Seasonal Flu: ರಾಜ್ಯದಲ್ಲಿ ಮಕ್ಕಳಿಗೆ ಕಾಲೋಚಿತ ಜ್ವರದ ಭೀತಿ- ಪರೀಕ್ಷೆಗೆ ಶಾಲೆಗಳ ಸಿದ್ದತೆ ಹೇಗಿದೆ?
ರಾಜ್ಯದಲ್ಲಿ ಬೇಸಿಗೆ ಜ್ವರದ ಭೀತಿ ಹೆಚ್ಚಾಗುತ್ತಿದ್ದು ಮಕ್ಕಳ ಪರೀಕ್ಷೆಯ ಬಗ್ಗೆ ಪೋಷಕರು ಆತಂಕಗೊಂಡಿದ್ದಾರೆ. ಈ ಸಮಯದಲ್ಲಿ ಶಾಲೆಗಳ ಪರೀಕ್ಷಾ ಸಿದ್ದತೆ ಹೇಗಿದೆ ಎಂದು ತಿಳಿಯೋಣ.
ಬೆಂಗಳೂರು ಮಾರ್ಚ್ 10: ರಾಜ್ಯದಲ್ಲಿ ಕಾಲೋಚಿತ ಜ್ವರ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯದಲ್ಲಿ ತೊಂದರೆಯನ್ನುಂಟು ಮಾಡುತ್ತಿವೆ. ಹೀಗಾಗಿ ಪೋಷಕರು ತಮ್ಮ ಮಕ್ಕಳು ಪರೀಕ್ಷೆಗಳನ್ನು ತಪ್ಪಿಸಿಕೊಳ್ಳುವ ಆತಂಕದಲ್ಲಿದ್ದಾರೆ. ಹೀಗಾಗಿ ಅನೇಕ ಶಾಲೆಗಳು ಅಸ್ವಸ್ಥರಾಗಿ ಪರೀಕ್ಷೆಗಳನ್ನು ಬರೆಯಲು ಬಯಸುವ ಮಕ್ಕಳಿಗೆ ಪ್ರತ್ಯೇಕ ಕೊಠಡಿಗಳನ್ನು ಸ್ಥಾಪಿಸುವುದಾಗಿ ಹೇಳಿವೆ.
ಈ ಬಾರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಜ್ಯದ 5ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಈಗಾಗಲೇ ಆರಂಭವಾಗಿದೆ. 2023ರ ಮಾರ್ಚ್ 9 ರಿಂದ ಆರಂಭವಾದ ವಾರ್ಷಿಕ ಪರೀಕ್ಷೆಗಳು ಮಾರ್ಚ್ 17ರವರೆಗೆ ನಡೆಯಲಿವೆ. ಮಾರ್ಚ್ 21 ರಿಂದ ಮಾರ್ಚ್ 28,2023 ರವರೆಗೆ ಮೌಲ್ಯಮಾಪನ ನಡೆಯಲಿದ್ದು, ಮಾರ್ಚ್ 31 ರಿಂದ ಏಪ್ರಿಲ್ 5 ರವರೆಗೆ ಫಲಿತಾಂಶ ಸಿದ್ಧಪಡಿಸಿ, ಏಪ್ರಿಲ್ 8 ರಿಂದ ಏಪ್ರಿಲ್ 10 ರ ಮಧ್ಯೆ ಫಲಿತಾಂಶ ಪ್ರಕಟಿಸಲು ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ದಪಡಿಸಲಾಗಿದೆ.

ಆದರೆ ಈ ವೇಳೆ ಬೇಸಿಗೆ ಜ್ವರ ಹೆಚ್ಚು ಕಾಣಿಸಿಕೊಳ್ಳುತ್ತಿರುವುದರಿಂದ ಪರೀಕ್ಷೆ ಬಗ್ಗೆ ಪೋಷಕರು ಆತಂಕಗೊಂಡಿದ್ದಾರೆ. ಇದರಿಂದಾಗಿ ಆರೋಗ್ಯದ ಆಧಾರದ ಮೇಲೆ ಶಾಲೆಗೆ ಹೋಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ, ಶಾಲೆಗಳು ಆಂತರಿಕ ಮೌಲ್ಯಮಾಪನಗಳು ಮತ್ತು ಹಿಂದಿನ ಪರೀಕ್ಷೆಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗುವುದು ಹಲವು ಶಾಲೆಗಳು ಹೇಳಿಕೊಂಡಿವೆ.
"ನಾವು 5 ಮತ್ತು 8 ನೇ ತರಗತಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ಒದಗಿಸುತ್ತೇವೆ ಮತ್ತು ಅಸ್ವಸ್ಥ ವಿದ್ಯಾರ್ಥಿಗಳು ಅಲ್ಲಿಂದಲೇ ಪರೀಕ್ಷೆಗಳನ್ನು ಬರೆಯಬಹುದು. ಕೆಲ ಶಿಕ್ಷಕರೂ ಜ್ವರದಿಂದ ಬಳಲುತ್ತಿದ್ದಾರೆ. ಅದೃಷ್ಟವಶಾತ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ" ಎಂದು ಕರ್ನಾಟಕದ ಪ್ರೌಢ ಶಾಲೆ ಪ್ರಾಥಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಡಿ ಶಶಿ ಕುಮಾರ್ ಹೇಳಿದರು.

ಒಂದು ವೇಳೆ ಮಗುವಿಗೆ ಪರೀಕ್ಷೆಗಳಿಗೆ ಹಾಜರಾಗಲು ತುಂಬಾ ಅಸ್ವಸ್ಥವಾಗಿದ್ದರೆ, ಇಂತಹ ಸಮಯದಲ್ಲಿ ಹೆಚ್ಚಿನ ಶಾಲೆಗಳು ಹಿಂದಿನ ಪರೀಕ್ಷೆಗಳು ಮತ್ತು ಆಂತರಿಕ ಮೌಲ್ಯಮಾಪನಗಳ ಆಧಾರದ ಮೇಲೆ ಮಕ್ಕಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ನಿರ್ಧರಿಸಿವೆ.
"9 ಮತ್ತು 11 ನೇ ತರಗತಿಯ ಪರೀಕ್ಷೆಗಳು ಮುಗಿದಿವೆ. ನಮ್ಮ ಶಾಲೆಯು ಬೋರ್ಡ್ ಪರೀಕ್ಷಾ ಕೇಂದ್ರವಾಗಿರುವುದರಿಂದ ಇತರ ತರಗತಿಗಳಿಗೆ, ಹೆಚ್ಚಿನ ಪರೀಕ್ಷೆಗಳಿಗೆ ಕನಿಷ್ಠ ಮೂರು ದಿನಗಳ ಅಂತರವಿರುತ್ತದೆ. ಇದರಿಂದ ಮಕ್ಕಳು ಚೇತರಿಸಿಕೊಳ್ಳಲು ಸಮಯ ಸಿಗುತ್ತದೆ" ಎಂದು ವೈಟ್‌ಫೀಲ್ಡ್ ಗ್ಲೋಬಲ್ ಸ್ಕೂಲ್ ನ ಪ್ರಾಂಶುಪಾಲರಾದ ಶಾರದ ಚಂದ್ರಶೇಖರ್ ಹೇಳಿದರು.
ಕಾಲೋಚಿತ ಜ್ವರದ ಹೊರತಾಗಿ, ಚಿಕನ್ ಗುನ್ಯಾ ಪ್ರಕರಣಗಳು ಇವೆ. ನಮ್ಮ ಕೇಂದ್ರದಲ್ಲಿ ಚಿಕನ್ ಗುನ್ಯಾದಿಂದ ಬಳಲುತ್ತಿರುವ ಇತರ ಶಾಲೆಗಳ ಇಬ್ಬರು ಮಕ್ಕಳಿದ್ದಾರೆ. ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿಯಿಂದಲೇ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಪ್ರಮುಖ ಪೂರ್ವ ಬೆಂಗಳೂರಿನ CBSE ಶಾಲೆಯ ಪ್ರಾಂಶುಪಾಲರು ಹೇಳಿದರು.
ಹೀಗಾಗಿ ಪರೀಕ್ಷೆಗೆ ಆತಂಕ ಪಡುವ ಅನಾರೋಗ್ಯ ವಿದ್ಯಾರ್ಥಿಗಳ ಕಾಳಜಿಯ ದೃಷ್ಟಿಯಿಂದ ಶಾಲೆಗಳಲ್ಲಿ ಕೆಲ ವ್ಯವಸ್ಥೆಗಳನ್ನು ಮಾಡಲಾಗಿದೆ.












Click it and Unblock the Notifications