ಮಂಡ್ಯ: ರೇಷ್ಮೆ ಬೆಳೆ ರೈತನ ಬದುಕನ್ನು ಬಂಗಾರವಾಗಿಸಿಲ್ಲ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ, ಡಿಸೆಂಬರ್, 07: ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ. ರೈತರಲ್ಲಿ ಆತ್ಮಹತ್ಯೆ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸರ್ಕಾರ ಮಾಡಿದರೂ ಯಾವುದೇ ಪ್ರಯೋಜನವಾದಂತೆ ಕಂಡುಬರುತ್ತಿಲ್ಲ.

ಮಂಡ್ಯ ಜಿಲ್ಲೆಯ ಹಲಗೂರು ಸಮೀಪದ ಯತ್ತಂಬಾಡಿ ಗ್ರಾಮದ ವಾಸಿ ತಮ್ಮಯ್ಯ (40) ಸಾಲಬಾಧೆ ತಾಳಲಾರದೆ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಅಜ್ಜನ ನಿಧನದಿಂದ ಬೇಸತ್ತ ಮೊಮ್ಮಗಳು ಬೆಂಕಿಗೆ ಆಹುತಿ]

 A farmer commits suicide at Mandya

3 ಎಕರೆ ಜಮೀನು ಹೊಂದಿದ್ದ ತಮ್ಮಯ್ಯ 1ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. 3 ಎಕರೆ ಜಮೀನಿನಲ್ಲಿ ರೇಷ್ಮೆ ಬೆಳೆ ಬೆಳೆದಿದ್ದ ಅವರು ಅದು ಕೈಹಿಡಿಯದೆ ನಷ್ಟ ಅನುಭವಿಸಿದ್ದರಲ್ಲದೆ, ಜೀವನ ನಿರ್ವಹಣೆಗಾಗಿ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಸಾಧ್ಯವಾಗದ ತಮ್ಮಯ್ಯ ಅವರು ಬೇರೆ ದಾರಿ ಕಾಣದೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಪತ್ನಿ ಹಾಗೂ ನಾಲ್ಕು ಮಕ್ಕಳನ್ನು ಅಗಲಿದ್ದಾರೆ.[ಸ್ನಾನದ ಮನೆಯಲ್ಲಿ ಉಸಿರುಗಟ್ಟಿ ತಾಯಿ, ಮಗು ಸಾವು]

ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ಮಾಡಿದ ಸಾಲವನ್ನು ತೀರಿಸುವ ಹಾದಿ ಹುಡುಕಿ ಪರಿಹಾರ ಕಂಡು ಕೊಳ್ಳುವ ನಿರ್ಧಾರ ಮಾಡದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ವಿಷಾದದ ಸಂಗತಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A farmer Tammayya( 40) committed suicide at Yattangady Village, Mandya on Monday, December 07th.
Please Wait while comments are loading...