ಮಲೆನಾಡಲ್ಲಿ ಬಿಡುವು ಕೊಡದ ಮಳೆರಾಯ: ಕಂಗಲಾದ ರೈತರು

Recommended Video

      ಮಲೆನಾಡಲ್ಲಿ ಬಿಡುವು ಕೊಡದ ಮಳೆರಾಯ: ಕಂಗಲಾದ ರೈತರು | Oneindia Kannada

      ಚಿಕ್ಕಮಗಳೂರು, ಜುಲೈ.13: ಮಲೆನಾಡಿನಲ್ಲಿ ಗುರುವಾರ ಸಂಜೆ ನಾಲ್ಕು ಗಂಟೆಗೆ ಆರಂಭವಾದ ವರುಣನ ಅಬ್ಬರ ಇನ್ನೂ ನಿಂತಿಲ್ಲ. ಬೆಳಗ್ಗೆಯಿಂದ ಇಡೀ ದಿನ ಬಿಡುವು ನೀಡಿದ್ದ ಮಳೆರಾಯ ಮಲೆನಾಡಿನ ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು, ಕಳಸ, ಕುದುರೆಮುಖ ಭಾಗದಲ್ಲಿ ಇಡೀ ರಾತ್ರಿ ಸುರಿದಿದ್ದಾನೆ.

      ಮಳೆಯ ಪ್ರಮಾಣ ಹೆಚ್ಚಿದ್ದರಿಂದ ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಎನ್.ಆರ್.ಪುರ ತಾಲೂಕಿನ ಮಳೆಯ ಪ್ರಮಾಣ ಕಡಿಮೆಯಾದ ಪರಿಣಾಮ ತಾಲೂಕಿನಲ್ಲಿ ಭದ್ರಾ ನದಿ ಹರಿಯೋ ಬಾಳೆಹೊನ್ನೂರು ಭಾಗದಲ್ಲಿನ ನದಿಪಾತ್ರದ ಶಾಲೆ-ಕಾಲೇಜುಗಳಿಗೆ ಮಾತ್ರ ರಜೆ ನೀಡಲಾಗಿದೆ.

      ಇನ್ನು ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಾಲ್ಕು ವರ್ಷಗಳ ಬಳಿಕ ತುಂಬಿದ ತಾವರೆಕೆರೆ ಬಿರುಕು ಬಿಟ್ಟಿದ್ದು, ಕೆರೆ ನೀರೆಲ್ಲಾ ತೋಟದತ್ತ ನುಗ್ಗುತ್ತಿದೆ. ಇದರಿಂದ ಸುತ್ತಮುತ್ತಲಿನ ತೋಟದವರು ಆತಂಕಕ್ಕೀಡಾಗಿದ್ದಾರೆ.

      Farmers are afraid of crop damage in Chikmagalur

      ದಿನೇ-ದಿನೇ ಮಳೆಯ ಪ್ರಮಾಣ ಹೆಚ್ಚುತ್ತಿರುವುದರಿಂದ ಕಾಫಿ, ಅಡಿಕೆ, ಮೆಣಸಿಗೆ ಕೊಳೆ ರೋಗ ಕೂಡ ಹೆಚ್ಚಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

      ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ತರೀಕೆರೆ ಪಟ್ಟಣದಲ್ಲಿ ಎರಡು ಮನೆಗಳ ಗೋಡೆ ಕುಸಿದಿದೆ. ಒಂದೇ ರಸ್ತೆಯಲ್ಲಿರುವ ಅಕ್ಕಪಕ್ಕದ ಎರಡು ಮನೆಗಳ ಗೋಡೆ ಕುಸಿದಿದೆ.

      ಶೃಂಗೇರಿಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶೃಂಗೇರಿ ತಾಲೂಕಿನ ನದಿಪಾತ್ರ, ತಗ್ಗುಪ್ರದೇಶ ಹಾಗೂ ಪ್ರವಾಹ ಪೀಡಿತ ಪ್ರದೇಶದ ಶಾಲೆಗಳಿಗೆ ರಜೆ ನೀಡುವ ಅಧಿಕಾರವನ್ನು ಬಿಇಓ ಉಮೇಶ್ ಶಾಲೆಯ ಆಡಳಿತ ಮಂಡಳಿಗೆ ವಹಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+