ಸಾಲ ಮನ್ನಾಕ್ಕೆ ಮೋದಿ, ಬಿಎಸ್‌ವೈಗೆ ಪತ್ರ ಬರೆದು ರೈತ ಆತ್ಮಹತ್ಯೆ
ಬಾಗಲಕೋಟೆ, ಅಕ್ಟೋಬರ್ 15 : ಸಾಲಬಾಧೆಯಿಂದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 8 ಎಕರೆ ಜಮೀನಿನಲ್ಲಿ ಕಬ್ಬು, ಈರುಳ್ಳಿ ಬೆಳೆದಿದ್ದ ರೈತ ಸುಮಾರು 20 ಲಕ್ಷ ರೂ. ಸಾಲ ಮಾಡಿಕೊಂಡಿದ್ದ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ನಾಗನಾಪುರದ ರೈತ ಈರಪ್ಪ (50) ಆತ್ಮಹತ್ಯೆ ಮಾಡಿಕೊಂಡವರು. ಊರ ಹೊರವಲಯದಲ್ಲಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರು: ಸಾಲ ಕಟ್ಟಲಾಗದೆ ಕೆ.ಆರ್.ನಗರದಲ್ಲಿ ರೈತ ಆತ್ಮಹತ್ಯೆ

ಈರಪ್ಪ 8 ಎಕರೆ ಜಮೀನು ಹೊಂದಿದ್ದಾರೆ. ಕಬ್ಬು ಮತ್ತು ಈರುಳ್ಳಿ ಬೆಳೆದಿದ್ದರು. ಸರಿಯಾಗಿ ಬೆಳೆ ಬಾರದೇ ಹಾನಿಗೊಳಗಾಗಿತ್ತು. ಇತ್ತ ಬೆಳೆಸಾಲ ಸೇರಿ ವಿವಿಧ ಕೃಷಿ ಚಟುವಟಿಕೆಗಳಿಗೆ ಸುಮಾರು 20 ಲಕ್ಷ ರೂ. ಸಾಲ ಮಾಡಿದ್ದರು. ಸಾಲ ತೀರಿಸೋದು ಹೇಗೆ? ಎಂಬ ಚಿಂತೆಯಿದ ಈರಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್, ವಿಜಯಾ ಬ್ಯಾಂಕ್, ಕೆವಿಜೆ ಬ್ಯಾಂಕ್ ಸೇರಿ ಹಲವೆಡೆ ಸಾಲ ಪಡೆದಿದ್ದು. ಬೆಳೆ ಕೈ ಕೊಟ್ಟ ಮೇಲೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಸಾಲ ಮತ್ತು ಬಡ್ಡಿ ಮನ್ನಾ ಮಾಡುವಂತೆ ಪ್ರಧಾನಿ ಮೋದಿ, ಮಾಜಿ ಸಿಎಂ ಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಗೂ ಪತ್ರ ಬರೆದಿದ್ದರು.
ರೈತ ಈರಪ್ಪನ ಪತ್ರಕ್ಕೆ ಯಾವ ನಾಯಕರು ಉತ್ತರ ಕೊಟ್ಟಿರಲಿಲ್ಲ. ದಿನ ಕಳೆದಂತೆ ಬಡ್ಡಿ ಹೆಚ್ಚಾಗ ತೊಡಗಿತ್ತು. ಇದರಿಂದ ತೀವ್ರನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications