‘200 ಯೂನಿಟ್ ಫ್ರೀ ಕರೆಂಟು ಕೊಟ್ಟ ಶಾಕ್‌ನ ಕತೆಯಿದು...’
ಕಾಂಗ್ರೆಸ್ ಗ್ಯಾರಂಟಿ ವಿಚಾರಗಳ ವಿರುದ್ಧ ಬಿಜೆಪಿ ತನ್ನ ಆರೋಪಗಳನ್ನ ಮುಂದುವರಿಸಿದೆ. ಅದರಲ್ಲೂ ಗೃಹಜ್ಯೋತಿ ವಿಚಾರದಲ್ಲಿ ಈಗಾಗಲೇ ಒಂದು ಸುತ್ತು ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ರಣರಂಗ ನಡೆದಿದೆ. ಈಗ ಮತ್ತೊಮ್ಮೆ ಅದೇ ಗೃಹಜ್ಯೋತಿ ವಿಚಾರ ಮುಂದಿಟ್ಟಿರುವ ಬಿಜೆಪಿ, ಕರ್ನಾಟಕ ಕಾಂಗ್ರೆಸ್ ನಾಯಕರನ್ನ ಕೆಣಕಿದೆ. ಹಾಗಾದರೆ ಕರ್ನಾಟಕದ ಜನಗಳಿಗೆ ಉಚಿತ ವಿದ್ಯುತ್ ನೀಡುವ 'ಗೃಹಜ್ಯೋತಿ' ಯೋಜನೆ ಬಗ್ಗೆ ಬಿಜೆಪಿ ಹೇಳಿದ್ದೇನು?
ಉಚಿತ ಉಡುಗೊರೆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಣರಂಗವೇ ನಡೆದು, ಎರಡೂ ಪಕ್ಷಗಳ ನಾಯಕರು ಭರ್ಜರಿ ಫೈಟ್ ಮಾಡಿದ್ದರು. ಆದರೆ ಈಗ ಪಂಚ ರಾಜ್ಯಗಳ ಚುನಾವಣೆ ವೇಳೆ, ಸ್ವತಃ ಬಿಜೆಪಿ ಮತದಾರರ ಮನಸ್ಸು ಗೆಲ್ಲಲು ಉಚಿತ ಉಡುಗೊರೆಗಳನ್ನ ತನ್ನ ಪ್ರಣಾಳಿಕೆಯಲ್ಲಿ ಘೋಷಿಸುತ್ತಿದೆ ಎಂಬ ಆರೋಪವಿದೆ. ಈ ಆರೋಪದ ನಡುವೆಯೇ ಬಿಜೆಪಿ ಮತ್ತೊಮ್ಮೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳ ವಿರುದ್ಧ ತನ್ನ ಆರೋಪದ ಪಟ್ಟಿಯನ್ನು ಮುಂದುವರಿಸಿದೆ.

ಬಿಜೆಪಿ ಹೇಳಿದ್ದು ಏನು ಗೊತ್ತಾ?
'ಗೃಹಜ್ಯೋತಿ' ಯೋಜನೆ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, '200 ಯೂನಿಟ್ ಫ್ರೀ ಕರೆಂಟು ಕೊಟ್ಟ ಶಾಕ್‌ನ ಕತೆಯಿದು. ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ಎಂದು ಚುನಾವಣೆಗೂ ಮೊದಲು ಭರವಸೆ ನೀಡಿದ್ದ @INCKarnataka ಸರ್ಕಾರ ಈಗ ವಿದ್ಯುತ್ ದರ ಏರಿಸಿ ಶಾಶ್ವತ ಹೊಡೆತ ನೀಡಿದೆ. ಕಾಕಾ ಪಾಟೀಲ್‌ಗೂ ಫ್ರೀ ಎಂದ @siddaramaiah ಅವರಿಗೆ ಇಂದು ಅದು ನೆನಪಿಲ್ಲ. ಮೈಕ್ ಮುಂದೆ ಕಿರುಚಿದ ರಾಹುಲ್ ಗಾಂಧಿಯವರ ಪತ್ತೆಯೇ ಇಲ್ಲ.' ಎಂದು ಕಾಂಗ್ರೆಸ್ ನಾಯಕರನ್ನು ಲೇವಡಿ ಮಾಡಿದೆ ಕಮಲ ಪಾಳಯ.
200 ಯೂನಿಟ್ ಫ್ರೀ ಕರೆಂಟು ಕೊಟ್ಟ ಶಾಕ್‌ನ ಕತೆಯಿದು.
— BJP Karnataka (@BJP4Karnataka) November 4, 2023
ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ಎಂದು ಚುನಾವಣೆಗೂ ಮೊದಲು ಭರವಸೆ ನೀಡಿದ್ದ @INCKarnataka ಸರ್ಕಾರ ಈಗ ವಿದ್ಯುತ್ ದರ ಏರಿಸಿ ಶಾಶ್ವತ ಹೊಡೆತ ನೀಡಿದೆ.
ಕಾಕಾ ಪಾಟೀಲ್‌ಗೂ ಫ್ರೀ ಎಂದ @siddaramaiah ಅವರಿಗೆ ಇಂದು ಅದು ನೆನಪಿಲ್ಲ. ಮೈಕ್ ಮುಂದೆ ಕಿರುಚಿದ ರಾಹುಲ್… pic.twitter.com/y6s3WYmk7o
'ರಾಜ್ಯದ ಕಾಂಗ್ರೆಸ್ ನಾಯಕರು ಈ ಕೆಳಗಿನ...'
ಬೆಳಗ್ಗೆ ಕೂಡ ಟ್ವೀಟ್ ಮಾಡಿದ್ದ ಕರ್ನಾಟಕ ಬಿಜೆಪಿ, 'ರಾಜ್ಯದ @INCKarnataka ನಾಯಕರು ಪ್ರಸ್ತುತ ಈ ಕೆಳಗಿನ ಚಿಂತೆಗಳಲ್ಲಿ ಮುಳುಗಿದ್ದಾರೆ. ▪️ಸಿಎಂ ಸಿದ್ದರಾಮಯ್ಯ - ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳುವ ಚಿಂತೆ. ▪️ ಡಿಸಿಎಂ ಡಿ. ಕೆ. ಶಿವಕುಮಾರ್ - ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಇಳಿಸುವುದು ಹೇಗೆ ಎಂಬ ಚಿಂತೆ. ▪️ ಪ್ರಿಯಾಂಕ್ ಖರ್ಗೆ - ಸಿದ್ದರಾಮಯ್ಯರವರ ಕೆ.ಇ.ಎ. ಪರೀಕ್ಷಾ ಅಕ್ರಮವನ್ನು ಸಿ.ಬಿ.ಐ. ಗೆ ವಹಿಸಿದರೆ ಏನು ಮಾಡುವುದೆಂಬ ಚಿಂತೆ. ▪️ಡಾ|| ಪರಮೇಶ್ವರ್ - ತಮ್ಮ ಸಿಎಂ ಆಸೆಗೆ ಡಿ. ಕೆ. ಶಿವಕುಮಾರ್ ತಣ್ಣೀರೆರಚಿದರೆ ಏನು ಮಾಡುವುದು ಎಂಬ ಚಿಂತೆ. ಕಾಂಗ್ರೆಸ್ ನಾಯಕರೆಲ್ಲರೂ ತಮ್ಮ ಸ್ವಾರ್ಥದ ರಾಜಕಾರಣದ ಬಗ್ಗೆ ಚಿಂತಿಸುತ್ತಿದ್ದಾರೆ ಹೊರತು ಯಾರಿಗೂ ರಾಜ್ಯದ ಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ!!' ಎಂದು ಆರೋಪ ಮಾಡಿತ್ತು.
ರಾಜ್ಯದ @INCKarnataka ನಾಯಕರು ಪ್ರಸ್ತುತ ಈ ಕೆಳಗಿನ ಚಿಂತೆಗಳಲ್ಲಿ ಮುಳುಗಿದ್ದಾರೆ.
— BJP Karnataka (@BJP4Karnataka) November 4, 2023
▪️ಸಿಎಂ ಸಿದ್ದರಾಮಯ್ಯ - ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳುವ ಚಿಂತೆ.
▪️ ಡಿಸಿಎಂ ಡಿ. ಕೆ. ಶಿವಕುಮಾರ್ - ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಇಳಿಸುವುದು ಹೇಗೆ ಎಂಬ ಚಿಂತೆ.
▪️ ಪ್ರಿಯಾಂಕ್ ಖರ್ಗೆ - ಸಿದ್ದರಾಮಯ್ಯರವರ ಕೆ.ಇ.ಎ. ಪರೀಕ್ಷಾ…
'₹508 ಕೋಟಿಯ ಭರ್ಜರಿ ಲಂಚ ಪಡೆದು...'
ಹಾಗೇ ಮತ್ತೊಂದು ಟ್ವೀಟ್ ಮಾಡಿ, '₹508 ಕೋಟಿಯ ಭರ್ಜರಿ ಲಂಚ ಪಡೆದು ಕಾಂಗ್ರೆಸ್ ಆಡಳಿತದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸಿಕ್ಕಿಬಿದ್ದಿದ್ದಾರೆ. ಇದರಲ್ಲಿ ಕರ್ನಾಟಕದ ಪಾಲು ಎಷ್ಟು ಕಳುಹಿಸಲಾಗಿತ್ತು ಎಂಬುದನ್ನೂ @INCKarnataka ಉತ್ತರಿಸಬೇಕು. ತೆಲಂಗಾಣದಲ್ಲೂ ಚುನಾವಣೆ ಘೋಷಣೆಯ ಬಳಿಕ @DKShivakumar ಆಪ್ತರ ಮನೆಯಲ್ಲೂ ಸೇರಿ ಈಗಾಗಲೇ ₹40 ಕೋಟಿಗೂ ಅಧಿಕ ಜಪ್ತಿ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಗುತ್ತಿಗೆದಾರರು ಮತ್ತು ಬಿಲ್ಡರ್‌ಗಳ ಬಳಿ ಬಚ್ಚಿಟ್ಟಿದ್ದ ನೂರು ಕೋಟಿಗೂ ಅಧಿಕ, ಜತೆಗೆ ಪಂಚರಾಜ್ಯಗಳಿಗೆ ಕಾಂಗ್ರೆಸ್ ಇನ್ನೆಷ್ಟು ಕಳಿಸಿದೆ ಎಂಬುದನ್ನು ಸಿಎಂ ಮತ್ತು ಸಿಎಂ ಆಗುವ ಅಭಿಲಾಷೆಯಲ್ಲಿರುವ ಎಲ್ಲರೂ ಮೊದಲು ಉತ್ತರಿಸಬೇಕು.' ಎಂದು ಕಾಂಗ್ರೆಸ್ ನಾಯಕರಿಗೆ ಕರ್ನಾಟಕ ಬಿಜೆಪಿ ಸವಾಲು ಹಾಕಿತ್ತು.
₹508 ಕೋಟಿಯ ಭರ್ಜರಿ ಲಂಚ ಪಡೆದು ಕಾಂಗ್ರೆಸ್ ಆಡಳಿತದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸಿಕ್ಕಿಬಿದ್ದಿದ್ದಾರೆ. ಇದರಲ್ಲಿ ಕರ್ನಾಟಕದ ಪಾಲು ಎಷ್ಟು ಕಳುಹಿಸಲಾಗಿತ್ತು ಎಂಬುದನ್ನೂ @INCKarnataka ಉತ್ತರಿಸಬೇಕು.
— BJP Karnataka (@BJP4Karnataka) November 4, 2023
ತೆಲಂಗಾಣದಲ್ಲೂ ಚುನಾವಣೆ ಘೋಷಣೆಯ ಬಳಿಕ @DKShivakumar ಆಪ್ತರ ಮನೆಯಲ್ಲೂ ಸೇರಿ ಈಗಾಗಲೇ ₹40 ಕೋಟಿಗೂ ಅಧಿಕ ಜಪ್ತಿ… pic.twitter.com/DZR4LcUtjn












Click it and Unblock the Notifications