'ಒಂದು ಹನಿ ಕಣ್ಣೀರು, ಒಂದು ನಿಮಿಷ ಮೌನ, ಒಂದು ದೃಢ ನಿರ್ಧಾರ'

ಬೆಂಗಳೂರು, ಸೆಪ್ಟೆಂಬರ್ 11 : 'ಗೌರಿ ಲಂಕೇಶ್ ಸಾವಿಗೆ ಒಂದು ಹನಿ ಕಣ್ಣೀರು, ಒಂದು ನಿಮಿಷ ಮೌನ ಹಾಗೂ ಒಂದು ದೃಢ ನಿರ್ಧಾರ' ಎಂಬ ಧ್ಯೇಯದೊಂದಿಗೆ ಸೆ.12ರಂದು ಪ್ರತಿರೋಧ ಸಮಾವೇಶ ಏರ್ಪಡಿಸಲಾಗಿದೆ. ಸೆ.5ರಂದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದಿತ್ತು.

'ನಾನು ಗೌರಿ-ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ' ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಸೆ.12ರ ಮಂಗಳವಾರ ಪ್ರತಿರೋಧ ಸಮಾವೇಶ ಆಯೋಜನೆ ಮಾಡಿದೆ. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮೈದಾನದ ತನಕ ಜಾಥಾ ನಡೆಯಲಿದ್ದು, ನಂತರ ಸಮಾವೇಶ ನಡೆಯಲಿದೆ.

Fight against Gauri Lankesh murder, mega rally on September 12, 2017

ಸಮಾವೇಶದ ಕುರಿತು ಭಾನುವಾರ ಪತ್ರಿಕಾಗೋಷ್ಠಿ ನಡೆಯಿತು. ಚಂದ್ರಶೇಖರ ಪಾಟೀಲ ಮಾತನಾಡಿ, 'ಹತ್ಯೆ ಶಬ್ದ ಇತ್ತೀಚೆಗೆ ಆಶ್ಚರ್ಯ ಉಂಟುಮಾಡುತ್ತಿಲ್ಲ. ದೇಶದ ತುಂಬಾ ಕರಾಳ ವಾತಾವರಣ ಆವರಿಸಿದೆ. ಒಡನಾಡಿಯ ಕೊಲೆಯಾಯಿತು ಎನ್ನುವುದಕ್ಕಿಂತ , ಅವರು ಪ್ರತಿಪಾದಿಸುತ್ತಿದ್ದ ಮೌಲ್ಯಗಳಿಗೆ ಅಪತ್ತು ಒದಗಿದೆ. ಅದನ್ನು ರಕ್ಷಿಸುವುದು ಹೇಗೆ? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದರು.

ಕೆ.ಮರುಳ ಸಿದ್ದಪ್ಪ ಮಾತನಾಡಿ, 'ನೇರ ಹಾಗೂ ನಿರ್ಭಯವಾಗಿ ಮಾತನಾಡುವವರನ್ನು ಹೆದರಿಸಲು ಇಂತಹ ಹತ್ಯೆ ನಡೆಯುತ್ತಿವೆ. ಮಾತನಾಡುವವರು ಬಾಯಿ ಮುಚ್ಚದಿದ್ದರೆ ಪ್ರಾಣ ತೆಗೆಯುತ್ತೇವೆ ಎಂಬ ಸಂದೇಶ ಸಾರುವ ಯತ್ನವಿದಾಗಿದೆ. ಇಂತಹ ಬೆದರಿಕೆ ತಂತ್ರ ನಡೆಯುವುದಿಲ್ಲ' ಎಂದು ಹೇಳಿದರು.

Fight against Gauri Lankesh murder, mega rally on September 12, 2017

ಎಸ್‌ಐಟಿ ಮೇಲೆ ನಂಬಿಕೆ : ಕೋಮುಸೌಹಾರ್ದ ವೇದಿಕೆಯ ಕೆ.ಎಲ್.ಅಶೋಕ್ ಮಾತನಾಡಿ, 'ಎಸ್‌ಐಟಿ ತನಿಖೆ ಬಗ್ಗೆ ನಮಗೆ ನಂಬಿಕೆ ಇದೆ. ಸಿಬಿಐ ತನಿಖೆಗೆ ನಾವು ಒತ್ತಾಯ ಮಾಡುವುದಿಲ್ಲ. ಗೌರಿ ಅವರ ತಾಯಿ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ' ಎಂದು ತಿಳಿಸಿದರು.

ಪ್ರತಿರೋಧ ಸಮಾವೇಶದಲ್ಲಿ ವಿವಿಧ ಜಿಲ್ಲೆಗಳಿಂದ ಬರುವ 50 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶಕ್ಕೆ ಸಾಹಿತಿಗಳು, ಕಲಾವಿದರು, ಹೋರಾಟಗಾರರು ಬೆಂಬಲ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+