ಮತ್ತೆ ಮೊಳಗಿದ ಮುಂದಿನ ಸಿಎಂ ಘೋಷಣೆ: ʼಮುಂದಿನ ಸಿಎಂ ಡಿ ಕೆ ಶಿವಕುಮಾರ್‌ʼ

ಬೆಂಗಳೂರು, ಅಕ್ಟೋಬರ್‌ 09: ರಾಜ್ಯ ರಾಜಕೀಯದಲ್ಲಿ ಮುಡಾ ಹಗರಣ ಸಾಕಷ್ಟು ಸದ್ದು ಮಾಡುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಡ ಕೇಳಿ ಬರುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ನಮ್ಮ ನಾಯಕರೇ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಘೋಷಣೆ ಕೂಗುತ್ತಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ದೆಹಲಿಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನ ದಲಿತ ನಾಯಕ ಸತೀಶ್‌ ಜಾರಕಿಹೊಳಿ ಭೇಟಿ ಮಾಡಿ ಸುದೀಘ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಹೈಕಮಾಂಡ್‌ ನಾಯಕರನ್ನ ಭೇಟಿಯಾದ ಬೆನ್ನಲ್ಲೇ ಹಲವು ದಲಿತ ನಾಯಕರನ್ನ ಸತೀಶ್‌ ಜಾರಕಿಹೊಳಿ ಭೇಟಿ ಮಾಡಿದ್ದಾರೆ. ತುಮಕೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿಯೂ ಮುಂದಿನ ಸಿಎಂ ಸತೀಶ್‌ ಜಾರಕಿಹೊಳಿ ಅವರೇ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಇದಾದ ಬೆನ್ನಲ್ಲೇ ಮುಂದಿನ ಸಿಎಂ ಡಿ ಕೆ ಶಿವಕುಮಾರ್‌ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.

Fans Announce That DK Shivakumar Will Be The Next CM

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸಿಂಧನೂರಿನಿಂದ ಆಗಮಿಸಿದ್ದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್‌ ಅವರು ಕಾರು ಹತ್ತಲು ಹೊರಡುತ್ತಿದ್ದಂತೆಯೇ ಮುಂದಿನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಈ ವೇಳೆ ಕಾರು ಹತ್ತಿ ಡಿ ಕೆ ಶಿವಕುಮಾರ್‌ ಅವರು ಕೈ ಬೀಸಿದ್ದಾರೆ. ಈ ವೇಳೆ ಯಾರು ತಮ್ಮ ಕಾರನ್ನು ಫಾಲೋ ಮಾಡದಿರುವಂತೆ ಡಿ ಕೆ ಶಿವಕುಮಾರ್‌ ತಾಕೀತು ಮಾಡಿದ್ದಾರೆ.

ತುಂಗಾಭದ್ರ ಅಣೆಕಟ್ಟು ಗೇಟ್ ಬದಲಿಗೆ ಕ್ರಮ: ಡಿಕೆಶಿ

ನಮ್ಮ ತಜ್ಞರ ಸಮಿತಿಯು ಈ ಅಣೆಕಟ್ಟಿನ ಗೇಟ್ ಗಳ ಬದಲಾವಣೆ ಮಾಡಬೇಕು ಎಂದು ವರದಿ ನೀಡಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಮಂತ್ರಿಗಳು, ಸಂಸದರು, ಶಾಸಕರ ಜತೆ ಚರ್ಚೆ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಎಲ್ಲಾ ಗೇಟ್ ಗಳನ್ನು ಪರಿಶೀಲನೆ ಮಾಡಿ, ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಬಳಿಕ ಒಂದೊಂದೇ ಗೇಟ್ ಗಳನ್ನು ಬದಲಾವಣೆ ಮಾಡುತ್ತೇವೆ. ಆ ಮೂಲಕ ಈ ಅಣೆಕಟ್ಟು, ರೈತರ ಬದುಕು ಉಳಿಸಲು ಈ ಸರ್ಕಾರ ಹಾಗೂ ಡಿ.ಕೆ. ಶಿವಕುಮಾರ್ ಮಾಡಲಿದ್ದಾರೆ ಎಂದು ತಿಳಿಸಿದರು.

ನಿಮ್ಮ ಸಂಬಂಧಗಳನ್ನು ಬೆಸೆಯುವ ಪವಿತ್ರವಾದ ಆಚರಣೆಯೇ ದಸರಾ. ರಾಜಕಾರಣ ನಮ್ಮ ಆಚಾರ ವಿಚಾರ ಬದಿಗೊತ್ತಿ, ಈ ಪವಿತ್ರವಾದ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮವಾಗಿದೆ. ಕಲ್ಯಾಣ ಕರ್ನಾಟಕಕ್ಕೆ ಮಾದರಿಯಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೀರಿ. ಪಕ್ಷಬೇಧ ಮರೆತು ವಿರೂಪಾಕ್ಷಪ್ಪ, ಮಾಜಿ ಸಚಿವರಾದ ನಾಡಗೌಡ ಹಾಗೂ ರೈತ ಮುಖಂಡರು ನಮ್ಮ ಶಾಸಕರು ಸಹಿ ಮಾಡಿ ತುಂಗಭದ್ರಾ ಯೋಜನೆಯ ಸಾಧಕ, ಬಾಧಕಗಳ ಅರ್ಜಿ ನೀಡಿದ್ದಾರೆ. ನಾನು ಈ ಅರ್ಜಿ ಯಲ್ಲಿರುವ ಸಲಹೆಗಳ ಬಗ್ಗೆ ಸಭೆ ಕರೆದು ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

ತುಂಗಾಭದ್ರ ಅಣೆಕಟ್ಟು ನಿರ್ಮಾಣ ಮಾಡಿ 70 ವರ್ಷ ಕಳೆದಿವೆ. ಈ ಅಣೆಕಟ್ಟಿನ ಒಂದು ಗೇಟ್ ಕಿತ್ತುಹೋಯಿತು. ಇದನ್ನು ಒಂದು ವಾರದಲ್ಲಿ ದುರಸ್ತಿ ಮಾಡಬೇಕು ಎಂಬ ಸಂಕಲ್ಪ ಮಾಡಿದ ನಿರ್ಧಾರ ಮಹತ್ವದ್ದಾಗಿತ್ತು. ವಿರೋಧ ಪಕ್ಷದ ನಾಯಕರಾದ ಅಶೋಕ್ ಹಾಗೂ ವಿಜಯೇಂದ್ರ ಅವರು ಆ ಸಂದರ್ಭದಲ್ಲಿ ಅನೇಕ ಟೀಕೆ ಮಾಡಿದ್ದರು. ಆಗ ನಾನು ನೀವು ಏನಾದರೂ ಟೀಕೆ ಮಾಡಿ, ಟೀಕೆ ಸಾಯುತ್ತವೆ, ಕೆಲಸ ಉಳಿಯುತ್ತವೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+