ಫೆ.19ರಂದು ಕರ್ನಾಟಕ ಬಂದ್ ಇಲ್ಲ : ವಾಟಾಳ್ ನಾಗರಾಜ್
ಬೆಂಗಳೂರು, ಫೆಬ್ರವರಿ 17 : ಕನ್ನಡ ಚಳವಳಿ ವಾಟಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕರೆ ನೀಡಿದ್ದ ಕರ್ನಾಟಕ ಬಂದ್ ಮುಂದೂಡಲಾಗಿದೆ. ಫೆ. 19ರಂದು ಕರ್ನಾಟಕ ಬಂದ್ ನಡೆಸುವುದಾಗಿ ಅವರು ಹೇಳಿದ್ದರು.
ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ವಾಟಾಳ್ ನಾಗರಾಜ್, 'ಮಹಾಕುಂಭಮೇಳವಿದೆ ಆದ್ದರಿಂದ ಜನರಿಗೆ ತೊಂದರೆಯಾಗುತ್ತದೆ. ಆದ್ದರಿಂದ, ಕರ್ನಾಟಕ ಬಂದ್ ದಿನಾಂಕ ಮುಂದೂಡಲಾಗಿದೆ' ಎಂದು ಹೇಳಿದರು.

'ಫೆ.19ರ ಮಂಗಳವಾರ ಕರ್ನಾಟಕ ಬಂದ್ ನಡೆಸುವುದಿಲ್ಲ. ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಕರಾಳ ದಿನಾಚರಣೆ ನಡೆಸುತ್ತೇವೆ' ಎಂದು ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದ್ ತಿಳಿಸಿದರು.
ಫೆ.14ರಂದು ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಫೆ.19ರಂದು ಕರ್ನಾಟಕ ಬಂದ್‌ಗೆ ಕನ್ನಡ ಒಕ್ಕೂಟ ಕರೆ ನೀಡಿತ್ತು. ಆದರೆ, ಭಾನುವಾರ ಬಂದ್ ಮುಂದೂಡಲಾಗಿದೆ ಎಂದು ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆದಿದ್ದವು. ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ಬಂದ್ ಮುಂದೂಡಲಾಗಿದೆ ಎಂದು ಹೇಳಿದರು.











Click it and Unblock the Notifications