ಪ್ರತಾಪ್ ಗೌಡ ಯಾರ ವಶದಲ್ಲಿದ್ರು ಶೀಘ್ರವೇ ಬಹಿರಂಗ: ಡಿಕೆಶಿ

Recommended Video

      ಪ್ರತಾಪ್ ಗೌಡ ಯಾರ ವಶದಲ್ಲಿದ್ರು ಶೀಘ್ರವೇ ಬಹಿರಂಗ: ಡಿಕೆಶಿ | Oneindia Kannada

      ಬೆಂಗಳೂರು, ಮೇ 19: ಆನಂದ್​ ಸಿಂಗ್​ ಮತ್ತು ಪ್ರತಾಪ್​ ಗೌಡ ಪಾಟೀಲ್​ ಇಬ್ಬರೂ ಕಾಂಗ್ರೆಸ್​ ಜತೆಗೇ ಇರುತ್ತಾರೆ. ಇವರಿಬ್ಬರಿಗೆ ಯಾರು ಆಮಿಷವೊಡ್ಡಿದ್ದರು, ಯಾರು ಅವರನ್ನು ಹಿಡಿದಿಟ್ಟರು ಎಂಬುದು ನಂತರ ಬಹಿರಂಗಪಡಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

      ಪ್ರತಾಪ್​ ಗೌಡ ಪಾಟೀಲ್​ ಬಂದಿದ್ದಾರೆ, ಆನಂದ್​ ಸಿಂಗ್​ ಬರುತ್ತಿದ್ದಾರೆ, ಪ್ರತಾಪ್​ ಗೌಡ ಪಾಟೀಲ್​ ಹಾಗೂ ಆನಂದ್​ ಸಿಂಗ್ ಯಾರು ಅಪಹರಿಸಿದ್ದರು ಎಂದು ನಾನು ಹೇಳಲಾರೆ. ನನ್ನ ಬಾಯಿಂದ ಕೇಳಬೇಡಿ, ಎಲ್ಲರಿಗೂ ಗೊತ್ತು ಇದು ಯಾರ ಕೈವಾಡವೆಂದು ಎಂದು ಡಿಕೆ ಶಿವಕುಮಾರ್ ಅವರು ವಿಧಾನಸೌಧದ ಬಾಗಿಲ ಬಳಿ ನಿಂತು ಡಿಕೆ ಶಿವಕುಮಾರ್ ಹೇಳಿದರು.

      Floor Test : DK Sivakumar says, Anand Singh and Patil will explain later who kept them in captive later


      ಪೊಲೀಸರ ಭದ್ರತೆಯೊಂದಿಗೆ ವಿಧಾನ ಸೌಧ ತಲುಪಿದ ಪ್ರತಾಪ್​ ಗೌಡ ಪಾಟೀಲ್​, ಕೆಂಗಲ್​ ಹನುಮಂತಯ್ಯ ಬಾಗಿಲಿನ ಬಳಿ ಬಂದು ಕಾರಿನಿಂದ ಇಳಿದ ಪಾಟೀಲ್​ರನ್ನು ಒಳಗೆ ಕರೆದೊಯ್ಯಲು ಪೊಲೀಸರು ಬರುತ್ತಿದ್ದಂತೆ, ಮಾರ್ಗಮಧ್ಯದಲ್ಲಿ ತಡೆದು ಅವರ ಜೇಬಿನೊಳಗೆ ಚೀಟಿ ತುರುಕಿದರು.

      ಈ ಚೀಟಿ ವಿಪ್ ಜಾರಿ ಮಾಡಿರುವ ಚೀಟಿಯಾಗಿತ್ತು. ನಂತರ ಪ್ರತಾಪ್ ಗೌಡ ಅವರನ್ನು ಒಳಗೆ ಕರೆದೊಯ್ದು ಊಟ ಕೊಡಿಸಲಾಯಿತು.


      ಇದಾದ ಬಳಿಕ ಆನಂದ್ ಸಿಂಗ್ ಅವರಿಗೆ ಕರೆ ಮಾಡಿ ಕರೆಸಿಕೊಂಡ ಡಿಕೆ ಶಿವಕುಮಾರ್ ಅವರ ಹೆಗಲ ಮೇಲೆ ಕೈ ಹಾಕಿಕೊಂಡು ಒಳಗೆ ಕರೆದೊಯ್ದಿದ್ದಾರೆ,

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+