ಮಂಡ್ಯದಲ್ಲಿ 3500 ಚೀಲ ರಾಗಿ ವಶ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ, ಜನವರಿ.05: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರಾಗಿ ದಾಸ್ತಾನಿನ ಮೇಲೆ ದಾಳಿ ಮಾಡಿದ ಆಹಾರ ನಾಗರಿಕ ಮತ್ತು ಸರಬರಾಜು ಇಲಾಖೆ ಅಧಿಕಾರಿಗಳು 50 ಕೆ.ಜಿ. ತೂಕದ 3500 ಚೀಲ (1750 ಕ್ವಿಂಟಾಲ್) ರಾಗಿಯನ್ನು ವಶಪಡಿಸಿಕೊಂಡಿದ್ದಾರೆ.

ಆಹಾರ ನಾಗರಿಕ ಮತ್ತು ಸರಬರಾಜು ಇಲಾಖೆ ಅಧಿಕಾರಿಗಳು ನಗರದ ಶಂಕರಪುರದ ಬಸವೇಶ್ವರ ಆಗ್ರೋ ರೈಸ್ ಇಂಡಸ್ಟೀಸ್ ಮೇಲೆ ದಾಳಿ ನಡೆಸಿ 50ಕೆ.ಜಿ. ತೂಕದ 500 ಚೀಲಗಳನ್ನು, ಮತ್ತೊಂದೆಡೆ ತಾಲೂಕಿನ ಗೊರವಾಲೆ ಗ್ರಾಮದ ಸಿದ್ದೇಶ್ವರ ರೈಸ್ ಮಿಲ್ ಮೇಲೆ ದಾಳಿ ನಡೆಸಿ 50 ಕೆ.ಜಿ. ತೂಕದ 3 ಸಾವಿರ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.[ಮದುವೆಗೆ ಬಂದವನು ಮುದ್ದೆ ತಿಂದು ಬಹುಮಾನ ಗೆದ್ದ]

Mandya

ಸರ್ಕಾರ ರೈತರಿಂದ ಕನಿಷ್ಠ ಬೆಂಬಲ ಯೋಜನೆಯಡಿ ಕ್ವಿಂಟಾಲ್ ಗೆ 2100 ರೂ. ದರದಲ್ಲ್ಲಿ ಖರೀದಿಸಲು ಮುಂದಾಗಿದ್ದಾರೆ. ಬಳಿಕ ಇದನ್ನು ದುರುಪಯೋಗಪಡಿಸಿಕೊಳ್ಳಲು ಮುಂದಾಗಿರುವ ಕೆಲವರು ರೈತರಿಂದ ಕಡಿಮೆ ಬೆಲೆಗೆ ರಾಗಿಯನ್ನು ಖರೀದಿಸಿ ದಾಸ್ತಾನು ಇರಿಸಿಕೊಂಡು ಬಳಿಕ ಅದನ್ನು ಸರ್ಕಾರ ಖರೀದಿಸುವ ಕನಿಷ್ಠ ಬೆಂಬಲ ಬೆಲೆಗೆ ಮಾರಲು ಮುಂದಾಗಿದ್ದಾರೆ.[ಜನ್ ಆಹಾರ ಕೆಫೆ: ರೈಲು ನಿಲ್ದಾಣಗಳಲ್ಲಿ 20ರುಗೆ ಊಟ]

ಆಹಾರ ನಾಗರಿಕ ಮತ್ತು ಸರಬರಾಜು ಇಲಾಖೆಯ ಉಪನಿರ್ದೇಶಕಿ ಕುಮುದಾ ಅವರು, 'ನಿಯಮದಂತೆ ಅಕ್ಕಿ ಗಿರಣಿಗಳಲ್ಲಿ ರಾಗಿ ದಾಸ್ತಾನು ಮಾಡುವಂತಿಲ್ಲ. ತನಿಖೆ ಬಳಿಕ ಗಂಭೀರವಾದ ಉಲ್ಲಂಘನೆಗಳು ಕಂಡುಬಂದಲ್ಲಿ ಐಪಿಸಿ ಅಡಿಯೂ ದೂರು ದಾಖಲಿಸಿಕೊಂಡು ಪರವಾನಗಿ ರದ್ಧತಿಗೆ ಶಿಫಾರಸು ಮಾಡಲಾಗುವುದು. ಅಕ್ರಮವಾಗಿ ಧಾನ್ಯಗಳನ್ನು ಶೇಖರಿಸಿ ಕೃತಕ ಅಭಾವ ಸೃಷ್ಟಿಸುವುದು, ಕಾಳಸಂತೆಯಲ್ಲಿ ಮಾರಾಟ ಮಾಡುವುದು ಮತ್ತು ಹೆಚ್ಚಿನ ಬೆಲೆಗೆ ನೀಡುವುದು ಶಿಕ್ಷಾರ್ಹ ಅಪರಾಧ. ಇಂತಹ ಬೆಳವಣಿಗೆಗಳು ಕಂಡು ಬಂದಲ್ಲಿ ಇಲಾಖೆಗೆ ತಿಳಿಸಬಹುದು. ಅವರ ಹೆಸರನ್ನು ಗೌಪ್ಯವಾಗಿ ಇಡಲಾವುದು' ಎಂದು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Food and Civil Supply department officials have seized 1750 quintal (3500 bags) finger millet in Mandya on Monday, 4th January
Please Wait while comments are loading...