• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಮಾಶ್ರೀ ಮೇಡಂ,, ನೀವು ಕಲಾವಿದರಿಗೆ ಮಾಡಿದ ಅಪಮಾನ ಸರಿಯೆ?

By ನೊಂದ ಕಲಾಭಿಮಾನಿ
|

ಮಾನ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀಯವರೇ,,, ನೀವು ಒಬ್ಬ ಕಲಾವಿದೆಯಾಗಿ ಬೆಳೆದು ಬಂದವರು. ಇಂದು ರಾಜ್ಯದ ಸಚಿವೆಯಾಗಿ ನಿಂತಿದ್ದೀರಾ, ಆದರೆ ಕಲಾವಿದರಿಗೆ ಯಾಕೆ ಅಪಮಾನ ಮಾಡಿದಿರಿ?

ಯಕ್ಷಗಾನ ಮತ್ತು ಜಾನಪದ ಕಲಾವಿದರ ಕುರಿತಾಗಿ ನೀವು ನಡೆದುಕೊಂಡಿದ್ದು ಸರಿಯೇ? ಯಕ್ಷಗಾನ ಕಲಾವಿದರಿಗೆ ಮಾಡಿದ ಅಪಮಾನವನ್ನು ರಾಜ್ಯದ ಯಾವ ಕಲಾಪ್ರೇಮಿಯೂ ಸಹಿಸಿಕೊಳ್ಳಲು ಸಾಧ್ಯವಿಲ್ಲ.[ಸಿಂಗಪುರದಲ್ಲಿ ರಸದೌತಣ ಬಡಿಸಿದ ವೈಭವದ ಯಕ್ಷಸಿರಿ]

ಸನ್ಮಾನ ಮಾಡುತ್ತೇವೆ ಬನ್ನಿ ಎಂದು ಯಕ್ಷರಂಗದ ಮೇರು ಪರ್ವತ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋವಿಂದ ಭಟ್ ಅಂಥವರನ್ನು ರಾಜಧಾನಿಗೆ ಕರೆಸಿಕೊಂಡಿದ್ದಾದರೂ ಯಾಕೆ? ಅವರಿಗೆ ಮಾಡಿದ ಅಪಮಾನ ನಿಮಗೆ ಶೋಭೆ ತರುತ್ತದೆಯೆ?

ಬುಧವಾರದಿಂದ ಐದು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿ 500 ಕ್ಕೂ ಅಧಿಕ ಕಲಾವಿದರನ್ನು ದೂರದ ಊರಿಂದ ಕರೆಸಿಕೊಂಡವರು ನೀವೆ ಅಲ್ಲವೇ, ಈಗ ಆಮಂತ್ರಣ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಹೆಸರಿಲ್ಲ, ಮತ್ತೊಬ್ಬರ ಹೆಸರಿಲ್ಲ ಎಂದು ಏಕಾಏಕಿ ಕಾರ್ಯಕ್ರಮ ರದ್ದು ಮಾಡಿದ್ದೀರಲ್ಲಾ? ಸೂಕ್ತ ಕಾರಣವನ್ನು ಕೋಡ್ತಿರಾ?[ತಮಿಳ್ನಾಡಿನಲ್ಲಿ ಕನ್ನಡ ಮಾತಾಡಿದ್ದಕ್ಕೆ ದಂಡ : ಪ್ರತಿಕ್ರಿಯೆ]

ನೀವು ಹೀಗೆ ಮಾಡುತ್ತಿರುವುದು ಇದು ಮೂರನೇ ಸಾರಿ. ಕಲಾವಿದರ ಮೇಲೆ ನಿಮಗೆ ನಿಜವಾಗಿ ಗೌರವ ಇದ್ದರೆ ಹೀಗೆ ಮಾಡುತ್ತಿರಲಿಲ್ಲ ಬಿಡಿ. ಕಾರ್ಯಕ್ರಮದ ಹಿಂದಿನ ದಿನ ಮಧ್ಯರಾತ್ರಿ ಯಕ್ಷಗಾನ ಕಲಾವಿದರಿಗೆ, ಕಾರ್ಯಕ್ರಮದ ದಿನ ಮುಂಜಾನೆ ಜಾನಪದ ಕಲಾವಿದರಿಗೆ ಕರೆ ಮಾಡಿ ಕಾರ್ಯಕ್ರಮ ರದ್ದಾಗಿದೆ ಎಂದು ಅಧಿಕಾರಿಗಳ ಕೈಯಿಂದ ತಿಳಿಸುವ ನಿಮ್ಮ ಜವಾಬ್ದಾರಿ ಎಂಥಹುದು ಎಂಬುದು ಇದೀಗ ಇಡೀ ರಾಜ್ಯಕ್ಕೆ ಗೊತ್ತಾಗಿದೆ.

ನನ್ನ ವಿನಂತಿ ಇಷ್ಟೆ, ನಿಮ್ಮ ಬಳಿ ಕರೆದು ಸನ್ಮಾನ ಮಾಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ದಯವಿಟ್ಟು ಅವಮಾನ ಮಾತ್ರ ಮಾಡಬೇಡಿ...

English summary
About 500 folk and Yakshagana artistes, who came from various parts of state to participate in Nenapinokali, a cultural programme organised to celebrate the 50th anniversary of the Ravindra Kalakshetra, were in for an unpleasant surprise on Wednesday morning with the organisers cancelling the event without any notice. The reason cited was inability of Kannada Culture Minister Umashree to attend the programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X