್ರೆಸ್ಸಿನ ಮಲ್ಲಿಕಾರ್ಜುನ ಖರ್ಗೆ, ಮೊಯ್ಲಿ, ಮುನಿಯಪ್ಪಗೂ ಸೋಲಾಯಿತು.

ನಿರ್ಣಾಯಕ ವಿಶ್ವಾಸಮತದ ವೇಳೆ ಬಿಎಸ್ಪಿ ಶಾಸಕ ಗೈರು

ನಿರ್ಣಾಯಕ ವಿಶ್ವಾಸಮತದ ವೇಳೆ ಬಿಎಸ್ಪಿ ಶಾಸಕ ಗೈರು

ಮೊದಲು,ಮೈತ್ರಿ ಸರಕಾರದಲ್ಲಿ ಸಚಿವರಾಗಿದ್ದ ಬಿಎಸ್ಪಿಯ ಶಾಸಕ ಎನ್ ಮಹೇಶ್ ನಂತರ ಸಂಪುಟದಿಂದ ಹೊರನಡೆದು ಬಾಹ್ಯ ಬೆಂಬಲ ಎಂದರು. ಆದರೆ, ನಿರ್ಣಾಯಕ ವಿಶ್ವಾಸಮತದ ವೇಳೆ ಗೈರಾದರು. ಅಲ್ಲಿಗೆ, ದೇವೇಗೌಡರ ಮಹತ್ವಾಕಾಂಕ್ಷೆಯ ಮಹಾಘಟಬಂಧನ್ ಎಲ್ಲಿ ಹುಟ್ಟಿತೋ ಅಲ್ಲೇ ದುರಂತ ಅಂತ್ಯ ಕಂಡಿದೆ. ಇತ್ತ ಎಚ್ಡಿಕೆ ಸರಕಾರ ಪತನ, ಅತ್ತ ದೇವೇಗೌಡ್ರ ಕನಸೂ ನುಚ್ಚುನೂರು, as of now..

English summary
Dream formation of Maha Ghatbandhan of JDS Supremo Devegowda collapsed after coalition government falls in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X