KRS & Kabini Dam: ಮಳೆ.. ಮಳೆ.. ಕೆಲವೇ ಕ್ಷಣಗಳಲ್ಲಿ ಕಾವೇರಿ ನದಿಗೆ 1 ಲಕ್ಷ ಕ್ಯುಸೆಕ್ ಭರ್ಜರಿ ನೀರು ರಿಲೀಸ್?

ಕೆಆರ್‌ಎಸ್, ಕಬಿನಿ, ಹೇಮಾವತಿ, ಹಾರಂಗಿ ಸೇರಿ ಕರ್ನಾಟಕದ ಕಾವೇರಿ ಕೊಳ್ಳದಲ್ಲಿ ಈಗ ಭಾರಿ ನೀರು ಹರಿದು ಬರುತ್ತಿದೆ. ಹೀಗಾಗಿ ಈ ಎಲ್ಲಾ ಜಲಾಶಯಗಳ ನೀರಿನ ಮಟ್ಟವು ಭರ್ಜರಿ ಏರಿಕೆ ಕಾಣುತ್ತಿದೆ. ಇಂತಹ ಸ್ಥಿತಿಯಲ್ಲಿ ಈಗ ದಿಢೀರ್ ಎಚ್ಚೆತ್ತುಕೊಂಡ ಅಧಿಕಾರಿಗಳು, ಕಾವೇರಿ ನದಿಗೆ ಇನ್ನೇನು ಕೆಲವೇ ಕೆಲವು ಕ್ಷಣಗಳಲ್ಲಿ 1 ಲಕ್ಷ ಕ್ಯುಸೆಕ್ ನೀರು ರಿಲೀಸ್ ಮಾಡಲು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ. ಮೈಸೂರು, ಮಂಡ್ಯ, ಹಾಸನ, ರಾಮನಗರ ಜಿಲ್ಲೆಗಳಲ್ಲಿ ಈಗ ಪ್ರವಾಹ ಭೀತಿ ಎದುರಾಗಿದೆ.

ಕರ್ನಾಟಕದಲ್ಲಿ ಈಗ ಭರ್ಜರಿ ಮಳೆ ಬೀಳುತ್ತಿರುವ ಕಾರಣಕ್ಕೆ ಜನರು ಕೂಡ ಬೆಚ್ಚಿಬಿದ್ದಿದ್ದು ಮಳೆ ಆರ್ಭಟ ಕಡಿಮೆ ಆಗಲಿ ದೇವರೆ ಅಂತಾ ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಕೆಲವೇ ಕೆಲವು ತಿಂಗಳ ಹಿಂದೆ ಅಂದ್ರೆ 2024ರ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಜನಗಳಿಗೆ ಕುಡಿಯಲು ಕೂಡ ಹನಿ ನೀರು ಸಿಗದಂತಹ ಪರಿಸ್ಥಿತಿ ಬಂದಿತ್ತು. ಆಗ ಜನ ಮಳೆ ಬರಲಿ, ಮಂಜು ಇರಲಿ ಅಂತಾ ದೇವರ ಬಳಿ ಬೇಡಿಕೆ ಇಟ್ಟಿದ್ದರು. ಆದರೆ ಈಗ ಕಳೆದ 3 ತಿಂಗಳಲ್ಲಿ ಮಳೆ ಬೀಳುತ್ತಿರುವ ರೀತಿಗೆ ಜನರು ಬೆಚ್ಚಿಬಿದ್ದಿದ್ದಾರೆ. ಅದರಲ್ಲೂ ಕಾವೇರಿ ನದಿಯ ಅಕ್ಕಪಕ್ಕ ಇರುವ ಜಿಲ್ಲೆಗಳಲ್ಲಿ ಭಾರಿ ಪ್ರವಾಹ ಭೀತಿ ಎದುರಾಗಿದೆ. ಕೆಆರ್‌ಎಸ್, ಕಬಿನಿ, ಹೇಮಾವತಿ, ಹಾರಂಗಿ ಸ್ಥಿತಿ ಏನಾಗಿದೆ ಗೊತ್ತೆ? ಮುಂದೆ ಓದಿ.

Flood Alert Given To Cauvery Basin After Heavy Rain Hits Karnataka

1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ?

ಕಬಿನಿ ಜಲಾಶಯ ಕೂಡ ಕಾವೇರಿ ನದಿಯ ಜೊತೆಗೆ ಬೆಸೆದಿದೆ. ಆದರೆ ಇದೀಗ ಕಬಿನಿ ಡ್ಯಾಂ ತುಂಬಿ ತುಳುಕುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ. ಕೇರಳ ರಾಜ್ಯದ ವಯನಾಡು ಭಾಗದ ಬಹುತೇಕ ಕಡೆ ರಣಭೀಕರ ಮಳೆ ಸುರಿದ ಪರಿಣಾಮ ಕಬಿನಿ ಜಲಾಶಯ ತುಂಬಿ ತುಳುಕಿದೆ. ಹಾಗೇ ಜಲಾಶಯಕ್ಕೆ ಈಗ ಹತ್ತಿರ ಹತ್ತಿರ 1 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಇದೇ ಕಾರಣಕ್ಕೆ ಇದೀಗ 70,000 ಕ್ಯುಸೆಕ್ ನೀರು ಹೊರಗೆ ಬಿಡಲಾಗುತ್ತಿದೆ. ಆದರೆ ಇನ್ನೇನು ಕೆಲ ಗಂಟೆಗಳಲ್ಲಿ ಈ ನೀರಿನ ಪ್ರಮಾಣ ಬರೋಬ್ಬರಿ 1 ಲಕ್ಷ ಕ್ಯುಸೆಕ್ ತಲುಪುವ ಭಯವು ಕೂಡ ಇದೀಗ ಆವರಿಸಿದೆ.

ನೀರು ಬಂತು.. ಓಡಿ.. ಓಡಿ..!

ಕೆಆರ್‌ಎಸ್ ಡ್ಯಾಂ ಕೂಡ ಇನ್ನೇನು ಪೂರ್ತಿ ತುಂಬುವ ಹಂತಕ್ಕೆ ಬಂದಿದೆ. ಕೆಆರ್‌ಎಸ್ ಈ ಸಮಯದಲ್ಲಿ ಸುಮಾರು 40 ಟಿಎಂಸಿ ನೀರನ್ನು ಹೊಂದಿದ್ದು, ಜಲಾಶಯದಲ್ಲಿ 49 ಟಿಎಂಸಿ ನೀರು ಸಂಗ್ರಹ ಮಾಡಬಹುದು ಅಷ್ಟೇ. ಆದರೆ ಕೊಡಗು & ಕೇರಳದ ವಯನಾಡು ಭಾಗಕ್ಕೆ ಭಾರಿ ಪ್ರಮಾಣದಲ್ಲಿ ಮಳೆ ಬರುತ್ತಿರುವುದು ಕಾವೇರಿ ಕೊಳ್ಳದ ಉಪನದಿಗಳಿಗೆ ಭಾರಿ ನೀರು ಹರಿದು ಬರುವಂತೆ ಮಾಡಿದೆ. ಪರಿಣಾಮ ಜನರು ಕೂಡ ಬೆಚ್ಚಿಬಿದ್ದಿದ್ದಾರೆ. ಅಲ್ಲದೆ, ನೀರು ಹೊರ ಬಿಡುತ್ತಿರುವ ಕಾರಣ ಪ್ರವಾಹದ ಬಗ್ಗೆ ಖಡಕ್ ಮುನ್ನೆಚ್ಚರಿಕೆ ಕೂಡ ನೀಡಲಾಗಿದೆ.

ಮಳೆಯಲ್ಲಿ ಮುಳುಗಿದ ಕರ್ನಾಟಕ...

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಸೇರಿ ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಕಡೆ ಮಳೆ ಅಬ್ಬರಿಸಿದೆ ಕಳೆದ ಕೆಲ ದಿನಗಳಿಂದ ನಿರಂತರ ಮುಂಗಾರು ಮಳೆ ಬೀಳುತ್ತಿರುವ ಕಾರಣ ಜನಜೀವನ ಪೂರ್ಣ ಅಸ್ತವ್ಯಸ್ಥ ಸ್ಥಿತಿಗೆ ತಲುಪಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋದ ಸಮಯದಲ್ಲೇ, ಮುಂದಿನ 48 ಗಂಟೆಗಳಲ್ಲಿ ಮತ್ತೆ ಘೋರ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ. ಅಲ್ಲದೆ ಮಲೆನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಸೇರಿದಂತೆ ಶಿವಮೊಗ್ಗ ಜಿಲ್ಲೆಗಳಿಗೆ ಅಲರ್ಟ್ ನೀಡಿದ್ದು, ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟಕ್ಕೆ ಸೇತುವೆ ಹಾಗೂ ರಸ್ತೆಗಳು ನದಿಯ ನೀರಲ್ಲಿ ಮುಳುಗಿ ಹೋಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+