ಆನೇಕಲ್ : ಪೂಜೆ ನೆಪದಲ್ಲಿ 7 ಲಕ್ಷ ದೋಚಿದ ನಕಲಿ ಬಾಬಾ
ಬೆಂಗಳೂರು, ನವೆಂಬರ್ 22 : ರೋಗ ಗುಣ ಪಡಿಸುತ್ತೇನೆ ಎಂದು ಮನೆಗೆ ಬಂದ ನಕಲಿ ಬಾಬಾ 7 ಲಕ್ಷ ಹಣ ದೋಚಿದ ಘಟನೆ ಆನೇಕಲ್‌ನಲ್ಲಿ ನಡೆದಿದೆ. ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರ್ಛೆ ರೋಗ ಗುಣಪಡಿಸುವುದಾಗಿ ನಕಲಿ ಬಾಬಾ ಕಿತ್ತಗಾನಹಳ್ಳಿಯ ನಿವಾಸಿ ಕೃಷ್ಣಮೂರ್ತಿ, ಲಕ್ಷ್ಮೀ ದೇವಿ ಅವರ ಮನೆಗೆ ಬಂದಿದ್ದ. ಮನೆಯಲ್ಲಿ ಪೂಜೆಯನ್ನು ನಡೆಸಿದ್ದ.

ಪೂಜೆಯ ಬಳಿಕ ಮನೆಯವರಿಗೆ ಮತ್ತು ಬರುವ ಔಷಧಿ ನೀಡಿದ್ದಾನೆ. ನಂತರ ಮನೆಯಲ್ಲಿದ್ದ 7 ಲಕ್ಷ ಹಣ, ಚಿನ್ನ ದೋಚಿ ಪರಾರಿಯಾಗಿದ್ದಾನೆ.
ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ನಕಲಿ ಬಾಬಾ ಅಕ್ಕದ ಆಂಧ್ರಪ್ರದೇಶ ರಾಜ್ಯದಿಂದ ಬಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.












Click it and Unblock the Notifications