ಮಳೆರಾಯನ ಮುನಿಸು; 2023ರ ಬರದ ಸ್ಥಿತಿ ಮತ್ತೆ ಮರುಕಳಿಸುತ್ತಾ: ಆತಂಕದಲ್ಲಿ ಅನ್ನದಾತ
2023 ಕರ್ನಾಟಕದ ಪಾಲಿಗೆ ಅತ್ಯಂತ ದುರದೃಷ್ಟಕರ ವರ್ಷ. ಮುಂಗಾರು ಮಳೆ ಸರಿಯಾಗಿ ಬೀಳದೆ ರೈತ ರೋಸಿ ಹೋಗಿದ್ದು, ಬರ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೇ ತಿಂಗಳ ಕೊನೆಯಲ್ಲೇ ಮಳೆರಾಯನ ಆಗಮನಕ್ಕಾಗಿ ಆಕಾಶದತ್ತ ಮುಖ ಮಾಡಿ ಕುಳಿತಾ ರೈತ ಸಮುದಾಯದ ನಿರೀಕ್ಷೆ ಕಣ್ಣೀರಾಗಿ ಹೋಗಿದೆ. ರೈತರಿಗೆ ಮಳೆ ಕೈಕೊಟ್ಟರೆ ಬದುಕಿನ ರಥವೇ ಮುಂದೆ ಸಾಗುವುದಿಲ್ಲ. ಕಳೆದ ವರ್ಷ ಬರ ಪರಿಸ್ಥಿತಿ ಮನುಕುಲ ಮಾತ್ರವಲ್ಲದೇ ಪ್ರಾಣಿ ಸಂಕುಲದ ಮೇಲು ತೀವ್ರ ಪರಿಣಾಮ ಬೀರಿದೆ
ಹೌದು, ಕಳೆದ ಜೂನ್‌ನಲ್ಲಿ ಬರಬೇಕಿದ್ದ ಮಳೆ ಬಾರದೆ, ಜುಲೈನಲ್ಲಿ ಸ್ವಲ್ಪ ಬಂದು, ಆಗಸ್ಟ್‌ನಲ್ಲಿ ಪೂರ್ತಿ ಮರೆಯಾಗಿ ಬಿಟ್ಟಿತ್ತು. ಹೀಗಾಗಿ ಬೆಳೆಗಳು ನೀರಿಲ್ಲದೇ ನಾಶವಾಗಿವೆ. ಅನೇಕ ಕಡೆ ಮಳೆಯಾಗದ ಹಿನ್ನಲೆ ರೈತರು ಒಣಗಿದ ಪೈರನ್ನು ನಾಶಪಡಿಸಿ ಕಣ್ಣೀರಿಟ್ಟಿದ್ದಾರೆ. 2023 ರಲ್ಲಿ ಮುಂಗಾರು ತಡವಾದುದು ಮಾತ್ರವಲ್ಲದೆ, ತಡವಾಗಿ ಬಂದರೂ ಸರಿಯಾಗಿ ಸುರಿದಿಲ್ಲ. ಮಳೆ ಇಲ್ಲದೆ ಹಲವು ಕಡೆ ಬರ ಆವರಿಸಿ, ಹಲವು ಜಲಾಶಯಗಳಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಅಲ್ಲದೇ ಡೆ ಕುಡಿಯುವುದಕ್ಕೂ ನೀರಿಲ್ಲದ ಪರಿಸ್ಥಿತಿಯನ್ನ ಇಂದಿಗೂ ಎದುರಿಸುವಂತಾಗಿದೆ.

ಇನ್ನೂ ಆರಂಭದ ಮುಂಗಾರು ಕೈ ಕೊಟ್ಟ ಮೇಲೆ, ಹಿಂಗಾರು ಮಳೆಯಾದ್ರೂ ರೈತನ ಬದುಕಿಗೆ ಆಸರೆಯಾಗುತ್ತಾ ಎನ್ನುವ ನಿರೀಕ್ಷೆ ಮತ್ತೆ ಹುಸಿಯಾಯ್ತು. ಆಗಸ್ಟ್ , ಸೆಪ್ಟೆಂಬರ್ ನಲ್ಲಿಯೂ ಮಳೆಯಾಗದೇ ಬರ ಪರಿಸ್ಥಿತಿ ತೀವ್ರ ಹೆಚ್ಚಾಯ್ತು, ಮಳೆ ನಂಬಿದ ರೈತರಿಗೆ ಮೋಸ ಮಾಡಿತ್ತು. ಹೀಗಾಗಿ ಬರಪೀಡಿತ ತಾಲೂಕುಗಳ ನೆರವಿಗೆ ರಾಜ್ಯ ಸರ್ಕಾರ ಧಾವಿಸಿತ್ತು. 195 ಕ್ಕೂ ಹೆಚ್ಚು ತಾಲೂಕುಗಳನ್ನ ಬರ ಪೀಡಿತ ತಾಲೂಕುಗಳಾಗಿ ಸರ್ಕಾರ ಆದೇಶ ಹೊರಡಿಸಿತ್ತು. ಇನ್ನೂ ಬರ ಪೀಡಿತ ತಾಲೂಕುಗಳಿಗೆ ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆ ಅಡಿ ಹಣದ ಬದಲು 10 ಕೆಜಿ ಅಕ್ಕಿಯನ್ನು ನೀಡಿತ್ತು.
ಮಳೆ ದುರ್ಬಲಗೊಂಡಿದರಿಂದ ಮಳೆಯನ್ನೇ ನೆಚ್ಚಿಕೊಂಡು ಉಳುಮೆ ಮಾಡಿದ್ದವರು ಕಂಗಾಲಾಗಿ ಭೂಮಿಗೆ ಬಿತ್ತಿದ್ದ ಬೀಜ, ಗೊಬ್ಬರಕ್ಕೆಲ್ಲ ಖರ್ಚು ಮಾಡಿದ ಹಣ ವ್ಯರ್ಥವಾಗಿ, ಪರಿಹಾರದ ಹಣಕ್ಕಾಗಿ ಸರ್ಕಾರತದತ್ತ ರೈತರು ನೋಡುತ್ತಿದ್ರು. 2023 ರಲ್ಲಿ ಮಾತ್ರವಲ್ಲ ಹಿಂದಿನ ಮೂರು ವರ್ಷವೂ ಸಹ ಇದೆ ಪರಿಸ್ಥಿತಿಯನ್ನ ರೈತರು ಅನುಭವಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ, ಬೆಳೆ ಇಲ್ಲದೇ ಅದೆಷ್ಟೋ ಜನರು ಗುಳೆ ಹೋಗಿದ್ರೆ, ಇನ್ನು ಕೆಲವು ಕಡೆ ದುಡಿಮೆಗಾಗಿ ಪಟ್ಟಣಗಳತ್ತ ವಲಸೆ ಹೋಗಿದ್ರು.

ಮುಂಗಾರು ಮಳೆ ಸರಿಯಾಗಿ ಆಗದ ಹಿನ್ನೆಲೆ ಬಿತ್ತನೆ ವಿಳಂಬವಾಗಿ ಆಹಾರ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಈಗಾಗಲೇ ಮಳೆ ಇಲ್ಲದ ಪರಿಣಾಯ ಸಾಕಷ್ಟು ಸಮಸ್ಯೆ ಅನುಭವಿಸಿರುವ ರೈತ ಸಮೂಹ ಮುಂದಿನ ಮುಂಗಾರಿನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ರಾಜ್ಯದ ಹಲವು ಕಾರ್ಣಿಕಗಳು ರಾಜ್ಯದಲ್ಲಿ ಉತ್ತಮ ಮಳೆ ಹಾಗೂ ಬೆಳೆಗಳು ಸಮೃದ್ಧಿಯಾಗಿ ಬರಲಿದೆ ಎಂದು ಭವಿಷ್ಯವಾಣಿ ನುಡಿದಿದ್ದು, ಈ ಕಾರ್ಣಿಕದಲ್ಲಿ ನುಡಿದ ಭವಿಷ್ಯ ವಾಣಿ ಹಾಗೂ ಹವಾಮಾನ ಇಲಾಖೆ ನೀಡಿದ ಸೂಚನೆಯಂತೆ ಈ ವರ್ಷ ಮುಂಗಾರು ಉತ್ತಮವಾಗುವ ನಿರೀಕ್ಷೆ ಇದೆ.
ಒಟ್ನಲಿ, ಕಳೆದ ಮೂರು ವರ್ಷಗಳಿಂದ ದೇಶದ ಬೆನ್ನೆಲುಬಾಗಿರುವ ರೈತ ಸಾಕಷ್ಟು ಸಮಸ್ಯೆ ಹಾಗೂ ಸವಾಲುಗಳನ್ನ ಎದುರಿಸುತ್ತಿದ್ದು, ರೈತನ ನಿರೀಕ್ಷೆಯಂತೆ ಈ ವರ್ಷ ಉತ್ತಮ ಮಳೆಯಾದರೇ ರೈತರ ಬದುಕು ಹಸನಾಗಿಲಿ. ಕಳೆದ ವರ್ಷದಲ್ಲಿ ರೈತ ಮಳೆ ಇಲ್ಲದೇ ಕಳೆದ ಆತಂಕ ಈ ಬಾರೀ ದೂರವಾಗಲಿ ಎಂಬುದೇ ನಮ್ಮ ಆಶಯ.












Click it and Unblock the Notifications