Passportಗೆ ಬೆಂವಿವಿ ನಕಲಿ ಸರ್ಟಿಫಿಕೇಟ್: ಪತ್ರಕರ್ತ ಸೆರೆ

ಆದರೆ ಈ ಪತ್ರಕರ್ತ ಕೇರಳ ಮೂಲದವ. ಅದೂ ವಲಸೆ ಅಧಿಕಾರಿಗಳ ಮುಂದೆ immigration clearance ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿದ್ದಾನೆ. ಕೋಳಿಕ್ಕೋಡ್ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಯಲ್ಲಿ ವರ್ತಮಾನದ ಪ್ರಕಾರ ಕೊಚ್ಚಿಯ ಖ್ಯಾತ ಟಿವಿ ಚಾನೆಲ್ ಮಾಧ್ಯಮ ಪ್ರತಿನಿಧಿ ದೀಪಕ್ ಕಲಾಥಿಲ್ ಎಂಬ ವ್ಯಕ್ತಿ ನಕಲಿ ಸರ್ಟಿಫಿಕೇಟ್ ಕೊಟ್ಟು ಸಿಕ್ಕಿಹಾಕಿಕೊಂಡಿದ್ದಾನೆ. ಈತ ಕಣ್ಣೂರು ಜಿಲ್ಲೆಯ ಧರ್ಮಾದಂ ನಿವಾಸಿ.
ಅಂದಹಾಗೆ ಆರೋಪಿ ದೀಪಕ್ ಕಲಾಥಿಲ್ BA (History, Economics ಮತ್ತು Political Science) ಪದವಿ ಮತ್ತು ಅಂಕಪಟ್ಟಿ (ಸಂಖ್ಯೆ 03BGA01066)ಯನ್ನು ವಲಸೆ ಅಧಿಕಾರಿಗಳಿಗೆ ತೋರಿಸಿದ್ದಾನೆ. ಆದರೆ Kozhikode Regional Passport Office ಅಧಿಕಾರಿಗಳು ಕ್ರಾಸ್ ವೆರಿಫಿಕೇಶನಿಗೆಂದು ಜೆರಾಕ್ಸ್ ಕಾಪಿಗಳನ್ನು ಬೆಂಗಳೂರು ಯೂನಿವರ್ಸಿಟಿಗೆ ಸೆ. 3ರಂದು ಕಳಿಸಿಕೊಟ್ಟಿದ್ದಾರೆ.
ಆಗ ದೀಪಕನ ಜಾತಕ ಬಯಲಾಗಿದೆ. ಅಂಥಾ ಸರ್ಟಿಫಿಕೇಟ್ ನಾವು ಕೊಟ್ಟೇ ಇಲ್ಲ. ದೀಪಕ್ ಕಲಾಥಿಲ್ ಬಗ್ಗೆ ನಮ್ಮಲ್ಲಿ ಮಾಹಿತಿಯಿಲ್ಲ. ಒರಿಜಿನಲ್ಸ್ ಚೆಕ್ ಮಾಡಿ ಎಂದು ಬೆಂಗಳೂರು ವಿವಿ ಅಧಿಕಾರಿಗಳು ತಕ್ಷಣ ಮಾರುತ್ತರ ನೀಡಿದ್ದಾರೆ.
ಅಷ್ಟು ಹೇಳಿದ್ದೇ ತಡ Indian Passport (IP) Act ಮತ್ತು Indian Penal Code (IPC) ಅನುಸಾರ ನಾನಾ ಸೆಕ್ಷೆನ್ನುಗಳಡಿ ದೀಪಕ್ ಕಲಾಥಿಲ್ ವಿರುದ್ಧ ಪೊಲೀಸ್ ಕೇಸು ದಾಖಲಿಸಿದ್ದಾರೆ. ಪೊಲೀಸರು ದೀಪಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications